Advertisement

ಬೆಣ್ಣೆ ನಗರಿಯಲ್ಲಿ ವಿಶಿಷ್ಟ ಹರಾಜು ಕಟ್ಟೆ ನಿರ್ಮಾಣ

02:06 PM Nov 14, 2021 | Team Udayavani |

ದಾವಣಗೆರೆ: ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಮಹಾನಗರದ ಕೆ.ಆರ್‌. ಮಾರುಕಟ್ಟೆಯಲ್ಲಿಜರ್ಮನ್‌ ತಂತ್ರಜ್ಞಾನದಲ್ಲಿ ಬಹು ವೈಶಿಷ್ಟ್ಯತೆಯಿಂದಕೂಡಿದ ಬೃಹತ್‌ ಮುಚ್ಚು ಹರಾಜು ಕಟ್ಟೆ (ಕ್ಲೋಸ್‌ಆಕ್ಷನ್‌ ಪ್ಲಾಟ್‌ಫಾರ್ಮ್) ನಿರ್ಮಾಣಗೊಳ್ಳುತ್ತಿದ್ದು,ಕಟ್ಟಡ ಕಾಮಗಾರಿ ಅಂತಿಮ ಹಂತ ತಲುಪಿದೆ. ಹೊಸವರ್ಷ ಆರಂಭದಲ್ಲಿಯೇ (2022ರ ಜನವರಿ) ಕಟ್ಟಡಉದ್ಘಾಟಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.

Advertisement

ಈ ಮುಚ್ಚು ಹರಾಜು ಕಟ್ಟೆಗೆ ಜರ್ಮನ್‌ತಂತ್ರಜ್ಞಾನದಡಿ ನಿರ್ಮಿಸಿರುವ ರಾಜ್ಯದ ಮೊದಲಕಟ್ಟಡ ಎಂಬ ಖ್ಯಾತಿಯೂ ಇದೆ. ಮಹಾನಗರಪಾಲಿಕೆಗೆ ಸೇರಿದ ಕೆ.ಆರ್‌. ಮಾರುಕಟ್ಟೆಯಲ್ಲಿ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 2013-14ನೇಸಾಲಿನ ನಬಾರ್ಡ್‌ ಸಂಸ್ಥೆಯ ಡಬ್ಲೂÂಎಲ್‌ಎಫ್‌ಹೆಚ್ಚುವರಿ ಯೋಜನೆಯಡಿ 25 ಕೋಟಿ ರೂ.ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಗೊಳ್ಳುತ್ತಿದೆ.

ಮಹಾನಗರಪಾಲಿಕೆಗೆ ಸೇರಿದ 5586 ಚದರಮೀಟರ್‌ ಜಾಗದಲ್ಲಿ ನಿರ್ಮಿಸಿದ ಈ ವಾಣಿಜ್ಯಮಳಿಗೆಗಳ ಸಂಕೀರ್ಣದಲ್ಲಿ ಒಟ್ಟು 256 ಮಳಿಗೆಗಳಿವೆ.ನೆಲಮಹಡಿಯಲ್ಲಿ 138 ಮಳಿಗೆ, ಮೊದಲಮಹಡಿಯಲ್ಲಿ 118 ಮಳಿಗೆ ನಿರ್ಮಿಸಲಾಗಿದೆ.ಎರಡನೇ ಮಹಡಿಯಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆಮಾಡಲಾಗಿದೆ. ಇದರಲ್ಲಿ 56 ಕಾರುಗಳು, 250 ಬೈಕ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ. 13 ಜನ ಹತ್ತಿಇಳಿಯಬಹುದಾದ ನಾಲ್ಕು ಕಮರ್ಷಿಯಲ್‌ ಲಿಫ್ಟ್‌ವ್ಯವಸ್ಥೆ ಸಹ ಇಲ್ಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಪೂರ್ಣಗೊಂಡಿದ್ದು ಪ್ರಸ್ತುತ ಎಲೆಕ್ಟ್ರಿಕಲ್‌ ಹಾಗೂಪ್ಲಂಬಿಂಗ್‌ ಕೆಲಸ ನಡೆಯುತ್ತಿದೆ.

ಒಂದೇ ಕಡೆ ಎಲ್ಲರೀತಿಯ ವ್ಯಾಪಾರ ನಡೆಸಲು ವರ್ತಕರಿಗೆ ಹಾಗೂಗ್ರಾಹಕರಿಗೆ ಇದು ಸಹಕಾರಿಯಾಗಲಿದೆ.ವಿಳಂಬಕ್ಕೇನು ಕಾರಣ?: ಈ ಕಟ್ಟಡ ಐದು ವರ್ಷಗಳಹಿಂದೆಯೇ ನಿರ್ಮಾಣಗೊಳ್ಳಬೇಕಿತ್ತು. ಆದರೆನಾನಾ ಕಾರಣಗಳಿಂದ ಇದರ ನಿರ್ಮಾಣದಲ್ಲಿವಿಳಂಬವಾಗಿದೆ. ಮುಚ್ಚು ಹರಾಜು ಕಟ್ಟೆನಿರ್ಮಾಣಕ್ಕೆ 2013-14ನೇ ಸಾಲಿನಲ್ಲಿಯೇ ಚಾಲನೆದೊರೆತರೂ ಹಾಲಿ ಜಾಗದಲ್ಲಿದ್ದ ತರಕಾರಿ ಮತ್ತುಕಿರಾಣಿ ವ್ಯಾಪಾರಸ್ಥರನ್ನು ಬೇರೆಡೆ ಸ್ಥಳಾಂತರಿಸಿಕಟ್ಟಡ ನಿರ್ಮಿಸಲು ಎಪಿಎಂಸಿಯವರಿಗೆ ಜಾಗಹಸ್ತಾಂತರಿಸಲು ಬಹಳ ವಿಳಂಬವಾಯಿತು.

2019-20ರ ಮಾರ್ಚ್‌ ತಿಂಗಳಲ್ಲಿ ಟೆಂಡರ್‌ಗುತ್ತಿಗೆ ಪಡೆದ ತಮಿಳುನಾಡು ಮೂಲದ ಕಂಪನಿಕಾಮಗಾರಿ ಆರಂಭಿಸಿತು. ಗುತ್ತಿಗೆದಾರರು ಆರುತಿಂಗಳಲ್ಲಿ ಇದನ್ನು ನಿರ್ಮಿಸಬೇಕಿತ್ತು. ಆದರೆ ಈನಡುವೆ ಕೊರೊನಾ ಸೋಂಕು ನಿಯಂತ್ರಣಕ್ಕೆವಿಧಿಸಿದ ಲಾಕ್‌ಡೌನ್‌, ಕಾಮಗಾರಿ ವೇಗಕ್ಕೆ ಬ್ರೇಕ್‌ಹಾಕಿತು. ಈ ಎಲ್ಲ ವಿಘ್ನಗಳನ್ನು ಎದುರಿಸಿದ ಬಳಿಕಈಗ ಕಟ್ಟಡ ಅಂತಿಮರೂಪಕ್ಕೆ ಬಂದಿದೆ. ಒಟ್ಟಾರೆವಿಳಂಬವಾದರೂ ವಿಶಿಷ್ಟವಾದ ಮುಚ್ಚು ಹರಾಜುಕಟ್ಟೆ ಸುಂದರವಾಗಿ ನಿರ್ಮಾಣಗೊಂಡಿದ್ದು, ಕೆಲವೇತಿಂಗಳುಗಳಲ್ಲಿ ವ್ಯಾಪಾರಕ್ಕೆ ಮುಕ್ತವಾಗಲಿದೆ.

Advertisement

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next