ಹೊನ್ನಾಳಿ: ದೇಶದ ಪ್ರತಿಯೊಬ್ಬ ಪ್ರಜೆಗೂಕಾನೂನಿನ ಅರಿವು ಇರಬೇಕು ಎಂದು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಕೆ. ನಟರಾಜನ್‌ಹೇಳಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ ದಾವಣಗೆರೆ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಸಂಯಕ್ತಾಶ್ರಯದಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಸಂತಸೇವಾಲಾಲರ ಜನ್ಮಸ್ಥಳವಾದ ಬಾಯಘಡ್‌ನಲ್ಲಿಶನಿವಾರ ಹಮ್ಮಿಕೊಂಡಿದ್ದ ತಾಂಡಾ ನಿಗಮದ ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯ ಮಟ್ಟದ ಎರಡುದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿಅವರು ಮಾತನಾಡಿದರು.
ಕಾನೂನು ಅರಿವು ಇರಬೇಕಾದರೆ ಎಲ್ಲರೂವಿದ್ಯಾವಂತರಾಗಬೇಕು. ಶಿಕ್ಷಣ ಪಡೆಯದಿದ್ದಲ್ಲಿಕಾನೂನಿನ ಅರಿವು ಪಡೆಯಲು ಸಾಧ್ಯವಾಗುವುದಿಲ್ಲ.ಶಿಕ್ಷಣದಿಂದ ಕೇವಲ ಕಾನೂನು ಸೇರಿದಂತೆ ಇತರಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು.ಕಾನೂನಿನ ಅರಿವು ಇಲ್ಲದಿದ್ದರೆ ಅಪ್ರಾಪ್ತ ಬಾಲಕಿಯರ ವಿವಾಹ, ಆಸ್ತಿ ಹಂಚಿಕೆಯಲ್ಲಿ ಮೋಸಸೇರಿದಂತೆ ಅವಘಡಗಳು ಜರುಗುತ್ತವೆ.
ಅಪ್ರಾಪ್ತಬಾಲಕಿಯರ ಮದುವೆಗಳು ಸಾಮಾನ್ಯವಾಗಿಹಳ್ಳಿಗಳಲ್ಲಿ ನಡೆಯುತ್ತವೆ. ಈ ವಿಷಯಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಲುಪಿದೂರು ದಾಖಲಾಗುತ್ತದೆ. ಅಪ್ರಾಪ್ತ ಬಾಲಕಿಯಪತಿ ಜೈಲು ಸೇರುತ್ತಾನೆ. ಬಾಲಕಿಯ ಬಾಳುಸಮಸ್ಯೆಯಾಗಿ ರೂಪುಗೊಳ್ಳುತ್ತದೆ. ಹಾಗಾಗಿ ಇಂತಹಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿಮಾತನಾಡಿ, ಮುಂದುವರಿದ ದೇಶಗಳಲ್ಲಿ ಕಡಿಮೆ ಪ್ರಕರಣಗಳಿರುತ್ತವೆ. ಅತಿ ಬೇಗ ಪ್ರಕರಣಗಳುಇತ್ಯರ್ಥವಾಗುವ ಸಂಭವವುಂಟು. ನಮ್ಮದೇಶದಲ್ಲಿ ಪ್ರಕರಣಗಳು ಹೆಚ್ಚಾಗಿರುವುದರಿಂದನ್ಯಾಯಾಲಯಕ್ಕೆ ಬರುವ ಪ್ರಕರಣಗಳುಇತ್ಯರ್ಥವಾಗಲು ವಿಳಂಬವಾಗುತ್ತವೆ. ಅನೇಕಸಂದರ್ಭಗಳಲ್ಲಿ ಪ್ರಕರಣಗಳು ಜೀವನದುದ್ದಕೂನಡೆಯಬಹುದು.
ಇಂತಹ ವೇಳೆಯಲ್ಲಿ ನ್ಯಾಯಪಡೆಯಲು ಜನತಾ ನ್ಯಾಯಾಲಯಗಳ ಮೊರೆಹೋಗಬಹುದು ಎಂದು ಸಲಹೆ ನೀಡಿದರು.ಹಿಂದೆ ಗ್ರಾಮಗಳಲ್ಲಿ ನಡೆಯುತ್ತಿದ್ದಗ್ರಾಮಸ್ಥರು ನಡೆಸುತ್ತಿದ್ದ ಸಂಧಾನಗಳೇ ಈಗಜನತಾ ನ್ಯಾಯಾಲಯ ಎನ್ನುವ ಹೊಸ ರೂಪಪಡೆದಿದೆ. ಬದುಕಿನುದ್ದಕ್ಕೂ ನ್ಯಾಯಾಲಯಗಳಲ್ಲಿ ಸಮಯ ಕಳೆಯುವ ಬದಲು ರಾಜಿ ಸಂಧಾನಮಾಡಿಕೊಳ್ಳುವುದು ಉತ್ತಮ. ಸಂಪನ್ಮೂಲ ವ್ಯಕ್ತಿಗಳುತರಬೇತಿ ಪಡೆದ ಬಳಿಕ ವಿವಿಧ ವ್ಯಾಜ್ಯಗಳಲ್ಲಿಭಾಗಿಯಾಗಿರುವ ಜನರಲ್ಲಿ ಅರಿವು ಮೂಡಿಸುವಕೆಲಸ ಮಾಡಬೇಕು ಎಂದು ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಹಂಚಾಟೆ ಸಂಜೀವಕುಮಾರ್, ರಾಜ್ಯ ತಾಂಡಾಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು.ಚಂದ್ರಾ ನಾಯ್ಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿಮಾತನಾಡಿದರು.ಅಭಿವೃದ್ಧಿ ಅ ಧಿಕಾರಿ ಎಸ್. ಪ್ರಕಾಶ್‌ನಾಯ್ಕ ಇತರರು ಇದ್ದರು. ಡಾ| ರಮೇಶ್‌ನಾಯ್ಕ ನಿರೂಪಿಸಿದರು. ಪ್ರವೀಣ್ ನಾಯಕ್‌ವಂದಿಸಿದರು.