Advertisement

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

03:28 PM Oct 20, 2021 | Team Udayavani |

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-4ರಲ್ಲಿಕೆಳಸೇತುವೆ ನಿರ್ಮಿಸಲು ಆಗ್ರಹಿಸಿ ಅ.22ರಂದುಬೆಳಿಗ್ಗೆ 11ಗಂಟೆಗೆ ಮಲ್ಲಶೆಟ್ಟಿಹಳ್ಳಿ ಬಳಿ ಹೆದ್ದಾರಿತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ-4ರಲ್ಲಿಬರುವ ಮಲ್ಲಶೆಟ್ಟಿಹಳ್ಳಿಯಿಂದ ಹೊಸದುರ್ಗದಹುಳಿಯೂರು ರಸ್ತೆಗೆ ಹೊಂದಿಕೊಂಡಿರುವಮತ್ತು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವಮಲ್ಲಶೆಟ್ಟಿಹಳ್ಳಿ, ಕರಿಲಕ್ಕೇನಹಳ್ಳಿ, ಬುಳ್ಳಾಪುರ,ಈಚಘಟ್ಟ, ದೊಡ್ಡರಂಗವ್ವನಹಳ್ಳಿ, ಜಂಪೇನಹಳ್ಳಿ, ಸುಲ್ತಾನಿಪುರ, ಕಬ್ಬೂರು, ಕೊಡಗನೂರು,ಬೊಮ್ಮೇನಹಳ್ಳಿ, ಹನುಮನಹಳ್ಳಿ ಸೇರಿದಂತೆಸುತ್ತಲಿನ ಎಲ್ಲ ಗ್ರಾಮಸ್ಥರು, ಮಹಿಳೆಯರೆಲ್ಲ ಸೇರಿಹೆದ್ದಾರಿ ತಡೆ ನಡೆಸಲಾಗುವುದು.

ಈ ಸಂದರ್ಭದಲ್ಲಿಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು. ಈ ಭಾಗದಲ್ಲಿರಸ್ತೆ ದಾಟುವಾಗ ಗ್ರಾಮಸ್ಥರು, ಮಹಿಳೆಯರು,ಶಾಲಾ ವಿದ್ಯಾರ್ಥಿಗಳು ಬಹಳ ತೊಂದರೆಅನುಭವಿಸುತ್ತಿದ್ದಾರೆ. ಹೆದ್ದಾರಿ ದಾಟುವಾಗಲೇ15-20 ಜನರು ಮೃತಪಟ್ಟಿದ್ದಾರೆ.

ಇಷ್ಟೊಂದು ಜನರು ಪ್ರಾಣ ಕಳೆದುಕೊಂಡರೂ ಜಿಲ್ಲಾಡಳಿತ,ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಈ ಕುರಿತುಕ್ರಮವಹಿಸಿಲ್ಲ. ಪ್ರತಿಭಟನೆ ನಡೆಸಿದಾಗಲೆಲ್ಲ ಸುಳ್ಳುಭರವಸೆ ನೀಡುತ್ತಲೇ ಬಂದಿದ್ದಾರೆ.

ಅ.22ರಂದುನಡೆಸುವ ಹೆದ್ದಾರಿ ತಡೆಗೂ ಜಿಲ್ಲಾಡಳಿತ,ಜನಪ್ರತಿನಿಧಿಗಳು ಸ್ಪಂದಿಸದೇ ಇದ್ದರೆ ಜಿಲ್ಲಾಧಿಕಾರಿಕಚೇರಿ, ಶಾಸಕ, ಸಂಸದರ ಮನೆ ಎದುರು ಜನ,ಜಾನುವಾರು, ಕುರಿ-ಮೇಕೆಯೊಂದಿಗೆ ಮುತ್ತಿಗೆಹಾಕಲಾಗುವುದು ಎಂದರು.ಹೆದ್ದಾರಿಗುಂಟ ಬರುವ ಖಾಸಗಿ ಹೋಟೆಲ್‌,ಖಾಸಗಿ ಕೈಗಾರಿಕೆಗಳು ಇರುವಲ್ಲಿ ಕೆಳಸೇತುವೆನಿರ್ಮಿಸಲು ಆಸಕ್ತಿ ತೋರುವ ಜನಪ್ರತಿನಿಧಿಗಳು,ಅಧಿಕಾರಿಗಳು ರೈತರು, ಹಳ್ಳಿಗರು ರಸ್ತೆ ದಾಟುವಾಗಪ್ರಾಣ ಕಳೆದುಕೊಳ್ಳುತ್ತಿದ್ದರೂ ಕೆಳಸೇತುವೆನಿರ್ಮಿಸಲು ಮುಂದಾಗುತ್ತಿಲ್ಲ. ಅ.22ರೊಳಗೆಕೆಳಸೇತುವೆ ಕಾಮಗಾರಿ ಆರಂಭಿಸಬೇಕು ಎಂದರು.

Advertisement

ಈ ಹಿಂದೆ 6-7-2020ರಂದು ಹೆದ್ದಾರಿ ತಡೆದುಪ್ರತಿಭಟನೆ ನಡೆಸಲಾಗಿತ್ತು. ಆಗ ಪ್ರತಿಭಟನಾ ಸ್ಥಳಕ್ಕೆಆಗಮಿಸಿದ ಜಿಲ್ಲಾಧಿಕಾರಿಗಳು, ಮಾಯಕೊಂಡಕ್ಷೇತ್ರದ ಶಾಸಕರು, ಶೀಘ್ರ ಕೆಳಸೇತುವೆ ನಿರ್ಮಾಣಮಾಡಿಕೊಡುವುದಾಗಿ ಭರವಸೆ ನೀಡಿದ್ದರು.

ಈಗ ಒಂದೂವರೆ ವರ್ಷವಾದರೂ ಕೆಳಸೇತುವೆನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಇದರಿಂದಬೇಸತ್ತು ಪುನಃ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿದೆ ಎಂದರು.

ಚಿನ್ನಸಮುದ್ರ ಶೇಖರನಾಯ್ಕ, ಕರಿಲಕ್ಕೇನಹಳ್ಳಿಹನುಮಂತಪ್ಪ ಎಂ., ಈಚಘಟ್ಟದ ಕರಿಬಸಪ್ಪ,ಮಲ್ಲಶೆಟ್ಟಿಹಳ್ಳಿ ಎಂ.ಸಿ. ಹನುಮೇಶ್‌,ದಾಗಿನಕಟ್ಟೆ ಎನ್‌. ಬಸವರಾಜ್‌, ಬುಳ್ಳಾಪುರದಹನುಮಂತಪ್ಪ, ಬುಳ್ಳಾಪುರದ ಪರಮೇಶ್ವರಪ್ಪ, ಕರೆಕಟ್ಟೆಕಲೀಮುಲ್ಲಾ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next