Advertisement

ಮಕ್ಕಳನ್ನು ಸರ್ಕಾರಿ ಶಾಲೆಗೇ ದಾಖಲಿಸಿ

12:50 PM Oct 29, 2021 | Team Udayavani |

ದಾವಣಗೆರೆ: ಶಾಲೆಯ ಅಭಿವೃದ್ಧಿಯಲ್ಲಿಹಳೆಯ ವಿದ್ಯಾರ್ಥಿಗಳ ಕೊಡುಗೆಅಪಾರ. ಗ್ರಾಮಸ್ಥರ ಸಹಕಾರಹಾಗೂ ಎಸ್‌ಡಿಎಂಸಿ ಸಮಿತಿಯಸಮನ್ವಯತೆಯಿಂದ ಶಾಲೆಗಳುಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದುಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಸಚಿವ ಬಿ.ಸಿ. ನಾಗೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಗುರುವಾರ ಚನ್ನಗಿರಿ ತಾಲೂಕುಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಆವರಣದಲ್ಲಿಶತಮಾನೋತ್ಸವ ಶಾಲಾ ಕಟ್ಟಡದಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುವುದುಕೀಳರಿಮೆ ಎಂದು ಭಾವಿಸದೆ ಸರ್ಕಾರಿಶಾಲೆಗಳಿಗೆ ಮಕ್ಕಳನ್ನು ದಾಖಲಿಸಿಪ್ರೋತ್ಸಾಹಿಸಬೇಕು. ಇತ್ತೀಚೆಗೆ ನಡೆದಯುಪಿಎಸ್‌ಸಿಗೆ ಆಯ್ಕೆಯಾದರಾಜ್ಯದ 38 ಅಭ್ಯರ್ಥಿಗಳಲ್ಲಿ ಸುಮಾರು20 ಅಭ್ಯರ್ಥಿಗಳು ಸರ್ಕಾರಿ ಕನ್ನಡಶಾಲೆಗಳಲ್ಲಿ ಕಲಿತಿರುವುದು ಸರ್ಕಾರಿ ಶಾಲೆಗಳ ಮೌಲ್ಯಕ್ಕೆ ಹಿಡಿದ ಕೈಗನ್ನಡಿಎಂದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿವಾಜಪೇಯಿ ಸರ್ವ ಶಿಕ್ಷಣ ಅಭಿಯಾನದಮೂಲಕ ದೇಶದ ಉದ್ದಗಲಕ್ಕೆ ಶೈಕ್ಷಣಿಕಕ್ರಾಂತಿ ಆರಂಭಿಸಿದರು. ಇದುಉತ್ತಮ ಶಾಲೆ ಕಟ್ಟಡ, ಶೌಚಾಲಯ,ಮಕ್ಕಳಿಗೆ ಶಿಕ್ಷಣಕ್ಕೆ ಪೂರಕ ವಾತಾವರಣಕಲ್ಪಿಸುವಲ್ಲಿ ನೆರವಾಯಿತು ಎಂದು ಸ್ಮರಿಸಿದರು.

ರಾಷ್ಟ್ರೀಯ ನೂತನ ಶಿಕ್ಷಣನೀತಿ- ಸ್ಕೂಲ್‌ ಕಾಂಪ್ಲೆಕ್ಸ್‌ ಪ್ರಧಾನಿನರೇಂದ್ರ ಮೋದಿಯವರ ಕಲ್ಪನೆಯಯೋಜನೆ. ಇಂದಿನ ದಿನಗಳಲ್ಲಿಕಾಲೇಜು ವಿದ್ಯಾರ್ಥಿಗಳು ತಾವುಯಾವ ಕಾಲೇಜು, ಯಾವ ಕೋಸ್‌ìಗೆ ಸೇರುತ್ತೇವೆ ಎಂಬುದನ್ನು ಅವರೇನಿರ್ಧರಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಎಲ್ಲ ಬದಲಾವಣೆ ಒಂದೇ ಬಾರಿಆಗುತ್ತದೆ ಎಂದಲ,É ಹಂತ ಹಂತವಾಗಿಬದಲಾವಣೆ ಆಗಲಿದೆ ಎಂದು ಹೇಳಿದರು.

