ದಾವಣಗೆರೆ: ದೀಟೂರು ಏತ ನೀರಾವರಿಯೋಜನೆಯಡಿ 5.25 ಅಡಿ ಅಗಲದರೈಸಿಂಗ್ ಮೇನ್ ಪೈಪ್ ಅಳವಡಿಕೆಯಿಂದಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ,ಭದ್ರತೆ ನೀಡಬೇಕು ಎಂದು ದಾವಣಗೆರೆತಾಲೂಕಿನ ಕಕ್ಕರಗೊಳ್ಳ ಗ್ರಾಮದ ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳೂರು ತಾಲೂಕಿನ 53ಕೆರೆಗಳನ್ನು ತುಂಬಿಸುವ ದೀಟೂರು ಏತನೀರಾವರಿ ಯೋಜನೆಯಡಿ ಕಕ್ಕರಗೊಳ್ಳ,ಹಿರೇಮೇಗಳಗೆರೆ, ಆಲೂರು, ಯು. ಕಲ್ಲಹಳ್ಳಿಇತರೆ ಭಾಗದ ರೈತರ ಹೊಲ, ಗದ್ದೆಯಲ್ಲಿ5.25 ಅಡಿ ಅಗಲದ ರೈಸಿಂಗ್ ಮೇನ್ ಪೈಪ್‌ಅಳವಡಿಸಲಾಗುತ್ತಿದೆ. ಈ ವಿಷಯವನ್ನುಅನೇಕ ರೈತರ ಗಮನಕ್ಕೆ ತರಲಾಗಿಲ್ಲ.
ಪೈಪ್‌ಹಾಕುತ್ತಿರುವ ಬಗ್ಗೆ ಗಮನಕ್ಕೆ ತರದೆ ರೈತರಹೊಲಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಇಡೀಯೋಜನೆಯಡಿ ಬೆರಳಣಿಕೆ ರೈತರಿಗೆ ಮಾತ್ರನೋಟಿಸ್ ನೀಡಲಾಗಿದೆ. ಪೈಪ್ ಹಾಕುವುದಕ್ಕೆಆಕ್ಷೇಪಣೆ ಮಾಡುವ ರೈತರನ್ನು ಬಂಧನಕ್ಕೆಒಳಪಡಿಸಲಾಗುವುದು ಎಂದು ಕರ್ನಾಟಕನೀರಾವರಿ ನಿಗಮದ ಕೆಲ ಎಂಜಿನಿಯರ್‌ಗಳುಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರ 1964 ಲ್ಯಾಂಡ್ ರೆವಿನ್ಯೂಆ್ಯಕ್ಟ್ 90-ಎ ಪ್ರಕಾರ ಹೊಲಗಳಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸ ಲಾಗುತ್ತಿದೆಎಂದು ನೀರಾವರಿ ನಿಗಮದ ಅಧಿಕಾರಿಗಳುಹೇಳುತ್ತಾರೆ. ಅದೇ 90-ಎ ಕಲಂ ಪ್ರಕಾರರೈತರಿಗೆ ಭೂನಾಶದ ಪರಿಹಾರ, ವಾರ್ಷಿಕಬಾಡಿಗೆ, ಭದ್ರತೆ ನೀಡಿಲ್ಲ. ನಿಗಮ ಮತ್ತು ರೈತರನಡುವೆ ಒಡಂಬಡಿಕೆಯನ್ನೂ ಮಾಡಿಕೊಂಡಿಲ್ಲ.
ಮಾ. 22ರಂದು ಕೆಲ ರೈತರು ತಮಗೆ ಮನವಿಮಾಡಿಕೊಂಡಾಗ ಪರಿಹಾರ ಮತ್ತಿತರ ನೆರವಿಗೆನಾನು ಅರ್ಜಿಗಳಿಗೆ ಸಹಿ ಪಡೆಯಲು ತೆರಳಿದ್ದಸಂದರ್ಭದಲ್ಲಿ ಕೆಂಚಾಪುರ ಗ್ರಾಮದ ಬಳಿಪೈಪ್‌ಲೈನ್ ಕೀಳಲು ಹೋಗಿದ್ದೆ ಎಂದು ಸುಳ್ಳುಆರೋಪ ಮಾಡಿ ನನ್ನ ಮೇಲೆ ಮಾರಣಾಂತಿಕಹಲ್ಲೆ ನಡೆಸಲಾಗಿದೆ. ನೀರಾವರಿ ನಿಗಮದಹಲವು ಎಂಜಿನಿಯರ್‌ಗಳು ಈ ಕೃತ್ಯದಹಿಂದಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿದವರುಎಂಜಿನಿಯರ್ ಒಬ್ಬರಿಗೆ ಕರೆ ಮಾಡಿ ನೀವುಹೇಳಿದಂತೆ ಹೊಡೆದಿದ್ದೇವೆ ಎಂದಿದ್ದಾರೆ. ನನ್ನಮೇಲೆ ಹಲ್ಲೆ ನಡೆದಿದ್ದರೂ ಅರಸಿಕೆರೆ ಠಾಣೆಯಎಎಸ್‌ಐ ಒಬ್ಬರು ದೂರು ತೆಗೆದುಕೊಳ್ಳಲಿಲ್ಲ.ಕುಡಿಯಲು ನೀರು ಕೂಡ ಕೊಡದೆ ಅತ್ಯಂತಅಮಾನವೀಯವಾಗಿ ನಡೆಸಿಕೊಂಡರು.
ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ದೂರು ಸಲ್ಲಿಸುವುದಾಗಿತಿಳಿಸಿದರು. ಆಲೂರು ಹನುಮಂತಪ್ಪ, ಎಸ್.ಬಿ. ಮಂಜುನಾಥ್ ಕಲ್ಲಳ್ಳಿ, ಬಿ. ಮಹದೇವಪ್ಪಕಲ್ಲಳ್ಳಿ ಇತರರು ಸುದ್ದಿಗೋಷ್ಠಿ ಯಲ್ಲಿದ್ದರು.