ದಾವಣಗೆರೆ: ಮೆಕ್ಕೆಜೋಳ ಮಾರಾಟ ಮಾಡಿದ್ದರೈತರು ಹಾಗೂ ವರ್ತಕರಿಗೆ ಹಣ ಕೊಡದೆವಂಚಿಸಿದ್ದ ಆರು ಜನರಿಂದ 2.68 ಕೋಟಿ ರೂ.ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಸಿ.ಬಿ. ರಿಷ್ಯಂತ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಮೆಕ್ಕೆಜೋಳ ಪಡೆದು ಹಣ ನೀಡದೆವಂಚಿಸಲಾಗಿದೆ ಎಂದು 96 ರೈತರು ಹಾಗೂ 29ವರ್ತಕರು ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿದೂರು ನೀಡಿದ್ದರು. ರೈತರಿಗೆ 1,51,86,470ರೂ., ವರ್ತಕರಿಗೆ 1,17,05,000 ರೂ. ವಂಚನೆಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ರೈತರಿಗೆ ವಂಚಿಸಲಾಗಿದ್ದ 1,51,86,470 ರೂ.ಒಳಗೊಂಡಂತೆ ಒಟ್ಟು 2,68,91,470 ರೂಪಾಯಿವಶಪಡಿಸಿಕೊಳ್ಳಲಾಗಿದೆ ಎಂದರು.ದಾವಣಗೆರೆ ಎಪಿಎಂಸಿ ಯಾರ್ಡ್‌ನಲ್ಲಿಶಿವಲಿಂಗಯ್ಯ ಮಾಲೀಕತ್ವದ ಕೆ.ಸಿ. ಟ್ರೇಡರ್ಸ್ ಮತ್ತುಜಿ.ಎಂ.ಸಿ ಗ್ರೂಪ್‌ಗೆ ರೈತರು ಹಾಗೂ ವರ್ತಕರುಮೆಕ್ಕೆಜೋಳ ಮಾರಾಟ ಮಾಡುತ್ತಿದ್ದರು. ದಾವಣಗೆರೆತಾಲೂಕಿನ ಅಣಜಿ ಕ್ರಾಸ್ ನಿವಾಸಿ ಎಂ.ಆರ್.ಸಂತೋಷ್ ಸಹ ಮೆಕ್ಕೆಜೋಳ ಮಾರಾಟ ಮಾಡಿದ್ದರು.ಅವರಿಗೆ 47.42 ಲಕ್ಷ ರೂಪಾಯಿ ಕೊಡಬೇಕಾಗಿತ್ತು.ಆದರೆ ಹಣ ಕೊಡದೆ ವಂಚಿಸಲಾಗಿದೆ ಎಂದುಆರೋಪಿಸಿ ಸಂತೋಷ್ ಕಳೆದ ಮಾರ್ಚ್‌ನಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೆ.ಸಿ. ಟ್ರೇಡರ್ಸ್ ಮಾಲೀಕಶಿವಲಿಂಗಯ್ಯ, ದಲ್ಲಾಳಿ ಅಂಗಡಿಯಲ್ಲಿ ಕೆಲಸಮಾಡುವ ಚೇತನ್, ಗುತ್ತಿಗೆದಾರ ಮಹೇಶ್ವರಯ್ಯ,ಹರಿಹರ ತಾಲೂಕು ಸಾಲಕಟ್ಟೆಯ ವಾಗೀಶ್ ಹಾಗೂಚಂದ್ರು ಮತ್ತು ಶಿವಕುಮಾರ್ ಅವರು ತಮಗೆಬರಬೇಕಾದ ಹಣವನ್ನು ಅಕ್ರಮವಾಗಿ ಬ್ಯಾಂಕ್ ಖಾತೆಮೂಲಕ ಬಿಡಿಸಿಕೊಂಡಿದ್ದಾರೆ ಎಂದು ಶಿವಲಿಂಗಯ್ಯದೂರು ಸಲ್ಲಿಸಿದ್ದರು.
ಇದೇ ಆರೋಪಿಗಳಿಂದತಮಗೂ ವಂಚನೆಯಾಗಿದೆ ಎಂದು ಒಟ್ಟು 96ರೈತರು ಹಾಗೂ 29 ವರ್ತಕರು ನಂತರದಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದರು ಎಂದು ಹೇಳಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್,ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾ ಧೀಕ್ಷಕಬಿ.ಎಸ್. ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.