ಹೊನ್ನಾಳಿ: ಅರೆ ಮಲೆನಾಡು ಹಾಗೂ ಬಯಲುಸೀಮೆಯ ಪ್ರಾದೇಶಿಕ ವೈವಿಧ್ಯತೆಯನ್ನೊಳಗೊಂಡನ್ಯಾಮತಿ 2018, ಫೆಬ್ರವರಿ 28ರಂದು ಹೊನ್ನಾಳಿತಾಲೂಕಿನಿಂದ ಬೇರ್ಪಟ್ಟು ಹೊಸ ತಾಲೂಕಾಗಿಉದಯಿಸಿತು.
ನೂತನ ತಾಲೂಕಾಗಿ 4 ವರ್ಷಪೂರ್ಣಗೊಂಡರೂ ನ್ಯಾಮತಿ ತಾಲೂಕಿಗೆತಾಲೂಕು ಆಡಳಿತ, ಪಟ್ಟಣ ಪಂಚಾಯಿತಿಹಾಗೂ ತಾಪಂ ಕಚೇರಿಗಳನ್ನುಹೊರತುಪಡಿಸಿದರೆ ಇತರ ಇಲಾಖೆಗಳಕಚೇರಿ ಸ್ಥಾಪನೆ, ಇಲಾಖಾ ಧಿಕಾರಿಗಳನೇಮಕವಾಗದೆ ಹಾಗೂ ಯಾವುದೇಮೂಲ ಸೌಲಭ್ಯಗಳು ಇಲ್ಲದ ಕಾರಣಸಾರ್ವಜನಿಕರು ಪರದಾಡುವಂತಾಗಿದೆ.
ಹೆಸರಿಗೆ ಮಾತ್ರ ತಾಲೂಕಾಗಿದ್ದು, ವಿವಿಧಇಲಾಖೆಗಳಿಗೆ ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗೆ ಹೊನ್ನಾಳಿಗೆ ಆಗಮಿಸಬೇಕಾದ ಪರಿಸ್ಥಿತಿಇದೆ. ಹಳೇಮಳಲಿ, ಚೀಲೂರು, ಕೋಟೆಹಾಳ್,ಮರಿಗೊಂಡನಹಳ್ಳಿ, ಕುರುವ ಹಳದಿಬ್ಬ, ಗೋವಿನಕೋವಿಗ್ರಾಮಗಳು ತುಂಗಭದ್ರಾ ನದಿ ಸಮೀಪದಲ್ಲಿವೆ.ನ್ಯಾಮತಿ ತಾಲೂಕು ಚೀಲೂರು, ಬೆಳಗುತ್ತಿ, ಜೋಗಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಹಾಗೂ 11 ತಾಲೂಕುಪಂಚಾಯಿತಿ ಕ್ಷೇತ್ರಗಳನ್ನು ಒಳಗೊಂಡಿದೆ.
ಮಲೆನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ತುದಿಹಾಗೂ ಬಯಲುಸೀಮೆಯಲ್ಲಿರುವ ನ್ಯಾಮತಿತಾಲೂಕಿನಲ್ಲಿ ತೀರ್ಥಗಿರಿ, ಕಲುಬಿಗಿರಿ ಹಾಗೂತುಪ್ಪದಗಿರಿ ಶ್ರೇಣಿಯ ಕಿರಿ ಶಿಖರಗಳಿವೆ. ಈ ಬೆಟ್ಟಶ್ರೇಣಿಯಲ್ಲಿರುವ ಹಳೇಜೋಗ, ಹೊಸಜೋಗ,ಸಿದ್ದಾಪುರ, ಚಿನ್ನಿಕಟ್ಟೆ, ಸೂರಗೊಂಡನಕೊಪ್ಪ, ಸುರಹೊನ್ನೆ,ಮಲ್ಲಿಗೇನಹಳ್ಳಿ, ಬೆಳಗುತ್ತಿ ಅರೆ ಮಲೆನಾಡಿನಪರಿಸರದಲ್ಲಿರುವ ಗ್ರಾಮಗಳು.ನ್ಯಾಮತಿ ಗ್ರಾಮ ಪಂಚಾಯಿತಿ ಅಸ್ತಿತ್ವದಲ್ಲಿದ್ದಾಗವಾರ್ಡ್‌ಗಳು ನಿರ್ಮಾಣವಾಗಿ 24 ಸದಸ್ಯರನ್ನುಹೊಂದಿತ್ತು.
ಇದೀಗ ಬಿಜೆಪಿ ಸರ್ಕಾರದಅವಧಿಯಲ್ಲಿ ತಾಲೂಕು ಕೇಂದ್ರವಾದ ಮೇಲೆ ಗ್ರಾಮಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿಮೇಲ್ದರ್ಜೆಗೇರಿಸಲಾಗಿದೆ. ಆದರೆ ಇನ್ನೂ ವಾಡ್ìಗಳು ಅಸ್ತಿತ್ವಕ್ಕೆ ಬಂದಿಲ್ಲ. ತಾಲೂಕು ಕೇಂದ್ರದಲ್ಲಿಐತಿಹಾಸಿಕ ಪುಣ್ಯಕ್ಷೇತ್ರ ತೀರ್ಥರಾಮೇಶ್ವರ,ತುಂಗಭದ್ರಾ ನದಿಯ ನಡುಗೆಡ್ಡೆಯಲ್ಲಿ ಗೆಡ್ಡೆರಾಮೇಶ್ವರ, ಬಂಜಾರರ ಆರಾಧ್ಯದೈವ ಸೇವಾಲಾಲರಜನ್ಮಸ್ಥಳ ಸೂರಗೊಂಡನಕೊಪ್ಪ, ಗೋವಿನಕೋವಿಗ್ರಾಮದ ಶ್ರೀ ಹಾಲಸ್ವಾಮೀಜಿ ಮಠ ಸೇರಿದಂತೆ ಅನೇಕದೇಗುಲಗಳಿವೆ.
ಎಂ.ಪಿ.ಎಂ ವಿಜಯಾನಂದ ಸ್ವಾಮಿ