Advertisement

ಮಾಯಕೊಂಡ ಶಾಸಕ ಪ್ರೊ|ಎನ್‌. ಲಿಂಗಣ್ಣ ಮಾತನಾಡಿ, ಕೇವಲಮಾದರಿ ಶಾಲೆಯಿದ್ದರೆ ಸಾಲದು.ಮಾದರಿ ಶಿಕ್ಷಕರೂ ಇರಬೇಕು. ಆಗಮಾತ್ರ ಮಕ್ಕಳು ಶಾಲೆಗೆ ಸೇರಲುಇಷ್ಟಪಡುತ್ತಾರೆ. ಶಿಕ್ಷಕರು ಮಕ್ಕಳಬಗೆಗೆ ಕಾಳಜಿ ವಹಿಸಬೇಕು ಶಿಕ್ಷಕರುಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರನೀಡಬೇಕು.

ದುರಸ್ತಿಯಾಗಬೇಕಿರುವಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಪ್ರಸ್ತಾವನೆ ಸಲ್ಲಿಸಿದಲ್ಲಿ ಬೇಡಿಕೆಗೆಅನುಸಾರವಾಗಿ ಹಂತ ಹಂತವಾಗಿದುರಸ್ತಿ ಕಾರ್ಯಕ್ಕೆ ಅನುದಾನದೊರಕಿಸಲು ಯತ್ನಿಸಲಾಗುವುದು. ಹಳೆವಿದ್ಯಾರ್ಥಿಗಳು ಕೈಜೋಡಿಸಿದಲ್ಲಿ ಕೆಲಸಬಹುಬೇಗ ಸಾಧ್ಯವಾಗುತ್ತದೆ ಎಂದರು.ವಿಧಾನಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌ ಮಾತನಾಡಿ,ಕೊರೊನಾ ಕಾರಣದಿಂದಾಗಿಶಿಥಿಲವಾಗಿದ್ದ ಶಾಲೆಗಳು ನಿರ್ವಹಣೆಇಲ್ಲದಂತಾಗಿ ಇನ್ನಷ್ಟು ಹಾಳಾಗಿವೆ.

ಕೊರೊನಾ ಕಾಲಾವಧಿ ಯಲ್ಲಿಸರ್ಕಾರಿ ಶಾಲೆಗಳಿಗೆ ಹೆಚ್ಚಿನಮಕ್ಕಳು ದಾಖಲಾಗುತ್ತಿರುವುದುಕಂಡುಬಂದಿದೆ. ಪ್ರತಿ ಗ್ರಾಪಂಮಟ್ಟದಲ್ಲಿ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ಮಾದರಿಯಲ್ಲಿ ಶಾಲೆಗಳು ಆಗಬೇಕು.ಹೆಚ್ಚಿನ ಅನುದಾನವನ್ನು ಶಾಲೆಗಳಅಭಿವೃದ್ಧಿಗೆ ನೀಡಬೇಕು ಎಂದು ಮನವಿಮಾಡಿದರು.ಜಿಪಂ ಮಾಜಿ ಸದಸ್ಯ ತೇಜಸ್ವಿವಿ. ಪಟೇಲ್‌ ಪ್ರಾಸ್ತಾವಿಕವಾಗಿಮಾತನಾಡಿದರು. ಗ್ರಾಪಂ ಅಧ್ಯಕ್ಷಜಯಪ್ಪ ದೇವೀರಿ, ಎಸ್‌ಡಿಎಂಸಿಅಧ್ಯಕ್ಷ ನಾಗರಾಜ್‌, ಜಿ.ಎಸ್‌. ಅನಿತ್‌ಕುಮಾರ್‌, ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next