Advertisement

ಸಿ ಪ್ಲಸ್ ಪ್ಲಸ್ ತರಬೇತಿ ಕಾರ್ಯಾಗಾರ

03:47 PM Jun 08, 2022 | Team Udayavani |

ದಾವಣಗೆರೆ: ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಕಂಪ್ಯೂಟರ್‌ ಸೈನ್ಸ್‌ ವಿಭಾಗದಿಂದ ಎರಡನೇ ವರ್ಷದವಿದ್ಯಾರ್ಥಿಗಳಿಗೆ ಐದು ದಿನಗಳ ಸಿ ಪ್ಲಸ್‌ ಪ್ಲಸ್‌ ತರಬೇತಿಕಾರ್ಯಾಗಾರ ಮಂಗಳವಾರದಿಂದ ಪ್ರಾರಂಭವಾಯಿತು.

Advertisement

ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವಿಭಾಗದಮುಖ್ಯಸ್ಥ ಡಾ| ಎಂ.ಬಿ. ಸಂಜಯ್‌ ಪಾಂಡೆ ಮಾತನಾಡಿ,ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲರೀತಿಯ ತರಬೇತಿ ನೀಡಿ ಅವರನ್ನು ಕೈಗಾರಿಕೆಗಳಿಗೆ ಬೇಡಿಕೆ,ಅಪೇಕ್ಷೆಗೆ ತಕ್ಕಂತೆ ತಯಾರು ಮಾಡುವ ಜವಾಬ್ದಾರಿ ನಮ್ಮಮೇಲಿದೆ. ಆ ನಿಟ್ಟಿನಲ್ಲಿ ಹಲವು ತರಬೇತಿ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳುತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪಡೆಯಲಿದ್ದಾರೆಎಂದು ತಿಳಿಸಿದರು.

ಪ್ರಾಚಾರ್ಯ ಡಾ| ವೈ. ವಿಜಯಕುಮಾರ್‌ಮಾತನಾಡಿ, ಕಾರ್ಯಾಗಾರದಿಂದ ವಿದ್ಯಾರ್ಥಿಗಳುಪ್ರೋಗ್ರಾಮಿಂಗ್‌ನಲ್ಲಿ ನೈಪುಣ್ಯತೆಯನ್ನು ಹೊಂದುವುದಲ್ಲದೆಕೈಗಾರಿಕೆಗೆ ಬೇಕಾದ ತರಬೇತಿ ಪಡೆಯಲಿದ್ದಾರೆ ಎಂದರು.ಕಾಲೇಜಿನ ಹಳೆಯ ವಿದ್ಯಾರ್ಥಿ ಗಣೇಶ್‌, ಮುಂದಿನತಯಾರಿಯ ಬಗ್ಗೆ ಮಾಹಿತಿ ನೀಡಿದರು. ವಿಭಾಗದ ಅಧ್ಯಾಪಕರಾದ ಪ್ರೊ| ಎಂ. ಸಂತೋಷ್‌ಕುಮಾರ್‌, ಪ್ರೊ| ಮೇಘನಾನೇತೃತ್ವದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತಿಮತ್ತು ಉದ್ಯೋಗ ವಿಭಾಗದ ಮುಖ್ಯಸ ಟಿ.ಆರ್‌. ತೇಜಸ್ವಿಕಟ್ಟಿಮನಿ,ವಿಭಾಗದ ಅಧ್ಯಾಪಕ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next