Advertisement

ಬಜೆಟ್‌ನಲ್ಲಿ ಸಾಮಾನ್ಯ ಜನರ ಬೇಡಿಕೆ ಈಡೇರಿಸಿ

04:36 PM Feb 26, 2022 | Team Udayavani |

ಹೊನ್ನಾಳಿ: ಬಜೆಟ್‌ ಮಂಡಣೆಯಿಂದ ಪಟ್ಟಣದಜನತೆಯ ನಿರೀಕ್ಷೆಗಳು ಬಹಳಷ್ಟು ಇರುತ್ತವೆ.ನಿರೀಕ್ಷೆಗಳಿಗೆ ಸ್ಪಂದಿಸಿ ಜನಪ್ರತಿನಿಧಿ ಗಳು ಕಾರ್ಯಪ್ರವೃತ್ತರಾಗಬೇಕು ಹಾಗೂ ಬಜೆಟ್‌ನಲ್ಲಿ ಸಾಮಾನ್ಯಜನರ ಬೇಡಿಕೆಗಳು ಈಡೇರುವ ಅಂಶಗಳುಅಡಕವಾಗಿರಬೇಕು ಎಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಹೇಳಿದರು.
ಪಟ್ಟಣದ ತುಂಗಭದ್ರಾ ನದಿ ತಟದಲ್ಲಿರುವನೀರು ಸರಬರಾಜು ಕೇಂದ್ರದಲ್ಲಿ ಶುಕ್ರವಾರಹಮ್ಮಿಕೊಂಡಿದ್ದ ಪುರಸಭೆಯ ಸರ್ವ ಸದಸ್ಯರಸಭೆಯಲ್ಲಿ ಆಯ-ವ್ಯಯ ಮಂಡಣೆಯ ಹೊತ್ತಿಗೆಬಿಡುಗಡೆ ಮಾಡಿ ಅವರು ಮಾತನಾಡಿದರು.ಪುರಸಭೆಯ ಎಲ್ಲ ಸದಸ್ಯರು ಬಜೆಟ್‌ನಲ್ಲಿಮಂಡಣೆಯಾದ ಅಂಶಗಳನ್ವಯ ವಿಳಂಬ ನೀತಿಅನುಸರಿಸದೆ ಕಾರ್ಯಪ್ರವೃತ್ತರಾಗಿ ಪಟ್ಟಣದಸ್ವತ್ಛತೆ ಹಾಗೂ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಹೇಳಿದರು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆಅಧ್ಯಕ್ಷ ಬಾಬು ಹೋಬಳದಾರ್‌ ಬಜೆಟ್‌ನ ಮುಖ್ಯಾಂಶಗಳನ್ನು ವಾಚನ ಮಾಡಿಮಾತನಾಡಿ, 2022-23ನೇ ಸಾಲಿನ ಬಜೆಟ್‌ನಲ್ಲಿ ರೂ.2438243 ನಿವ್ವಳ ಉಳಿತಾಯನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಕಟ್ಟಡ ಆಸ್ತಿ ತೆರೆಗೆಯಿಂದ ರೂ.1 ಕೋಟಿ,ಉದ್ದಿಮೆ ಪರವಾನಗಿ ಶುಲ್ಕದಿಂದ ರೂ.3ಲಕ್ಷ,ಅಂಗಡಿ ಮಳಿಗೆಗಳಿಂದ ರೂ.75ಲಕ್ಷ, ಸಂಗ್ರಹಣಾಹಾಗೂ ಮೇಲ್ವಿಚಾರಣೆಯಿಂದ ರೂ.4ಲಕ್ಷ,ಕರಗಳ ಸಂಗ್ರಹಣಾದಿಂದ ರೂ.2ಲಕ್ಷ, ಖಾತಾಬದಲಾವಣೆ ಹಾಗೂ ಪ್ರತಿಗಳ ಶುಲ್ಕದಿಂದರೂ. 2.5ಲಕ್ಷ, ನೌಕರರ ವೇತನಕ್ಕಾಗಿ ಸರ್ಕಾರದಿಂದಬರುವ ಅನುದಾನ ರೂ.3.5ಕೋಟಿ, ಎಲ್‌ಎಫ್‌ಸಿ ಅನುದಾನದಿಂದ ರೂ.1ಕೋಟಿ,ನತರೋತ್ಥಾನ ಅನುದಾನದಿಂದ ರೂ.10 ಕೋಟಿ,15ನೇ ಹಣಕಾಸು ಯೋಜನೆ ಅನುದಾನದಿಂದರೂ.2ಕೋಟಿ, ಅಮೃತ ನಿರ್ಮಲ ನಗರಅನುದಾನದಿಂದ ರೂ.1ಕೋಟಿ, ಎಸ್‌ಎಫ್‌ಸಿವಿಶೇಷ ಹಾಗೂ ಇತರೆ ನಿರ್ದಿಷ್ಟ ಅನುದಾನದಿಂದರೂ.3.14 ಕೋಟಿ, ನೀರು ಸರಬರಾಜು ಮತ್ತುಬೀದಿ ದೀಪಗಳ ವಿದ್ಯುತ್‌ ಬಿಲ್‌ ಪಾವತಿಗಾಗಿ ಎಸ್‌ಎಫ್‌ಸಿ ವಿದ್ಯುತ್‌ ಅನುದಾನದಿಂದ ರೂ.2ಕೋಟಿಸೇರಿದಂತೆ ಇತರ ಎಲ್ಲ ಮೂಲಗಳಿಂದ ಒಟ್ಟುರೂ.260090000 ಆದಾಯ ನಿರೀಕ್ಷಿಸಲಾಗಿದೆಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next