Advertisement

ಕಾರ್ಮಿಕ ಇಲಾಖೆ ಅವ್ಯವಹಾರ ತಡೆಗೆ ಒತ್ತಾಯ

02:25 PM Feb 18, 2022 | Team Udayavani |

ದಾವಣಗೆರೆ: ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಕಾರ್ಮಿಕರಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿದೆ ಎನ್ನಲಾದ ಹಗಲುದರೋಡೆ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲುಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿಕಾರ್ಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗುರುವಾರ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರಜನರ ಪೂರಕವಾಗಿ ಕೆಲಸ ಮಾಡುವ ಆಶಾಭಾವನೆ ಇತ್ತು.ಕಾರ್ಮಿಕ ಇಲಾಖೆಗೆ ಶಿವರಾಂ ಹೆಬ್ಟಾರ್‌ ಸಚಿವರಾದದಿನದಿಂದ ಇಲ್ಲಿಯವರೆಗೂ ಸರ್ಕಾರಕ್ಕೆ ಗೌರವ ತರುವ ಕೆಲಸಮಾಡದೆ ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಕಾರ್ಮಿಕರಕಲ್ಯಾಣ ಮಂಡಳಿಯ ಹಣವನ್ನು ಲೂಟಿ ಮಾಡುವಲ್ಲಿನಿರತರಾಗಿದ್ದಾರೆ.

ಖುದ್ದಾಗಿ ಮುಖ್ಯಮಂತ್ರಿಗಳೇ ಪರಿಶೀಲನೆನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸಚಿವರು ಕಾರ್ಮಿಕ ಇಲಾಖೆಯ ಅ ಧಿಕಾರ ವಹಿಸಿಕೊಂಡನಂತರ ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸುವಬದಲು ಹಿಂಬಾಲಕರ ಒತ್ತಾಸೆಯಂತೆ ಕೆಲಸ ಮಾಡುತ್ತಿದ್ದಾರೆ. ಫುಡ್‌ ಕಿಟ್‌, ಟೂಲ್‌ ಕಿಟ್‌ ನೆಪದಲ್ಲಿ ಮಂಡಳಿಯಲ್ಲಿನಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

ಫುಡ್‌,ಟೂಲ್‌ ಕಿಟ್‌ಕಳಪೆ ಗುಣಮಟ್ಟದ್ದಾಗಿವೆ. ಸಾಕಷ್ಟು ವ್ಯತ್ಯಾಸ ಆಗಿರುವುದುಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಖ್ಯಮಂತ್ರಿಗಳುಸಚಿವರು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next