Advertisement
ಸೋಮವಾರ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ69ನೇ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದಶ್ರೀ ಜಯದೇವಲೀಲೆ ಪ್ರವಚನ ಮಂಗಲಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಜಯದೇವ ಸ್ವಾಮೀಜಿಯವರ ಗರಡಿಯಲ್ಲಿಬೆಳೆದಂತಹ ಶ್ರೀ ಮಲ್ಲಿಕಾರ್ಜುನಸ್ವಾಮೀಜಿಮತ್ತು ಶ್ರೀ ಜಯವಿಭವ ಸ್ವಾಮೀಜಿ ಮತ್ತು ನಮ್ಮನಡುವೆ ಜಂಗಮಬಳ್ಳಿಯ ಸಂಬಂಧ ಇದೆ. ನಮ್ಮನಡುವಿನ ಅವಿನಾಭಾವ ಸಂಬಂಧ ಬಳಿವಿದಿರು ಸಂಬಂಧದ ಪ್ರತೀಕ. ದಾವಣಗೆರೆಯಲ್ಲಿನಡೆಯುತ್ತಿದ್ದ ಜಯದೇವಲೀಲೆ ಪ್ರವಚನ ಕೇಳಲುಮಲ್ಲಿಕಾರ್ಜುನ ಸ್ವಾಮೀಜಿಯವರೊಂದಿಗೆಆಗಮಿಸುತ್ತಿದ್ದಂತಹ ನಾವು ಅವರ ಪಾದತಳದಲ್ಲಿಕುಳಿತು ಪ್ರವಚನ ಆಲಿಸುತ್ತಿದ್ದೆವು. ಮಲ್ಲಿಕಾರ್ಜನಸ್ವಾಮೀಜಿಯವರು ಆಶೀರ್ವಚನ ನೀಡುವಸಂದರ್ಭದಲ್ಲಿ ಕಂಬನಿ ಹರಿಯುತ್ತಿತ್ತು.
ಆ ಕಂಬನಿ ಜಯದೇವ ಜಗದ್ಗುರುಗಳ ಕಾರ್ಯಧಾರೆ,ಕ್ರಿಯಾಶೀಲತೆಯ ಬಾಂಧವ್ಯವನ್ನು ಮೆಲುಕುಹಾಕುವಂತಿರುತ್ತಿತ್ತು. ಮಲ್ಲಿಕಾರ್ಜುನಸ್ವಾಮೀಜಿಯವರು ಜಯದೇವ ಲೀಲೆಪ್ರವಚನವನ್ನು “ಕಣ್ಣು ತೊಳೆಯುವ ಹಬ್ಬ’ಎಂದೇ ಕರೆಯುತ್ತಿದ್ದರು. ಅವರೊಂದಿಗಿನ ನಮ್ಮಒಡನಾಡಿತನ ಕಂಬನಿ ತರಿಸುತ್ತದೆ ಎಂದು ತಮಗೆಹೇಳುತ್ತಿದ್ದರು ಎಂದರು.
ಆಕಾಶದಲ್ಲಿ ಮಾತ್ರ ಮಿಂಚಿನ ಬಳ್ಳಿ ಸಂಭವಿಸುತ್ತದೆ. ಜಯದೇವ ಜಗದ್ಗುರುಗಳವರುಮಿಂಚಿನ ಬಳ್ಳಿಯನ್ನು ಅರ್ಥ ಮಾಡಿಕೊಂಡುತಮ್ಮ ಜೀವಿತಾವಧಿಯಲ್ಲಿ ಅದ್ವಿತೀಯ,ಅಸಾಮಾನ್ಯ ಸಾಧನೆಯ ಮಾಡಿದಂತಹವರು.ಸಂಸಾರ ಮತ್ತು ಜಂಗಮ ಹಾಗೂ ಮಿಂಚಿನಬಳ್ಳಿಯ ಸಂಗಮವಾಗಿರಬೇಕು ಎಂದು ಶರಣರುಪ್ರತಿಪಾದಿಸಿದರು.
