Advertisement

ಕಲಿಕಾ ಕೊರತೆ ನೀಗಿಸಲು “ಚೇತರಿಕೆ’ಟಾನಿಕ್‌

08:00 PM Mar 17, 2022 | Team Udayavani |

ದಾವಣಗೆರೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಕುಂಠಿತವಾಗದಿರಲು ಸಾರ್ವಜನಿಕ ಶಿಕ್ಷಣ ಇಲಾಖೆಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೈಗೊಂಡಬಹುತೇಕ ಎಲ್ಲ ಪರ್ಯಾಯ ಶಿಕ್ಷಣ ಕ್ರಮಗಳುವಿಫಲವಾಗಿವೆ. ಹೀಗಾಗಿ ಕಳೆದ ಮೂರು ವರ್ಷಗಳಕಲಿಕಾ ಕೊರತೆ ಸರಿದೂಗಿಸಲು ಇಲಾಖೆ, ಮುಂಬರುವಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಮಾದರಿಯಲ್ಲೇಹೊಸ “ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಲುಯೋಜನೆ ರೂಪಿಸಿದೆ.

Advertisement

ಕೊರೊನಾ ನಿಯಂತ್ರಣ ಮಾರ್ಗಸೂಚಿಹಾಗೂ ಲಾಕ್‌ಡೌನ್‌ನಂಥ ಕ್ರಮಗಳಿಂದ ರಾಜ್ಯದವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನಿರಂತರ ಭೌತಿಕತರಗತಿಗಳು ನಡೆದಿಲ್ಲ. ಶೇ.50ರಿಂದ 60 ದಿನಗಳಲ್ಲಿಮಾತ್ರ ಭೌತಿಕ ತರಗತಿ ನಡೆಸಲಾಗಿದೆ. ಇಲಾಖೆಈ ಸಂದರ್ಭದಲ್ಲಿ ಮಾಡಿದ ಆನ್‌ಲೈನ್‌ ಪಾಠ,ವಾಟ್ಸ್‌ಆ್ಯಪ್‌ ವಿಡಿಯೋ, ವಿದ್ಯಾಗಮ, ಚಂದನವಾಹಿನಿಯ ಪಾಠ ಪ್ರಸಾರ ಸೇರಿದಂತೆ ಇನ್ನಿತರಪರ್ಯಾಯ ಶಿಕ್ಷಣ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿಪರಿಣಾಮಕಾರಿಯಾಗಿಲ್ಲ.

ಇನ್ನು ವಿದ್ಯಾರ್ಥಿಗಳುಪರೀಕ್ಷೆ ಇಲ್ಲದೆ ಕೇವಲ ಮೌಲ್ಯಾಂಕನಗಳವಿಶ್ಲೇಷಣೆ ಆಧಾರದಲ್ಲಿ ಮುಂದಿನ ತರಗತಿಗಳಿಗೆಉತೀ¤ರ್ಣರಾಗಿದ್ದಾರೆ. ಇದರಿಂದ ವಾಸ್ತವವಾಗಿವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ.ವಿದ್ಯಾರ್ಥಿಗಳ ಕಲಿಕಾ ಹಿನ್ನಡೆ ಅಥವಾ ಕಲಿಕಾಕೊರತೆ ಸರಿದೂಗಿಸಲು ಮುಂಬರುವ ಶೈಕ್ಷಣಿಕವರ್ಷ 2022-23ನೇ ಸಾಲಿನ ಆರಂಭದಲ್ಲೇ”ಕಲಿಕಾ ಚೇತರಿಕೆ’ ಕಾರ್ಯಕ್ರಮ ಹಮ್ಮಿಕೊಳ್ಳಲುನಿರ್ಧರಿಸಲಾಗಿದೆ.

ಹಿಂದಿನ ತರಗತಿಯ ಕಲಿಕಾ ಕೊರತೆಸರಿದೂಗಿಸಲು ಪ್ರತಿ ವರ್ಷದಂತೆ ಶಿಕ್ಷಣ ಇಲಾಖೆ,ಕೊರಾನಾ ಕಾಲದ 2019-20, 2020-21ಹಾಗೂ 2021-22ನೇ ಶೈಕ್ಷಣಿಕ ವರ್ಷಗಳಲ್ಲಿಯೂ “ಸೇತುಬಂಧ’ ಕಾರ್ಯಕ್ರಮ ಮಾಡಿದೆ. ಇದರ ಜತೆಗೆ ಸೇತುಬಂಧ (ಬ್ರಿಡ್ಜ್ ಕೋರ್ಸ್‌) ಕಲಿಕಾಪದ್ಧತಿಯಲ್ಲಿ ಕೆಲ ಮಾರ್ಪಾಡು ತಂದು ಮಕ್ಕಳಿಗೆ ಅಗತ್ಯವಿರುವಂತೆ ಆನ್‌ಲೈನ್‌ ಮತ್ತು ಆಫ್‌ಲೈನ್‌ಮಾದರಿಯಲ್ಲಿ ಹೊಸ ವಿನ್ಯಾಸದ ಕ್ಯೂಆರ್‌ ಕೋಡ್‌ಇರುವ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನುಸಹ ಸಿದ್ಧಪಡಿಸಿತ್ತು. ಆದರೆ ಇದು ಕೂಡ ನಿರೀಕ್ಷಿತ ಫಲನೀಡದೇ ಇರುವುದು ಇಲಾಖೆಯ ಆಂತರಿಕ ಕಲಿಕಾಗುಣಮಟ್ಟ ಸಮೀಕ್ಷೆಯಲ್ಲಿ ಸಾಬೀತಾಗಿದೆ

ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next