Advertisement

ಆಯುಷ್‌ ಔಷಧಿಯಿಂದ ಉತ್ತಮ ಫಲಿತಾಂಶ

12:43 PM Nov 05, 2021 | Team Udayavani |

ದಾವಣಗೆರೆ: ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವಮಕ್ಕಳಿಗೆ ಆಯುಷ್‌ ಇಲಾಖೆಯಿಂದ ನೀಡಲಾಗುವಔಷ ಧಿಗಳು ಪರಿಣಾಮಕಾರಿ ಫಲಿತಾಂಶ ನೀಡಿವೆಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಉಪನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ಹೇಳಿದರು.

Advertisement

ಪಂಚಾಯತ್‌ರಾಜ್‌ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವಿಭಾಗೀಯ ಕಚೇರಿ ಆವರಣದಲ್ಲಿಆಯುಷ್‌, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರಿ ಆಯುಷ್‌ವೈದ್ಯಾ ಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿಆಯೋಜಿಸಲಾಗಿದ್ದ 6ನೇ ರಾಷ್ಟ್ರೀಯ ಆಯುರ್ವೇದದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಾಮಾರಿ ಕೊರೊನಾದ ಮೂರನೇ ಅಲೆ ಮಕ್ಕಳಮೇಲೆ ಪರಿಣಾಮ ಬೀರಲಿದೆ ಎನ್ನುವ ತಜ್ಞರಅಭಿಪ್ರಾಯದ ಹಿನ್ನೆಲೆಯಲ್ಲಿ ಅದನ್ನು ಸಮರ್ಪಕವಾಗಿತಡೆಗಟ್ಟುವ ನಿಟ್ಟಿನಲ್ಲಿ ಆಯುಷ್‌ ಇಲಾಖೆಯಿಂದನೀಡಲಾಗಿದ್ದ ಔಷ ಧಿಗಳು ಅಪೌಷ್ಟಿಕತೆ ಮತ್ತುಸಾಧಾರಣ ಮಕ್ಕಳ ಮೇಲೆ ಉತ್ತಮ ಪರಿಣಾಮಪ್ರಭಾವ ಬೀರಿವೆ ಎಂದು ಸಂತಸ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿಅಪೌಷ್ಟಿಕತೆ, ತೂಕ ಕಡಿಮೆ ಇರುವ ಮಕ್ಕಳಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು. ಅದರಂತೆ ಜಿಲ್ಲೆಯಲ್ಲಿ ಮಾಹಿತಿ ಸಂಗ್ರಹಿಸಿದಾಗ 8,900ಸಾಧಾರಣ ತೂಕ ಇರುವ ಮಕ್ಕಳು ಹಾಗೂ 185ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದುಪತ್ತೆಯಾಯಿತು. ಕೂಷ್ಮಾಂಡು ರಸಾಯನ ಹಾಗೂಅರವಿಂದಾಸವ ಔಷ ಧಿಗಳನ್ನು ನೀಡಲಾಗಿತ್ತು.

ಕಳೆದ 6 ತಿಂಗಳಲ್ಲಿ ತೂಕ ಕಡಿಮೆ ಇದ್ದ ಮತ್ತುಅಪೌಷ್ಟಿಕತೆಯಿಂದ ಇದ್ದ ಮಕ್ಕಳು ಸಾಮಾನ್ಯಮಕ್ಕಳಂತೆ ಶೇ. 50 ರಷ್ಟು ಪರಿವರ್ತನೆಗೊಂಡಿವೆ.ಜಿಒಂ ಸಿಇಒ ಅವರೊಂದಿಗೆ ಚರ್ಚಿಸಿ ಮಕ್ಕಳು,ಮಹಿಳೆಯರಿಗೆ ಔಷ ಧಗಳನ್ನು ಮುಂದುವರೆಸಲುಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಆಯುಷ್‌ ಅ ಧಿಕಾರಿ ಡಾ| ಶಂಕರಗೌಡಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಜಿಲ್ಲಾಆಯುಷ್‌ ಅ ಧಿಕಾರಿ ಡಾ| ಯು. ಸಿದ್ದೇಶ್‌, ಅಶ್ವಿ‌ನಿಆಯುರ್ವೇದ ಕಾಲೇಜಿನ ಡೀನ್‌ ಎಂ.ಎನ್‌.ಹಿರೇಮಠ, ಮಲ್ಲಿಕಾರ್ಜುನ ಬೂದಿಹಾಳ್‌,ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿವಾಸುದೇವ ರಾಯ್ಕರ್‌, ಡಾ| ಶಶಿಕುಮಾರ್‌,ಡಾ| ದ್ಯಾವನಗೌಡ, ಡಾ| ಸಿದ್ದೇಶ್‌ ಬಿಸ್ನಾಳ್‌, ಡಾ|ಚಂದ್ರಕಾಂತ್‌ ನಾಗಸಮುದ್ರ, ಡಾ| ಯಶವಂತ್‌,ಡಾ| ಸುಚಿತ್ರಾ, ಡಾ| ಸುಧಾ, ವೈದ್ಯಾಧಿ ಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next