ಜಯದೇವ ಜಗದ್ಗುರುಗಳವಸ್ಮರಣೋತ್ಸವದ ಅಂಗವಾಗಿ ಪ್ರತಿ ವರ್ಷಜಯದೇವಲೀಲೆ ಪ್ರವಚನ ನಡೆಸಿ ಕೊಂಡುಬರಲಾಗುತ್ತಿದೆ. ಮುಂದಿನ ವರ್ಷದಿಂದ ಮೂರುದಿನಗಳ ಬದಲಿಗೆ 4-5 ದಿನಗಳ ಕಾಲ ಪ್ರವಚನನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್
ಸಮ್ಮುಖ ನುಡಿಗಳಾಡಿದ ದಾವಣಗೆರೆವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ,ಜನನ ಮತ್ತು ಮರಣ ಎಂಬ ಮೂರುಅಕ್ಷರಗಳ ನಡುವಿನ ಮೂರು ಅಕ್ಷರದ ಜೀವನಸಾರ್ಥಕತೆ ಪಡೆಯುವಂತೆ ನಡೆದುಕೊಳ್ಳಬೇಕು.ಜೀವಿತಾವಧಿಯಲ್ಲಿ ದೇಶ ಮತ್ತು ಸಮಾಜಕ್ಕೆಅತ್ಯುತ್ತಮ ಕಾಣಿಕೆ ನೀಡಬೇಕು. ಅಂತಹಮಹಾನ್ ಕಾರ್ಯಗಳಿಂದಾಗಿಯೇ ವಿಶ್ವಗುರುಗಳಸಾಲಿನಲ್ಲಿ ಶ್ರೀ ಜಯದೇವ ಜಗದ್ಗುರುಗಳ ಹೆಸರುಇದೆ. ಅವರೊಬ್ಬ ಮಿಂಚುವ ಮಾಣಿಕ್ಯ ಎಂದುಬಣ್ಣಿಸಿದರು.ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿಜಯದೇವ ಜಗದ್ಗುರುಗಳವರು ಲೆಕ್ಕ ಹಾಕಲುಸಾಧ್ಯವಾಗದಷ್ಟು ಅಗಣಿತ ಮಹತ್ಕಾರ್ಯಮಾಡಿದ್ದಾರೆ. ದೇಶ ಮತ್ತು ಸಮಾಜದ ಅಭಿವೃದ್ಧಿಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನುಮನಗಂಡು ಸ್ವಾತಂತ್ರ್ಯ ಪೂರ್ವದಲ್ಲೇ ಉಚಿತಪ್ರಸಾದ ನಿಲಯಗಳನ್ನು ಸ್ಥಾಪಿಸಿದವರು.ಎಲ್ಲ ಮಠಗಳಿಂತಲೂ ಮೊದಲೇ ಅಡುಗೆಮನೆಯಲ್ಲಿ ಒಲೆಯನ್ನ ಹತ್ತಿಸಿ ಮಕ್ಕಳಿಗೆ ಅನ್ನ,ಅಕ್ಷರ, ಅರಿವಿನ ದಾಸೋಹ ಉಣಬಡಿಸಿವರು.ಎಲ್ಲರೂ ಅವರಂತೆ ಸಮಾಜಮುಖೀ ಕಾರ್ಯಗಳನ್ನುಮಾಡಬೇಕು ಎಂದರು. ಅಥಣಿ ಗಚ್ಚಿನಮಠದಶ್ರೀ ಶಿವಬಸವ ಸ್ವಾಮೀಜಿ, ಗುರುಮಠಕಲ್‌ನ ಶ್ರಿಶಾಂತವೀರ ಸ್ವಾಮೀಜಿ, ಚನ್ನಗಿರಿಯ ಶ್ರೀ ಜಯಬಸವಚಂದ್ರ ಸ್ವಾಮೀಜಿ, ಹಾವೇರಿಯ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಇತರರು ಇದ್ದರು. ಎಸ್.ಓಂಕಾರಪ್ಪ ಸ್ವಾಗತಿಸಿದರು. ಫಾರೂಖ್ ಉಲ್ಲ ನಿರೂಪಿಸಿದರು.