Advertisement

ಕನ್ನಡ ಶಾಲೆ ರಕ್ಷಣೆಗೆ ಗೋಕಾಕ್‌ ಮಾದರಿ ಚಳವಳಿ

05:46 PM Mar 27, 2022 | Team Udayavani |

ದಾವಣಗೆರೆ: ಕನ್ನಡ ಶಾಲೆಗಳ ಉಳಿವಿಗಾಗಿ ಗೋಕಾಕ್‌ ಮಾದರಿಯಲ್ಲಿಚಳವಳಿ ಮಾಡುವ ಕಾಲ ದೂರವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಎಲೆಬೇತೂರು ಗ್ರಾಮದ ಮಾಗಾನಹಳ್ಳಿಅಂಬಾಸಪ್ಪನವರ ಮೈದಾನದಲ್ಲಿ ಶನಿವಾರ ಆರಂಭಗೊಂಡ11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಕನ್ನಡ ಶಾಲೆಗಳನ್ನು ಉಳಿಸುವ ದಿಸೆಯಲ್ಲಿಚರ್ಚಿಸಲು ಮೇ 5ರಂದು ಬೆಂಗಳೂರಿನಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪ ನೇತೃತ್ವದಲ್ಲಿ ದುಂಡುಮೇಜಿನ ಸಭೆ ಕರೆಯಲಾಗಿದೆ. ಈವಿಚಾರವಾಗಿ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನಕೈಗೊಳ್ಳಲಾಗುವುದು ಎಂದರು.

ಕನ್ನಡ ಅನ್ನದ ಭಾಷೆಯಾಗಬೇಕು ಎಂದು ಕಸಾಪ ಪ್ರಯತ್ನಮಾಡುತ್ತಲೇ ಇದೆ. ಆದರೆ ಇದಕ್ಕೆ ನ್ಯಾಯಾಲಯದಸಹಕಾರ ಸಿಗುತ್ತಿಲ್ಲ. ಹರಿಯಾಣ ಸರ್ಕಾರ ಖಾಸಗಿಕಂಪನಿಗಳು ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂಬ ನಿಯಮ ಜಾರಿಗೆ ತರಲು ಮುಂದಾದಾಗಖಾಸಗಿಯವರು ಸುಪ್ರಿಂ ಕೋರ್ಟಿಗೆ ಹೋಗಿತಡೆಯಾಜ್ಞೆ ತಂದರು. ಹೀಗಾಗಿ ಕನ್ನಡವನ್ನುಅನ್ನದ ಭಾಷೆಯನ್ನಾಗಿಸಲು ಚಳವಳಿ ನಡೆಸುವಅನಿವಾರ್ಯತೆ ಇಂದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next