Advertisement

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ

04:27 PM Mar 02, 2022 | Team Udayavani |

ದಾವಣಗೆರೆ: ಹಣಕಾಸು ಸಚಿವರು ಆಗಿರುವಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಾ. 4ರಂದು ಮಂಡಿಸಲಿರುವ ಚೊಚ್ಚಲಬಜೆಟ್‌ನಲ್ಲಿ ಆಂಜನೇಯನ ಜನ್ಮಸ್ಥಳಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ಪಶ್ಚಿಮವಾಹಿನಿ ಯೋಜನೆ, ದಕ್ಷಿಣ ಭಾರತದ ನದಿಜೋಡಣೆ ನಿಲುವಿನ ಬಗ್ಗೆ ಸ್ಪಷ್ಟಪಡಿಸಬೇಕುಎಂದು ವಿಧಾನ ಪರಿಷತ್‌ ಮಾಜಿ ಸದಸ್ಯವಿ.ಎಸ್‌. ಉಗ್ರಪ್ಪ ಒತ್ತಾಯಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಿಜೆಪಿಯವರುರಾಜಕಾರಣಕ್ಕಾಗಿ ಅಯೋಧ್ಯೆ ಯಲ್ಲಿನರಾಮಜನ್ಮಭೂಮಿಗೆ ಒತ್ತು ನೀಡಿದ್ದರು. ಆದರೆಶೂದ್ರರ ಶಕ್ತಿಯ ಪ್ರತೀಕವಾದ ಆಂಜನೇಯನಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯಬಗ್ಗೆ ಮಾತನಾಡುತ್ತಿಲ್ಲ. ಅಂಜನಾದ್ರಿ ಬೆಟ್ಟದವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.ಬೊಮ್ಮಾಯಿಯವರು ಅಂಜನಾದ್ರಿ ಬೆಟ್ಟದಅಭಿವೃದ್ಧಿಯ ಬಗ್ಗೆ ಬಜೆಟ್‌ನಲ್ಲಿ ಘೋಷಣೆಮಾಡಬೇಕು ಎಂದರು.ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರುಬರುತ್ತಾರೆ. ಪ್ರಧಾನಿಯವರ ಧರ್ಮಪತ್ನಿಯೇಭೇಟಿ ನೀಡುತ್ತಾರೆ.

ಎಲ್ಲ ಮೂಲದ ಪ್ರಕಾರಅಂಜನಾದ್ರಿ ಬೆಟ್ಟವೇ ಆಂಜನೇಯನಜನ್ಮಸ್ಥಳ ಎಂದು ಹೇಳುತ್ತಿದ್ದರೂ ಹಾಗೂಟಿಟಿಡಿಯವರು ಆಂಜನೇಯ ಜನ್ಮಸ್ಥಳನಮ್ಮಲ್ಲಿದೆ ಎಂದು ಹೈಜಾಕ್‌ ಮಾಡಿದರೂಕೇಂದ್ರ, ರಾಜ್ಯಸರ್ಕಾರ, ಆರ್‌ಎಸ್‌ಎಸ್‌,ಬಿಜೆಪಿಯವರು ಖಂಡನೆ ಮಾಡಲಿಲ್ಲ.ಸರ್ಕಾರದ ಮೌನ ಟಿಟಿಡಿ ಹೇಳಿಕೆಯನ್ನುಸಮರ್ಥನೆ ಮಾಡಿದಂತಾಗುತ್ತದೆ.ಕೋಟ್ಯಂತರ ಭಕ್ತರ ಆರಾಧ್ಯ ದೇವರನೈಜ ಜನ್ಮಸ್ಥಳದ ಬಗ್ಗೆ ಮಾತನಾಡುವುದುಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ನಾವು ಕಾಂಗ್ರೆಸ್‌ನವರು ರಾಜಕಾರಣ,ಮತಬ್ಯಾಂಕ್‌ ಸೃಷ್ಟಿಸಿಕೊಳ್ಳುವುದಕ್ಕಾಗಿ ರಾಮಜನ್ಮಭೂಮಿ ಬಳಕೆ ಮಾಡುತ್ತಿಲ್ಲ. ಭಕ್ತಿ,ಶ್ರದ್ಧೆ, ಶೂದ್ರರ ಶಕ್ತಿಯ ಪ್ರತೀಕವಾಗಿರುವಆಂಜನೇಯನ ನೈಜ ಜನ್ಮಸ್ಥಳ ಅಭಿವೃದ್ಧಿಆಗಬೇಕು ಎಂಬುದು ನಮ್ಮ ಒತ್ತಾಯ.ಬಿಜೆಪಿ, ಆರ್‌ಎಸ್‌ಎಸ್‌ ರಾಮ ಮತ್ತುಆಂಜನೇಯರ ನಡುವೆ ತಾರತಮ್ಯ ಮಾಡದೆಉತ್ತರ ಭಾರತದ ಅಯೋಧ್ಯೆಯಲ್ಲಿನರಾಮ ಜನ್ಮಭೂಮಿಯನ್ನು ಅಭಿವೃದ್ಧಿಪಡಿಸುತ್ತಿರುವಂತೆ ದಕ್ಷಿಣ ಭಾರತದಲ್ಲಿಆಂಜನೇಯನ ಜನ್ಮಸ್ಥಳ ಅಂಜನಾದ್ರಿಬೆಟ್ಟವನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದಲ್ಲಿಆಂಜನೇಯನ ಭಕ್ತರೊಡಗೂಡಿ ಹೋರಾಟನಡೆಸಬೇಕಾದೀತು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next