Advertisement

ಪೋಕ್ಸೋ ಕಾಯ್ಕೆ ಜಾಗೃತಿ ಮೂಡಲಿ

09:24 PM Mar 01, 2022 | Team Udayavani |

ದಾವಣಗೆರೆ: ಇಂದಿನ ದಿನಮಾನಗಳಲ್ಲಿ ಪೋಕೊÕàಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಹೆಚ್ಚಾಗುತ್ತಿದ್ದು, ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆಕಾಯ್ದೆಯ ಕುರಿತು ಹೆಚ್ಚಿನ ಜಾಗƒತಿ ಮೂಡಿಸುವುದುಬಹಳ ಮುಖ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಪ್ರವೀಣ್‌ ನಾಯಕ್‌ ಹೇಳಿದರು.

Advertisement

ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾವಿಭಾಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾಆಯೋಗ, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಸಂಯುಕ್ತಾಶ್ರಯದಲ್ಲಿ ಹೆಣ್ಣುಮಕ್ಕಳಿಗೆವಿವಿಧ ಇಲಾಖೆಗಳ ಹಾಗೂ ಸರ್ಕಾರದಿಂದ ದೊರೆಯಬಹುದಾದ ಕಾನೂನಾತ್ಮಕ ಅವಕಾಶಗಳ ಬಗ್ಗೆಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.

16ರಿಂದ 18 ವಯಸ್ಸಿನ ಹೆಣ್ಣುಮಕ್ಕಳಿಗೆಸಂಬಂ ಧಿಸಿದ ಪೋಕೊÕà ಪ್ರಕರಣಗಳು ಹೆಚ್ಚುದಾಖಲಾಗುತ್ತಿವೆ. ಈ ಕಾಯ್ದೆ ಬಗ್ಗೆ ಎಲ್ಲರೂತಿಳಿಯಬೇಕು. ಮಕ್ಕಳು ಓದಿನ ಕಡೆ ಹೆಚ್ಚಿನ ಗಮನಹರಿಸಿ ಮುಂದೆ ಹಲವಾರು ಇಲಾಖೆಗಳಲ್ಲಿ ಉದ್ಯೋಗಪಡೆದುಕೊಳ್ಳಲು ಮುಂದಾಗಬೇಕು. ಶಿಕ್ಷಣಹಾಗೂ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇತೊಂದರೆಯಾದಲ್ಲಿ ಕಾನೂನು ಸೇವಾ ಪ್ರಾಧಿಕಾರಹಾಗೂ ಸಖೀ ಒನ್‌ ಸ್ಟಾಪ್‌ ಸೆಂಟರ್‌ ನಿಂದ ತಮ್ಮಸಮಸ್ಯೆಗಳ ಪರಿಹಾರಕ್ಕೆ ಸಲಹೆ ಪಡೆದುಕೊಳ್ಳಬಹುದು ಎಂದರು.

ಮಹಿಳಾ ಪೊಲೀಸ್‌ ಠಾಣೆಯಪೊಲೀಸ್‌ ನಿರೀಕ್ಷಕಿ ವೈ.ಎಸ್‌. ಶಿಲ್ಪಾ ಮಾತನಾಡಿ,ಹಲವಾರು ಮಕ್ಕಳು ಮೊಬೈಲ್‌ನಲ್ಲಿ ಬರುವಂತಹ ಆಕರ್ಷಣೀಯ ಜಾಹೀರಾತುಗಳಿಂದ ಯೋಚನೆಮಾಡದೆ ತಪ್ಪು ನಿರ್ಧಾರ ತೆಗೆದುಕೊಂಡು ಚಿಕ್ಕವಯಸ್ಸಿನಲ್ಲಿ ಮದುವೆಯಾಗಿ, ತಮ್ಮ ಜೀವನವನ್ನೇಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಸ್ನೇಹಿತರುಅಕ್ಕಪಕ್ಕದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ತಕ್ಷಣಅಧಿಕಾರಿಗಳಿಗೆ ಅಥವಾ ಮಕ್ಕಳ ಸಹಾಯವಾಣಿಗೆಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next