ಬಳ್ಳಾರಿ: ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲುಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿದ್ದು, ಸದ್ಯಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಹಿಳಾಮೀಸಲಾತಿ ಜಾರಿಗೆ ತರುವ ಮೂಲಕಮಹಿಳೆಯರನ್ನುಸಬಲೀಕರಣಗೊಳಿಸಬೇಕುಎಂದು ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯನಾಯಕಿ ಉಮಾಶ್ರೀ ಆಗ್ರಹಿಸಿದರು.
ನಗರದಲ್ಲಿ ಕಾಂಗ್ರೆಸ್ ಮಹಿಳಾಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ”ನಾ ನಾಯಕಿ’ ಕಾರ್ಯಕ್ರಮದಲ್ಲಿಪಾಲ್ಗೊಳ್ಳುವ ಮುನ್ನ ಸುದ್ದಿಗಾರ ರೊಂದಿಗೆಮಾತನಾಡಿದರು.ರಾಜಕೀಯಕ್ಷೇತ್ರದಲ್ಲಿಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕಾದರೆ ಮಹಿಳಾಮೀಸಲಾತಿ ಜಾರಿಗೆ ತರಬೇಕು.ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ನೇತೃತ್ವದ ಯುಪಿಎ ಸರ್ಕಾರವಿದ್ದಾಗಮಹಿಳೆಯರಿಗಾಗಿ ಶೇ.33ರಷ್ಟು ಮೀಸಲಾತಿ ಜಾರಿಗೆತರಲು ಮುಂದಾಗಿತ್ತು. ಮಹಿಳಾ ಮೀಸಲಾತಿಬಿಲ್ ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದು,ಲೋಕಸಭೆಯಲ್ಲಿ ಮಂಡನೆಯಾಗುವಷ್ಟರಲ್ಲಿಕೇಂದ್ರದಲ್ಲಿ ನಮ್ಮ ಸರ್ಕಾರದ ಅವ ಕೊನೆಯಾಗಿತ್ತು.
ಇದೀಗ ಕಳೆದ ಎರಡು ಅವಗಳಿಂದ ಕೇಂದ್ರದಲ್ಲಿಬಿಜೆಪಿ ಸರ್ಕಾರವಿದ್ದು, ಮಹಿಳಾ ಮೀಸಲಾತಿಬಿಲ್ ಪಾಸ್ ಮಾಡಬೇಕಿತ್ತು. ಆದರೆ, ಈ ಕುರಿತುಮಾತನಾಡಲೇ ಇಲ್ಲ ಎಂದು ಹೇಳಿದರು.ಇನ್ನು ಮಾಜಿ ಸಂಸದೆ ರಮ್ಯ-ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ನಡುವಿನ ಟ್ವೀಟ್ ಸಮರ ಕುರಿತು ಪ್ರತಿಕ್ರಿಯಿಸಿದ ಉಮಾಶ್ರೀ ಅವರು ಇಂಥವಾಗ್ವಾದ ಸಾಮಾನ್ಯ. ಈ ವಾಗ್ವಾದ, ಭಿನ್ನಾಭಿಪ್ರಾಯಎಂಬ ಕಾರಣಕ್ಕೆ ನಮ್ಮಲ್ಲಿ ಒಡಕಿದೆ ಎಂದಲ್ಲ. ನಮ್ಮಲ್ಲಿಒಗ್ಗಟ್ಟು ಚೆನ್ನಾಗಿಯೇ ಇದೆ.
ಈ ಬಗ್ಗೆ ಯಾವುದೇಅನುನಮಾನ ಬೇಡ. ಇಂದು ಈ ಕುರಿತು ನಮ್ಮನಾಯಕ ಎಂ.ಬಿ.ಪಾಟೀಲ್ ಸಹ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇವೆಲ್ಲಾ ರಾಜಕಾರಣ ಅಷ್ಟೇ. ಪಕ್ಷದಆಂತರಿಕ ಒಗ್ಗಟ್ಟಿಗೆ ಇದರಿಂದ ಯಾವುದೇಧಕ್ಕೆ ಇಲ್ಲ ಎಂದು ಅವರು ಉತ್ತರಿಸಿದರು.ಸದ್ಯ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆನಿರಂತರ ಏರಿಕೆ ಕಾಣುತ್ತಿವೆ. ಜನರುಇದರಿಂದ ರೋಸಿ ಹೋಗಿದ್ದಾರೆ. ಇದರವಿರುದ್ಧ ಹೋರಾಟ ಕಟ್ಟಬೇಕು. ಮಹಿಳಾಸಂಘಟನೆ ಮಾಡಬೇಕು ಎಂಬ ಉದ್ದೇಶಇಟ್ಟುಕೊಂಡು “ನಾ ನಾಯಕಿ’ಕಾರ್ಯಕ್ರಮ ರೂಪಿಸಲಾಗಿದೆ.ಕಲ್ಯಾಣಕರ್ನಾಟಕಭಾಗದಕಾರ್ಯಕ್ರಮವನ್ನುಬಳ್ಳಾರಿಯಲ್ಲಿ, ಉತ ¤ರ ಕರ್ನಾಟಕಭಾಗದ ಕಾರ್ಯಕ್ರಮವನ್ನುಗದಗಿನಲ್ಲಿ ಹೀಗೆ ಬೇರೆ ಬೇರೆ ವಿಭಾಗದಕಾರ್ಯಕ್ರಮಗಳನ್ನು ಆಯಾ ಭಾಗದ ಪ್ರಮುಖನಗರಗಳಲ್ಲಿ ಹಮ್ಮಿಕೊಂಡಿದೆ ªàವೆ ಎಂದು ಅವರುಹೇಳಿದರು.