ದಾವಣಗೆರೆ: ನಗರದ ಅಂಬೇಡ್ಕರ್ ವೃತ್ತದಲ್ಲಿ ಫೆ. 13ರಂದು ಅಂಬೇಡ್ಕರ್‌ರವರ ಕಂಚಿನ ಪುತ್ಥಳಿ ಅನಾವರಣಸಮಾರಂಭದಲ್ಲಿ ದಲಿತ ಸಮುದಾಯವನ್ನು ಕಡೆಗಣಿಸಿರುವಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜಿಲ್ಲಾಪೊಲೀಸ್ ಇಲಾಖೆ ಸ್ವಯಂ ದೂರು ದಾಖಲಿಸಿಕೊಂಡು,ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಸಂಘರ್ಷಸಮಿತಿ (ಡಾ| ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂಬೇಡ್ಕರ್‌ರವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮಸಂಪೂರ್ಣವಾಗಿ ಬಿಜೆಪಿ ಪಕ್ಷದ, ಒಂದು ಮನೆತನದ,ಸ್ವಂತ ಹಣದಿಂದ ಪುತ್ಥಳಿ ನಿರ್ಮಾಣ ಮಾಡಿಸಿ ರುವಂತೆ,ಯಾರಧ್ದೋ ಹಿತಾಸಕ್ತಿಗಾಗಿ ಕಾರ್ಯಕ್ರಮ ಇತ್ತು. ಆ ಬಗ್ಗೆಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಒಂದು ವಾರದಲ್ಲಿಸ್ಪಷೀrಕರಣ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿಜಿಲ್ಲೆಯಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗುವುದುಎಂದು ಎಚ್ಚರಿಸಿದರು.
ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದ ಬಗ್ಗೆದಲಿತ ಸಮುದಾಯದ ಯಾವುದೇ ಮುಖಂಡರಿಗೆಮಾಹಿತಿ ನೀಡಿರಲಿಲ್ಲ. ಮಾಧ್ಯಮಗಳ ಮೂಲಕ ಬೆಳಗ್ಗೆ 11ಕ್ಕೆಕಾರ್ಯಕ್ರಮ ಎಂಬುದು ಗೊತ್ತಾಗಿತ್ತು. ಆದರೆ 11ಕ್ಕೆ ಬದಲಾಗಿ10 ಗಂಟೆಗೆ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಲಾಗಿದೆ.ದಲಿತ ಸಮುದಾಯದ ಮುಖಂಡರು ಇತರರು ಬರುವವೇಳೆಗೆ ಕಾರ್ಯಕ್ರಮವೇ ಮುಗಿಸಲಾಗಿತ್ತು. ಆ ಮೂಲಕಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ.
ಸಮಾನತೆವಿರೋಧಿಸುವಂತಹವರು ಇಂತಹ ಕೆಲಸ ಮಾಡುತ್ತಾರೆ.ಅಂಬೇಡ್ಕರ್ ಅವರಿಗೆ ಅಪಮಾನಕ್ಕೆ ಕಾರ್ಯಕ್ರಮದ ಜವಾಬ್ದಾರಿಹೊತ್ತಿದ್ದ ಜಿಲ್ಲಾಧಿಕಾರಿಗಳು, ನಗರಪಾಲಿಕೆ ಆಯುಕ್ತರೇಕಾರಣ. ಅವರ ವಿರುದ್ಧ ಜಿಲ್ಲಾ ರಕ್ಷಣಾ ಇಲಾಖೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿ ಕೊಳ್ಳಬೇಕು ಎಂದುಒತ್ತಾಯಿಸಿದರು. ಅಂಬೇಡ್ಕರ್‌ರವರ ಕಂಚಿನ ಪುತ್ಥಳಿಶಿಲಾನ್ಯಾಸವನ್ನೂ ಬಹಳ ಅವಸರದಲ್ಲಿ ಮುಖಂಡರಿಗೆಮಾಹಿತಿ ನೀಡದೆಯೇ ನೆರವೇರಿಸಲಾಗಿತ್ತು.
ಆಗಲೇಅನಾವರಣ ಕಾರ್ಯಕ್ರಮದ ಬಗ್ಗೆ ಸಮುದಾಯದ ಎಲ್ಲಮುಖಂಡರಿಗೆ ಸರಿಯಾದ ಮಾಹಿತಿ ನೀಡಬೇಕು ಹಾಗೂಹೋರಾಟಗಾರರನ್ನು ಸನ್ಮಾನಿಸಬೇಕು ಎಂದು ತಾಕೀತು ಮಾಡಿಮನವಿ ಪತ್ರವನ್ನೂ ನೀಡಲಾಗಿತ್ತು. ಆದರೂ ಅಂಬೇಡ್ಕರ್‌ಮತ್ತು ಅನುಯಾಯಿಗಳಿಗೆ ಅಪಮಾನ ಮಾಡಲಾಗಿದೆಎಂದು ದೂರಿದರು.
ದಾವಣಗೆರೆ ನಗರದ ಮಧ್ಯಭಾಗದಲ್ಲಿಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂಬುದುದಲಿತ ಸಮುದಾಯದ ಮುಖಂಡರು 20 ವರ್ಷದಿಂದಒತ್ತಾಯಿಸುತ್ತಾ, ಹೋರಾಟ ನಡೆಸುತ್ತಾ ಬಂದಿದ್ದಾರೆ. ನಗರಮಧ್ಯಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದರೆದಲಿತ ಸಮುದಾಯವರು ಜಾಗೃತರಾಗುತ್ತಾರೆ ಎಂಬ ಕಾರಣಕ್ಕೆಕಾರ್ಯಕ್ರಮದಿಂದಲೇ ದೂರವಿಡುವ ಪ್ರಯತ್ನ ನಡೆದಿದೆ.ಕಾರ್ಯಕ್ರಮದಲ್ಲಿದ್ದ ಬಸವ ಅನುಯಾಯಿಗಳು ಅಂಬೇಡ್ಕರ್‌ರವರ ಅನುಯಾಯಿಗಳಿಗೆ ಅಪಮಾನ ಮಾಡಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯವಾದಿ ಅನೀಸ್‌ಪಾಷ ಮಾತನಾಡಿ, ಅತ್ಯಂತ ತರಾತುರಿಯಲ್ಲಿ ಅಂಬೇಡ್ಕರ್‌ಪುತ್ಥಳಿ ಅನಾವರಣ ಮಾಡಿ, ದಲಿತ ಸಮುದಾಯದವರನ್ನುಅಪಮಾನ ಮಾಡಿರುವ ಬಗ್ಗೆ ಒಂದು ವಾರದಲ್ಲಿ ಸಂಬಂಧಿತರುಸ್ಪಷೀrಕರಣ ನೀಡಕು ಎಂದು ಆಗ್ರಹಿಸಿದರು. ಸಮಿತಿಯ ಎಸ್.ಜಿ. ವೆಂಕಟೇಶ್‌ಬಾಬು, ಎ ಚ್.ಸಿ. ಮಲ್ಲಪ್ಪ, ಸಿ. ಬಸವರಾಜ್,ಕತ್ತಲಗೆರೆ ತಿಪ್ಪಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.