Advertisement
ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಗ್ರಾಮದ ರವೀಂದ್ರನಾಥಬಡಾವಣೆಯಲ್ಲಿ ಸ್ವತ್ಛ ಸಂಕೀರ್ಣವನ್ನು ಉದ್ಘಾಟಿಸಿಅವರು ಮಾತನಾಡಿದರು. ಭಾರತ ಶೇ. 90 ರಷ್ಟುಹಳ್ಳಿಗಳನ್ನು ಹೊಂದಿರುವ ದೇಶ. ಹಳ್ಳಿಗಳಲ್ಲಿ ಸ್ವತ್ಛತೆಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇರುವುದರಿಂದಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರ ಆದ್ಯತೆನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರುಸಹ ಸ್ವತ್ಛತೆಗೆ ಆದ್ಯತೆ ನೀಡಿ ರೋಗಮುಕ್ತ ಸಮಾಜನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
Related Articles
Advertisement
ತಾಪಂ ಮಾಜಿ ಸದಸ್ಯ ಎ.ಬಿ. ಹನುಮಂತಪ್ಪಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ನುಅನುಸರಿಸಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗ್ರಾಮವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾಎ.ಎಂ. ಸುರೇಶ್‌ಬಾಬು ಮಾತನಾಡಿ, ಇದೊಂದುಉತ್ತಮ ಕಾರ್ಯಕ್ರಮವಾಗಿದೆ. ಸರ್ಕಾರಕೋವಿಡ್ ನೆಪವೊಡ್ಡಿ ಅನುದಾನ ನೀಡದ ಕಾರಣಅನೇಕ ಗ್ರಾಮಾಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ.ಶಾಸಕರು ಅನುದಾನ ಒದಗಿಸಬೇಕು ಎಂದುಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮದೇವೇಂದ್ರಪ್ಪ, ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ,ಎಸ್.ಎಂ. ರುದ್ರೇಶ್, ಎಸ್.ಬಿ. ಚಂದ್ರಪ್ಪ, ಎಸ್.ಕೆ. ಮಾಲತೇಶ್, ವೀರೇಂದ್ರ ಪಾಟೀಲ್, ಶಶಿ,ಎ.ಕೆ. ನೀಲಪ್ಪ, ಗುಡ್ಡಪ್ಪ, ಮಲ್ಲಿಕಾರ್ಜುನ್,ಕೆ.ಎಸ್. ರೇವಣಸಿದ್ದಪ್ಪ, ಆರ್. ದಿನೇಶ್, ಗ್ರಾಮಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.