ದಾವಣಗೆರೆ: ಜನ್ಮತಃ ಹಿಂದೂ ಲಿಂಗಾಯತಜಂಗಮರಾಗಿದ್ದರೂ ರಾಜಕಾರಣ ಮತ್ತು ಸರ್ಕಾರಿಸೌಲಭ್ಯಕ್ಕಾಗಿ ಬೇಡ ಜಂಗಮ ಜಾತಿ ಪ್ರಮಾಣಪತ್ರಪಡೆದಿರುವ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರನ್ನುಬಂಧಿ ಸಿ ಪರಿಶಿಷ್ಟರನ್ನು ಉಳಿಸಿ ಎಂದು ಒತ್ತಾಯಿಸಿಮಾ. 28ರಿಂದ ಜಿಲ್ಲೆಯ ವಿವಿಧೆಡೆ ಹೋರಾಟಹಮ್ಮಿಕೊಳ್ಳಲಾಗಿದೆ ಎಂದು ಬಹುಜನ ಸಮಾಜ ಪಕ್ಷದರಾಜ್ಯ ಕಾರ್ಯದರ್ಶಿ ಎಚ್. ಮಲ್ಲೇಶಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಮಾ. 28ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು, 29ರಂದು ಹರಿಹರದಲ್ಲಿಮತ್ತು 30ರಂದು ಹೊನ್ನಾಳಿಯಲ್ಲಿ ಹೋರಾಟನಡೆಸಲಾಗುವುದು. ಹೊನ್ನಾಳಿಯಲ್ಲಿ ಐಬಿ ವೃತ್ತದಿಂದತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿಮನವಿ ಸಲ್ಲಿಸಲಾಗುವುದು ಎಂದರು.ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯಅವರ ಪುತ್ರಿ 2012ರ ನ. 17ರಂದು ಬೆಂಗಳೂರುಉತ್ತರ ತಾಲೂಕಿನಲ್ಲಿ ಬೇಡಜಂಗಮ ಪ್ರಮಾಣಪತ್ರಪಡೆದಿದ್ದಾರೆ.
ಅಲ್ಲದೆ ಪರಿಶಿಷ್ಟ ಜಾತಿ ಇಲಾಖೆಯಿಂದ45 ಲಕ್ಷ ರೂ. ಅನುದಾನ ಪಡೆದಿದ್ದಾರೆ ಹಾಗೂರೇಣುಕಾಚಾರ್ಯ ಅವರ ಪುತ್ರ ಬೇಡಜಂಗಮಪ್ರಮಾಣಪತ್ರ ಆಧಾರದಲ್ಲಿ ಬ್ಯಾಂಕ್‌ನಲ್ಲಿ 80 ಲಕ್ಷರೂ. ಶೈಕ್ಷಣಿಕ ಸಾಲ ಪಡೆದು ಅಮೆರಿಕಾದಲ್ಲಿ ವ್ಯಾಸಂಗಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಅದಕ್ಕೆಪೂರಕವಾದ ದಾಖಲೆಯನ್ನು ಸಂಗ್ರಹಿಸಲಾಗುತ್ತದೆಎಂದು ಹೇಳಿದರು.ಎಂ.ಪಿ. ರೇಣುಕಾಚಾರ್ಯ ಅವರು ಸದನದಲ್ಲಿಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದುನಿಜ, ಆದರೆ ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ.ಪುತ್ರಿಗೆ ನಮ್ಮ ಸಹೋದರ ಜಾತಿ ಪ್ರಮಾಣಪತ್ರಕೊಡಿಸಿದ್ದು ಪ್ರಮಾಣಪತ್ರ ರದ್ದುಪಡಿಸಬೇಕುಎಂದು ಕೋರಿದ್ದೇನೆ. ಏನಾಗಿದೆ ಎಂಬುದು ಗೊತ್ತಿಲ್ಲಎಂದು ಹೇಳಿಕೆ ನೀಡಿದ್ದಾರೆ.
ಅವರೇ ಬೇಡಜಂಗಮಜಾತಿ ಪ್ರಮಾಣಪತ್ರ ಪಡೆದುಕೊಂಡಿರುವುದನ್ನುಒಪ್ಪಿಕೊಂಡಿದ್ದಾರೆ. ಎಲ್ಲವೂ ಮೇಲ್ನೋಟಕ್ಕೆ ಸ್ಪಷ್ಟವಾಗಿಸರ್ಕಾರದ ಗಮನದಲ್ಲಿದ್ದರೂ ಯಾವುದೇ ಕ್ರಮತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದರು.