ಚಿತ್ರದುರ್ಗ: ಸ್ವತ್ಛ ಗಾಳಿಯಲ್ಲಿ ನೀಲಾಕಾಶವಾಯುಮಾಲಿನ್ಯವನ್ನು ತಡೆದು ಉತ್ತಮ ಆರೋಗ್ಯಕಾಪಾಡಿಕೊಳ್ಳೊಣ ಎಂದು ಜಿಲ್ಲಾ ಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಚಳ್ಳಕೆರೆ ತಾಲೂಕಿನ ನನ್ನಿವಾಳ ಪ್ರಾಥಮಿಕಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ,ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಗಳಸಹಯೋಗದೊಂದಿಗೆ ರಾಷ್ಟ್ರೀಯ ಪರಿಸರಬದಲಾವಣೆಯಿಂದ ಮಾನವನ ಆರೋಗ್ಯದಮೇಲೆ ಬೀರುವ ಪರಿಣಾಮಗಳನ್ನು ನಿಯಂತ್ರಿಸುವಕಾರ್ಯಕ್ರಮದಲ್ಲಿ ಬಲೂನ್‌ಗಳನ್ನು ಹಾರಿಸಿಅವರು ಮಾತನಾಡಿದರು.
ವಾಯುಮಾಲಿನ್ಯದಿಂದ ಮಾನವನ ಆರೋಗ್ಯದಮೇಲೆ ಉಂಟಾಗುವ ಪರಿಣಾಮಗಳನ್ನುನಿಯಂತ್ರಿಸಲು ಸಂಕೇತಿಕವಾಗಿ ನೀಲಾಕಾಶದಲ್ಲಿಬಲೂನ್‌ಗಳನ್ನು ತೇಲಿ ಬಿಡಲಾಗಿದೆ. ಸ್ವತ್ಛಗಾಳಿಯಲ್ಲಿ ನೀಲಾಕಾಶದಂತೆ ಆರೋಗ್ಯವನ್ನುಕಾಪಾಡಲು ಎಲ್ಲರೂ ಸಹಕರಿಸಿ ಎಂದರು.
ಡಿಎಚ್‌ಒ ಡಾ| ಆರ್. ರಂಗನಾಥ್ ಮಾತನಾಡಿ,ಪರಿಸರ ಬದಲಾವಣೆಯಿಂದ ಮನುಷ್ಯನಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಮುಂಬರುವ ದೀಪಾವಳಿ ಸಮಯದಲ್ಲಿ ಸುಡುವ ಪಟಾಕಿಗಳಿಂದ ಹೊರಬರುವ ಅನಿಲಗಳುವಾಯುಮಾಲಿನ್ಯ, ಶಬ್ದ ಮಾಲಿನ್ಯ, ಬೆಳಕಿನಮಾಲಿನ್ಯವನ್ನು ಉಂಟುಮಾಡುತ್ತದೆ ಇದರಿಂದಶ್ವಾಸಕೋಶ, ಕಣ್ಣು ಕೀವಿಗಳ ಆರೋಗ್ಯದಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ದೀಪಾವಳಿಯನ್ನು ದೀಪಗಳಿಂದ ಆಚರಿಸಬೇಕೇ ವಿನಃ ಶಬ್ದಗಳಿಂದಲ್ಲ ಎಂದು ತಿಳಿಸಿದರು.
ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ| ಕಾಶಿ ಮಾತನಾಡಿ ವಾಯುಮಾಲಿನ್ಯ,ಜಲಮಾಲಿನ್ಯ, ಶಬ್ದ ಮಾಲಿನ್ಯಗಳಿಂದ ಮಾನವನಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನುವಿವರಿಸಿದರು. ನನ್ನಿವಾಳ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿ ಕಾರಿ ಡಾ| ಮಂಜುನಾಥ,ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.