Advertisement

ಭಾವೈಕ್ಯತೆಯೇ ನಿಜ ಯೋಗ: ಬಸವಪ್ರಭು ಶ್ರೀ

06:58 PM Jun 22, 2022 | Team Udayavani |

ದಾವಣಗೆರೆ: ಸಮಾಜದಲ್ಲಿ ಎಲ್ಲರೂ ಒಂದಾಗಿಬಾಳುವುದೇ ನಿಜವಾದ ಯೋಗವಾಗಿದೆ. ಯೋಗಎಂದರೆ ಕೂಡುವುದು ಎಂದರ್ಥ. ಎಲ್ಲರೂಕೂಡಿಕೊಂಡು ಒಂದಾಗಿ ಬಾಳಿದಾಗ ಮಾತ್ರ ಭಾವೈಕ್ಯತೆನೆಲೆಸುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭುಸ್ವಾಮೀಜಿ ಹೇಳಿದರು.ಮಂಗಳವಾರ ಶಿವಯೋಗಾಶ್ರಮದಲ್ಲಿಜಯದೇವ ಯೋಗ ಕೇಂದ್ರದ ವತಿಯಿಂದಏರ್ಪಡಿಸಿದ್ದ ಎಂಟನೇ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗಎಂದರೆ ಕೇವಲ ಯೋಗಾಸನ ಮಾಡುವುದುಎಂದರ್ಥವಲ್ಲ.

Advertisement

ನಮ್ಮ ಮನಸ್ಸು ಪರಮಾತ್ಮನಲ್ಲಿಧ್ಯಾನದ ಮುಖಾಂತರ ಕೂಡುವುದಾಗಿದೆ ಎಂದರು.ಯೋಗ ನಮ್ಮ ಅಂತರಂಗವನ್ನು ಸ್ವತ್ಛಗೊಳಿಸುವಸಾಧನ. ಮಾನವನಲ್ಲಿರುವ ಮೆದುಳನ್ನು ಶುದ್ಧೀಕರಣಅಂದರೆ ಆಲೋಚನೆಗಳ ಶುದ್ಧೀಕರಣ ಮಾಡುತ್ತದೆ.ಆಲೋಚನೆಗಳು ಶುದ್ಧವಾದಾಗ ಸತ್ಕಾರ್ಯಗಳನ್ನುಮಾಡಲು ಸಾಧ್ಯ. ಸತ್ಕಾರ್ಯದಿಂದ ಒಳ್ಳೆಯವ್ಯಕ್ತಿಯಾಗುತ್ತಾನೆ. ಆ ಒಳ್ಳೆಯ ವ್ಯಕ್ತಿಯೇ ಪ್ರಸಿದ್ಧವ್ಯಕ್ತಿಗಳಾಗುತ್ತಾರೆ.

ನಿತ್ಯ ಶಿವಯೋಗ ಮಾಡಿದರೆಜಂಜಾಟದ ಬದುಕಿನಿಂದ ಹೊರಬರಲು ಸಾಧ್ಯ.ಆಧುನಿಕ ಜೀವನಶೈಲಿ ಎಲ್ಲರಿಗೂ ಅವಸರದ ಬದುಕನ್ನುಕಲಿಸಿಕೊಟ್ಟಿದೆ. ಅತಿಯಾದ ಅವಸರ ಮಾನವನಿಗೆಆತಂಕ ಉಂಟುಮಾಡುತ್ತದೆ. ಅವಸರ, ಆತಂಕದಿಂದಹೊರಬರುವ ಮಾರ್ಗವೇ ಯೋಗವಾಗಿದೆ.ಪ್ರತಿಯೊಬ್ಬರೂ ದಿನ ನಿತ್ಯ ಯೋಗವನ್ನು ಮಾಡಿದರೆಶಾಂತಿ, ನೆಮ್ಮದಿಯ ಬದುಕು ಸಾಗಿಸಬಹುದು ಎಂದುಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next