ಹೊನ್ನಾಳಿ: ಪಟ್ಟಣದ ದೊಡ್ಡಕೇರಿ ಶ್ರೀಬೀರಲಿಂಗೇಶ್ವರ ಟ್ರಸ್ಟ್ ಕಮಿಟಿ ವತಿಯಿಂದದೊಡ್ಡಕೇರಿಯಲ್ಲಿ ಸರ್ವಾಂಗ ಸುಂದರವಾಗಿನಿರ್ಮಿಸಿರುವ ನೂತನ ಬೀರಲಿಂಗೇಶ್ವರಸಮುದಾಯ ಭವನದ ಉದ್ಘಾಟನೆ, ಶ್ರೀರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ,
ಕಳಸಾರೋಹಣ ಹಾಗೂ ಸಾಮೂಹಿಕವಿವಾಹ ಕಾರ್ಯಕ್ರಮಗಳನ್ನು ಮೇ 15ರಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಹಾಲುಮತಸಮಾಜದ ಮುಖಂಡ ಎಚ್.ಬಿ. ಮಂಜಪ್ಪಹೇಳಿದರು.ಪಟ್ಟಣದ ದೊಡ್ಡಕೇರಿ ಬೀರಲೆಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು.
ಅಂದು ನಡೆಯುವಧಾರ್ಮಿಕ ಹಾಗೂ ಧರ್ಮಸಭೆಯಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದಜಗದ್ಗುರು ನಿರಂಜನಾನಂದಪುರಿಸ್ವಾಮೀಜಿ, ಹೊಸದುರ್ಗ ಶಾಖಾ ಮಠದಈಶ್ವರಾನಂದಪುರಿ ಸ್ವಾಮೀಜಿ, ಹಿರೇಕಲ್ಮಠದಡಾ| ಒಡೆಯರ್ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ ವಹಿಸುವರುಎಂದು ತಿಳಿಸಿದರು.ಸಮುದಾಯ ಭವನದ ನಿವೇಶನವನ್ನುಹಿರೇಕಲ್ಮಠದ ಲಿಂ.ಒಡೆಯರ್ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ದಾನವಾಗಿಸಮಾಜಕ್ಕೆ ನೀಡಿದ್ದರು.
ಬೀರಲಿಂಗೇಶ್ವರಸಮುದಾಯ ಭವನವನ್ನು ಮಾಜಿ ಸಚಿವಎಚ್.ಎಂ.ರೇವಣ್ಣ ಉದ್ಘಾಟಿಸಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಜಿಪಂಮಾಜಿ ಅಧ್ಯಕ್ಷ , ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಎಚ್.ಬಿ.ಮಂಜಪ್ಪ ಅಧ್ಯಕ್ಷತೆವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವಭೈರತಿ ಬಸವರಾಜ್, ವರುಣಾ ಶಾಸಕಡಾ| ಯತೀಂದ್ರಸಿದ್ದರಾಮಯ್ಯ, ಸಂಸದಜಿ.ಎಂ.ಸಿದ್ದೇಶ್, ಮಾಜಿ ಸಚಿವರಾದಎಸ್.ಎಸ್.ಮಲ್ಲಿಕಾರ್ಜುನ, ಕೆ.ಎಸ್.ಈಶ್ವರಪ್ಪ, ಎಚ್.ಆಂಜನೇಯ, ಹರಿಹರಶಾಸಕ ಎಸ್.ರಾಮಪ್ಪ, ಹೊನ್ನಾಳಿ ಶಾಸಕಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್,ಮಾಜಿ ವಿಧಾನ ಪರಿಷತ್ ಸದಸ್ಯಪ್ರಸನ್ನಕುಮಾರ್, ಮಾಜಿ ಶಾಸಕರಾದಡಿ.ಜಿ. ಶಾಂತನಗೌಡ, ಡಾ| ಡಿ.ಬಿ. ಗಂಗಪ್ಪಸೇರಿದಂತೆ ಇತರ ಜನಪ್ರತಿನಿ ಧಿಗಳುಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಧಾರ್ಮಿಕ ಹಾಗೂ ಧರ್ಮಸಭೆಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿಮಾಡಿದರು. ಸಮಿತಿ ಅಧ್ಯಕ್ಷ ಎಚ್.ಬಿ.ಗಿಡ್ಡಪ್ಪ, ಮುಖಂಡರಾದ ಮಾದಪ್ಪ,ವಿಜೇಂದ್ರಪ್ಪ, ನರಸಪ್ಪಗೌಡ, ಎಂ.ಪಿ.ನರಸಿಂಹಪ್ಪ, ಗಣಮಗ ಕುಮಾರಸ್ವಾಮಿಸುದ್ದಿಗೋಷ್ಠಿಯಲ್ಲಿದ್ದರು.