Advertisement

ಸರ್ಕಾರಿ ನೌಕರರ ಕ್ರೀಡಾಕೂಟದ ಕಲರವ

02:37 PM Oct 22, 2021 | Team Udayavani |

ದಾವಣಗೆರೆ: ಬೆಣ್ಣೆ ನಗರಿ, ಶಿಕ್ಷಣ ನಗರಿ, ನಡುಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ, ಪ್ರಥಮಬಾರಿಗೆ ನಡೆಯುತ್ತಿರುವ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಕಲರೀತಿಯಲ್ಲಿ ಸಜ್ಜಾಗಿದೆ.

Advertisement

1997 ರಲ್ಲಿ ದಾವಣಗೆರೆ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆಬಂದ ನಂತರ ಹಲವಾರು ಕ್ರೀಡಾಕೂಟಗಳು ನಡೆದಿವೆ.ಆದರೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿರಲಿಲ್ಲ. ಸರ್ಕಾರಿನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ಅಧಿಕಾರದಅವಧಿಯಲ್ಲಿ ಒದಗಿ ಬಂದಿರುವ ಅವಕಾಶವನ್ನುಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಮಾಡಲಾಗಿದೆ.

ಅ. 22 ರಿಂದ 24 ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿನಡೆಯಲಿರುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 2,150 ಮಹಿಳೆಯರುಒಳಗೊಂಡಂತೆ 7,150 ನೌಕರರು ಭಾಗವಹಿಸುವರು.ಎಲ್ಲ ಸ್ಪರ್ಧಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆಮಾಡಲಾಗಿದೆ.

ಬೆಣ್ಣೆದೋಸೆ ಜೊತೆಗೆ ಕಾರ-ಮಂಡಕ್ಕಿ,ಮಿರ್ಚಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಊಟಕ್ಕೆಹೆಸರುವಾಸಿಯಾಗಿರುವ ದಾವಣಗೆರೆಯ ಖ್ಯಾತಿಗೆತಕ್ಕಂತೆ ಮೂರು ದಿನಗಳ ಕಾಲ ಊಟೋಪಚಾರನಡೆಯಲಿದೆ.ಶುಕ್ರವಾರ ಸಂಜೆ 4:30ಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಕ್ರೀಡಾ ಮತ್ತು ಸಾಂಸ್ಕೃತಿಕಸ್ಪರ್ಧೆಗಳನ್ನು ಉದ್ಘಾಟಿಸುವರು.

ಕ್ರೀಡೆ ಮತ್ತುಯುವಜನ ಸೇವೆ, ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌,ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ,ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಶಾಮನೂರುಶಿವಶಂಕರಪ್ಪ, ಎಸ್‌.ವಿ. ರಾಮಚಂದ್ರ, ಪ್ರೊ| ಎನ್‌.ಲಿಂಗಣ್ಣ, ಕೆ. ಮಾಡಾಳ್‌ ವಿರೂಪಾಕ್ಷಪ್ಪ, ವಿಧಾನಪರಿಷತ್‌ ಸದಸ್ಯರು, ಇತರೆ ಗಣ್ಯರು, ಮುಖಂಡರುಭಾಗಹಿಸುವರು. ಸಂಜೆ 6:30ಕ್ಕೆ ಖ್ಯಾತ ಗಾಯಕರಾದವಿಜಯಪ್ರಕಾಶ್‌, ಶಮಿತಾ ಮಲಾ°ಡ್‌, ಚೈತ್ರಾಇತರರು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮನಡೆಸಿಕೊಡುವರು. 23ರಂದು ಶನಿವಾರ ಸಂಜೆ6:30ಕ್ಕೆ ಚಿತ್ರರಂಗದ ಕಲಾವಿದರು, ಕಾಮಿಡಿ ಕಿಲಾಡಿ,ಸರಿಗಮಪ ಖ್ಯಾತಿಯ ಕಲಾವಿದರಿಂದ ಹಾಸ್ಯ, ನೃತ್ಯ,ಗಾಯನಗಳ ಮನೋರಂಜನಾ ಮಹಾಸಂಗಮ ನಡೆಯಲಿದೆ.
24ರಂದು ಭಾನುವಾರ ಮಧ್ಯಾಹ್ನ 3ಕ್ಕೆಸಮಾರೋಪ ಸಮಾರಂಭವಿದ್ದು, ಬಹುಮಾನ ವಿತರಣೆನಡೆಯಲಿದೆ. ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌,ಹಾಕಿ, ಕಬಡ್ಡಿ, ಟೇಬಲ್‌ಟೆನ್ನಿಸ್‌, ಟೆನ್ನಿಸ್‌, ಬ್ಯಾಡ್ಮಿಂಟನ್‌,ಕೇರಂ, ಚೆಸ್‌, ಬಾಲ್‌ಬಾÂಡ್ಮಿಂಟನ್‌, ಟೆನ್ನಿಕಾಯ್‌r,ಥ್ರೋಬಾಲ್‌, ಈಜು, ಅಥ್ಲೆಟಿಕ್ಸ್‌, ಕುಸ್ತಿ, ಭಾರ ಎತ್ತುವ,ಪವರ್‌ ಲಿμrಂಗ್‌, ದೇಹದಾಡ್ಯì ಮೊದಲಾದ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸಾಂಸ್ಕೃತಿಕ ಸ್ಪರ್ಧೆಗಳ ವಿಭಾಗದಲ್ಲಿ ಹಿಂದೂಸ್ತಾನಿ,ಶಾಸ್ತ್ರೀಯ, ಕರ್ನಾಟಕ, ಲಘು ಶಾಸ್ತ್ರೀಯ, ಜಾನಪದಗೀತೆ, ಕಥಕ್‌, ಮಣಿಪುರಿ, ಕೂಚುಪುಡಿ, ಒಡಿಸಿ,ಭರತನಾಟ್ಯ, ವಾದ್ಯ ಸಂಗೀತ ಒಳಗೊಂಡಂತೆ ಹಲವಾರುಸಾಂಸ್ಕೃತಿಕ ಸ್ಪರ್ಧೆಗಳು ವಿವಿಧ ಸ್ಥಳಗಳಲ್ಲಿ ನಡೆಯಲಿವೆ

Advertisement
Advertisement

Udayavani is now on Telegram. Click here to join our channel and stay updated with the latest news.

Next