ಯೋಜನೆ ಆರಂಭವಾಗಿ19ವರ್ಷಗಳಾಗಿದ್ದು ಅಲ್ಲಿಂದ ಇಲ್ಲಿಯವರೆಗೂಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನಗಗನಕುಸುಮವೇ ಆಗಿದೆ.ಯೋಜನೆ ಆರಂಭದಲ್ಲಿ ಮಾಸಿಕ300ರಿಂದ 400 ರೂ. ಇದ್ದ ಗೌರವಧನಈಗ 2,600-2,700 ರೂ.ಗಳಿಗೆ (ಮುಖ್ಯಅಡುಗೆಯವರಿಗೆ 2700 ರೂ. ಹಾಗೂಸಹಾಯಕ ಅಡುಗೆಯವರಿಗೆ 2600ರೂ.)ಏರಿಕೆಯಾಗಿದೆ. ಆದರೆ ಈ ಗೌರವಧನಇಂದಿನ ದುಬಾರಿ ಕಾಲಕ್ಕೆ ತೀರಾ ನಗಣ್ಯ.
Advertisement
ಈಗ ಸಿಗುತ್ತಿರುವ ಗೌರವಧನನ್ನು ಮಾಸಿಕಕೆಲಸದ 24 ದಿನಗಳಿಗೆ ಲೆಕ್ಕ ಹಾಕಿದರೆ ಒಬ್ಬರ ದಿನದಆದಾಯ 120 ರೂ.ಗಳಿಗಿಂತ ಕಡಿಮೆಯಾಗಲಿದೆ.ಇಷ್ಟು ಕಡಿಮೆ ಗೌರವಧನದಲ್ಲಿ ಜೀವನದ ಬಂಡಿನಡೆಸುವುದು ಬಿಸಿಯೂಟ ತಯಾರಕರಿಗೆ ದೊಡ್ಡಸವಾಲು ಹಾಗೂ ಸಂಕಷ್ಟ. ಇನ್ನು ಕ್ಷೀರಭಾಗ್ಯಯೋಜನೆಗೂ ಮುನ್ನ ನಾಲ್ಕು ತಾಸು ಕೆಲಸಮಾಡುತ್ತಿದ್ದ ಬಿಸಿಯೂಟ ತಯಾರಕರು, ಕ್ಷೀರಭಾಗ್ಯಯೋಜನೆ ಜಾರಿಯಾದ ಬಳಿಕ ದಿನಕ್ಕೆ ಆರೂವರೆತಾಸು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದಸಿಗುವ ಗೌರವಧನ ಮಾತ್ರ ಒಟ್ಟು ಕೆಲಸದ ಅವಧಿಗೆತಕ್ಕಂತೆ ಹೆಚ್ಚಾಗಿಲ್ಲ