ದಾವಣಗೆರೆ: “ಸಾಹಿತಿಗಳ ತವರೂರು’ ಖ್ಯಾತಿಯಧಾರವಾಡದಲ್ಲಿ ಬುಧವಾರ ನಿಧನರಾದ ಕನ್ನಡ ಸಾರಸ್ವತಲೋಕದ ಚೆಂಬೆಳಕಿನ ಕವಿ ಎಂದೇ ಪ್ರಸಿದ್ಧರಾಗಿದ್ದನಾಡೋಜ ಡಾ| ಚನ್ನವೀರ ಕಣವಿ ಸಾಹಿತ್ಯ ಮಾತ್ರವಲ್ಲ,ಕಲಾ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹಿಸುವ ಮೂಲಕಹೆಸರಿಗೆ ತಕ್ಕಂತೆ ಸಮನ್ವಯತೆಯ ಕವಿಯಾಗಿದ್ದರು.
ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅಮೋಘಕೊಡುಗೆ ನೀಡಿರುವ ಡಾ| ಚನ್ನವೀರ ಕಣವಿ ಅವರುದಾವಣಗೆರೆಯ ಶ್ರೀ ಶಂಕರ ಪಾಟೀಲ್ ಕಲಾಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ ನಾಡು ಕಂಡಂತಹಅಪ್ರತಿಮ ಕಲಾವಿದರಿಗೆ ಸದಾ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದರು.
ದಾವಣಗೆರೆಯ ತಮ್ಮ ಸಂಬಂಧಿಕರು,ನಾಡಿನ ಖ್ಯಾತ ಚಿತ್ರಕಲಾವಿದ ಶಂಕರ ಪಾಟೀಲ್‌ಸ್ಮರಣಾರ್ಥ ಕೊಡ ಮಾಡುವ ಶ್ರೀ ಶಂಕರ ಪಾಟೀಲ್‌ಕಲಾ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದ ಕಣವಿ ಅವರುಖಂಡೋಜಿ ರಾವ್, ವಿ. ಅಂದಾನಿ, ಚಂದ್ರನಾಥ್‌ಆಚಾರ್ಯ ಮುಂತಾದ ಕಲಾವಿದರನ್ನು ಆಯ್ಕೆಮಾಡಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸುವ ಮೂಲಕಕಲಾಕ್ಷೇತ್ರದಲ್ಲೂ ಅಚ್ಚಳಿಯದ ಸೇವೆ ಸಲ್ಲಿಸಿದ್ದಾರೆ.
ದಾವಣಗೆರೆಯಲ್ಲಿ ನಡೆಯುತ್ತಿದ್ದ ಶ್ರೀ ಶಂಕರಪಾಟೀಲ್ ಕಲಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಪ್ಪದೇಹಾಜರಾಗುತ್ತಿದ್ದರು ಮಾತ್ರವಲ್ಲ, ಪ್ರಶಸ್ತಿ ಆಯ್ಕೆಯಲ್ಲೂಪ್ರಮುಖ ಪಾತ್ರ ವಹಿಸುತ್ತಿದ್ದರು. ಪ್ರೊ| ಎಂ.ಎಚ್.ಕೃಷ್ಣಯ್ಯ, ಪಾರ್ವತಿ ಪಾಟೀಲ್, ಖಂಡೋಜಿರಾವ್ ಇತರ ದಿಗ್ಗಜರೊಡಗೂಡಿ ಚರ್ಚಿಸಿ ಪ್ರಶಸ್ತಿಪುರಸ್ಕೃತರನ್ನು ಆಯ್ಕೆ ಮಾಡುತ್ತಿದ್ದರು.
ಪ್ರಶಸ್ತಿ ಪ್ರದಾನಸಮಾರಂಭ ಅಚ್ಚುಕಟ್ಟು ಮತ್ತು ಅರ್ಥಗರ್ಭಿತವಾಗಿನಡೆಯುವಂತಾಗಬೇಕು ಎಂಬ ಉದ್ದೇಶದಿಂದಪ್ರತಿಯೊಂದರ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು.ಸಮಾರಂಭ ಮುಗಿದ ನಂತರವೂ ಸಮಾರಂಭದ ಬಗ್ಗೆಸಮಗ್ರ ಮಾಹಿತಿ ಪಡೆಯುತ್ತಿದ್ದರು. ಸಾಹಿತ್ಯ ಕ್ಷೇತ್ರದಮೇರು ಕವಿಯಾಗಿದ್ದರೂ ಕಲಾಕ್ಷೇತ್ರದ ಬಗ್ಗೆಯೂಅಷ್ಟೇ ಅಭಿಮಾನ ಹೊಂದಿದ್ದರು.
ರವಿಬಾಬು