Advertisement

ಬಜೆಟ್‌ ಮಂಡನೆಗೂ ಮುನ್ನ 2ಎ ಮೀಸಲಾತಿಯ ಭರವಸೆ

02:55 PM Feb 22, 2022 | Team Udayavani |

ದಾವಣಗೆರೆ: ಪಂಚಮಸಾಲಿ ಸಮಾಜದ2ಎ ಮೀಸಲಾತಿ ಬೇಡಿಕೆಯನ್ನು ಬಜೆಟ್‌ಮಂಡನೆಗೂ ಮುನ್ನ ಈಡೇರಿಸುವುದಾಗಿಸ್ವತಃ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೇ ಮಾತುಕೊಟ್ಟಿದ್ದಾರೆ.ಸಿಎಂ ಆ ಮಾತು ಉಳಿಸಿಕೊಳ್ಳುವವಿಶ್ವಾಸವಿದೆ ಎಂದು ಕೂಡಲಸಂಗಮದಬಸವ ಜಯಮೃತ್ಯುಂಜಯ ಸ್ವಾಮೀಜಿಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದಅವರು, ಬೆಳಗಾವಿಯಲ್ಲಿ ಡಿಸೆಂಬರ್‌ತಿಂಗಳಿನಲ್ಲಿ ಸಮಾಜದ ಶಾಸಕರು,ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಮುಖ್ಯಮಂತ್ರಿಯವರೇ ಬಜೆಟ್‌ ಮುನ್ನಬೇಡಿಕೆ ಈಡೇರಿಸುವ ಸಮಯದಗಡುವು ನೀಡಿದ್ದಾರೆ. ಆದ್ದರಿಂದ ನಾವುಅವರಿಗೆ ಮತ್ತೆ ಸಮಯದ ಗಡುವುಕೊಡುವ ಪ್ರಶ್ನೆಯೇ ಇಲ್ಲ ಎಂದರು.ಒಂದು ವೇಳೆ ಕೊಟ್ಟ ಮಾತು ತಪ್ಪಿದರೆಶಾಸಕ ಬಸನಗೌಡ ಪಾಟೀಲ ಯತ್ನಾಳಅಧ್ಯಕ್ಷತೆಯಲ್ಲಿ ಶಾಸಕರ ಸಭೆ ಕರೆದುಮತ್ತೂಮ್ಮೆ ಸರ್ಕಾರದ ಮೇಲೆ ಒತ್ತಡಹೇರಲಾಗುವುದು.

ಅದಕ್ಕೂ ಸರ್ಕಾರಮಣಿಯದ್ದಿದ್ದರೆ ಮುಂದಿನ ಹೋರಾಟದರೂಪುರೇಷೆ ಸಿದ್ಧಪಡಿಸಲಾಗುವುದು.ಈ ಕುರಿತು ಸೋಮವಾರ ನಡೆದಮಹಾರ್ಯಾಲಿಯ ವಾರ್ಷಿಕೋತ್ಸವಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.ಪಂಚಮಸಾಲಿ ಸಮಾಜ ಮೀಸಲಾತಿಗೆಆಗ್ರಹಿಸಿ ದಶಲಕ್ಷ ಸಂಖ್ಯೆಯಲ್ಲಿ ಸೇರಿದಬೆಂಗಳೂರು ಮಹಾರ್ಯಾಲಿ ಆಗಿ ಒಂದುವರ್ಷವಾಗಿದೆ.

ಒಂದು ವರ್ಷವಾದರೂನಮ್ಮ ಬೇಡಿಕೆ ಈಡೇರಿಲ್ಲ ಎಂಬ ನೋವುಸಮಾಜದವರನ್ನು ಕಾಡುತ್ತಿದೆ. ಜತೆಗೆ ಆಕುರಿತ ಆಕ್ರೋಶವೂ ಇದೆ. ಆದ್ದರಿಂದಮತ್ತೆ ಮುಂದಿನ ಹೋರಾಟದ ಬಗ್ಗೆಸಲಹೆ ನೀಡುತ್ತಿದ್ದಾರೆ ಎಂದರು.ಮಾಜಿ ಶಾಸಕರಾದ ಎಚ್‌.ಎಸ್‌.ಶಿವಶಂಕರ್‌, ನಂದಿಹಳ್ಳಿ ಹಾಲಪ್ಪ,ಪ್ರಮುಖರಾದ ತೇಜಸ್ವಿ ಪಟೇಲ್‌, ಮೋತಿಶಂಕರಪ್ಪ, ಅಶೋಕ ಗೋಪನಾಳ, ಕಂಚಿಕೆರೆಕೊಟ್ರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next