Advertisement

ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಸಹಿಸಲಾಗದು

07:41 PM Nov 09, 2021 | Team Udayavani |

ದಾವಣಗೆರೆ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ದಲಿತ ವಿರೋಧಿಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ವಿಭಾಗದ ನೇತೃತ್ವದಲ್ಲಿಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆಮಾಲಾರ್ಪಣೆಯ ನಂತರ ಹಳೆ ಪಿ.ಬಿ. ರಸ್ತೆ ಮೂಲಕಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

Advertisement

ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿಸಲ್ಲಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನುಬಿಜೆಪಿಯವರು ದಲಿತ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯದಲಿತಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನುಸಹಿಸಲಾಗದೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ದಲಿತರವಿರೋಧಿ ಎನ್ನುವಂತೆ ಅಪಪ್ರಚಾರ ಮಾಡುತ್ತಿರುವುದು ಅತ್ಯಂತ ಖಂಡನೀಯ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ಪರಿಶಿಷ್ಟ ಜಾತಿ,ಪಂಗಡದ ಫಲಾನುಭವಿಗಳು ವಿವಿಧ ಅಭಿವೃದ್ಧಿ ನಿಗಮದಲ್ಲಿಹೊಂದಿದ್ದ 581 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ.2008-9 ರಿಂದ 2012-13ರ ವರೆಗೆ ಬಿಜೆಪಿ ಸರ್ಕಾರ ಎಸ್‌ಸಿಪಿ,ಟಿಎಸ್‌ಪಿ ಯೋಜನೆಯಡಿ ಕೇವಲ 22, 261 ಕೋಟಿ ಖರ್ಚುಮಾಡಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 88,395 ಕೋಟಿಖರ್ಚು ಮಾಡಿದೆ. ಬಿಜೆಪಿಯೇ ದಲಿತರ ವಿರೋಧಿಯೇ ಹೊರತು ಕಾಂಗ್ರೆಸ್‌ ಅಲ್ಲವೇ ಅಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯಅನ್ನಭಾಗ್ಯ ಯೋಜನೆ ಮೂಲಕ ಬಡವರ್ಗದವರಿಗೆ ಅಕ್ಕಿ, ಬೇಳೆ ಇತರೆ ಆಹಾರ ಧಾನ್ಯಗಳ ನೀಡುವವ್ಯವಸ್ಥೆ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೂಪಿಸಿದಅನ್ನಭಾಗ್ಯ ಯೋಜನೆಯಡಿ ಅಕ್ಕಿ ದೊರೆಯದೇ ಹೋಗಿದ್ದರೆಸಾಕಷ್ಟು ಜನರು ಸಮಸ್ಯೆ ಅನುಭವಿಸಬೇಕಾಗುತ್ತಿತ್ತು ಎಂದರು.

ಕಾಂಗ್ರೆಸ್‌ ಮುಖಂಡರಾದ ಬಿ.ಎಚ್‌. ವೀರಭದ್ರಪ್ಪ, ದಿನೇಶ್‌ಕೆ. ಶೆಟ್ಟಿ, ಎ. ನಾಗರಾಜ್‌, ಅನಿತಾಬಾಯಿ, ಡಾ| ವೈ. ರಾಮಪ್ಪ,ಕೆ.ಜಿ. ಶಿವಕುಮಾರ್‌, ಅಯೂಬ್‌ ಪೈಲ್ವಾನ್‌, ಬಿ.ಎಂ. ಈಶ್ವರ್‌,ಜಿ. ರಾಕೇಶ್‌, ಎನ್‌. ನೀಲಗಿರಿಯಪ್ಪ, ಎಲ್‌.ಎಂ.ಎಚ್‌ ಸಾಗರ್‌,ಶುಭಮಂಗಳ, ಗೀತಾ ಚಂದ್ರಶೇಖರ್‌, ಆಶಾ ಶ್ರೀನಿವಾಸ್‌,ದಾಕ್ಷಾಯಣಮ್ಮ, ಶ್ವೇತಾ, ಗೌಡ್ರ ಚನ್ನಬಸಪ್ಪ, ಬಿ.ಎನ್‌.ರಂಗನಾಥಸ್ವಾಮಿ, ಜಮ್ನಳ್ಳಿ ನಾಗರಾಜ್‌, ರಾಜೇಶ್ವರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next