ದಾವಣಗೆರೆ: ದಾವಣಗೆರೆ ಜಿಲ್ಲಾ ಪರಿಸರಮಾಲಿನ್ಯ ಮಂಡಳಿಯ ಪರಿಸರ ಅಧಿ ಕಾರಿಎಂ.ಎಸ್. ಮಹೇಶ್ವರಪ್ಪ ಅವರಮನೆ, ಕಚೇರಿ ಮೇಲೆ ಬುಧವಾರಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿ ಕಾರಿಗಳು ದಾಳಿನಡೆಸಿದರು. ಪೂರ್ವ ವಲಯಭ್ರಷ್ಟಾಚಾರ ನಿಗ್ರಹ ದಳದಡಿವೈಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿದಾವಣಗೆರೆ ಮತ್ತು ಚಿತ್ರದುರ್ಗ 22 ಅಧಿಕಾರಿಗಳ ತಂಡ ದಾವಣಗೆರೆಯ ರಂಗನಾಥ ಬಡಾವಣೆಯಲ್ಲಿರುವ ಮನೆ, ದೇವರಾಜಅರಸು ಬಡಾವಣೆಯಲ್ಲಿರುವ ಪರಿಸರಇಲಾಖೆ ಕಚೇರಿ ಮತ್ತು ಸ್ವಗ್ರಾಮ ಚನ್ನಗಿರಿತಾಲೂಕಿನ ಕಂಸಾಗರದ ಮನೆಯ ಮೇಲೆಏಕಕಾಲಕ್ಕೆ ದಾಳಿ ನಡೆಸಿದರು.
ದಾವಣಗೆರೆರಂಗನಾಥ ಬಡಾವಣೆಯಲ್ಲಿ ಎರಡುವಾಸದ ಮನೆ, ಯರಗುಂಟೆಮತ್ತು ಶಾಮನೂರಿನಲ್ಲಿ ತಲಾಎರಡು ನಿವೇಶನ, ಬೆಂಗಳೂರಿನವಿಜಯನಗರದಲ್ಲಿ ಎರಡುನಿವೇಶನ, 796 ಗ್ರಾಂಚಿನ್ನಾಭರಣ, ನಾಲ್ಕು ಕೆಜಿ ಬೆಳ್ಳಿಸಾಮಾನು, ನಾಲ್ಕು ಎಕರೆ ಕೃಷಿ ಜಮೀನು,ವಿವಿಧ ಕಂಪನಿಯ ಮೂರು ದ್ವಿಚಕ್ರವಾಹನ, ಹುಂಡೈ ಕಾರು, 5.59 ಲಕ್ಷ ರೂ.ನಗದು, ಒಟ್ಟು 22 ವಿಮಾ ಪಾಲಿಸಿ, 75.96ಲಕ್ಷ ರೂ. ಮೌಲ್ಯದ ಗೃಹೋಪಯೋಗಿವಸ್ತುಗಳು ಪತ್ತೆಯಾಗಿವೆ. ಶೋಧನಾಕಾರ್ಯ ಮುಂದುವರೆದಿದೆ.