ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಮಂಡಿಸಿರುವ ಪ್ರಸಕ್ತ ಸಾಲಿನಬಜೆಟ್‌ನ ನೇರ ಲಾಭ ರಾಜ್ಯದ ದಾವಣಗೆರೆಜಿಲ್ಲೆಗೆ ದೊರೆತಿದ್ದು, ಸಿರಿಧಾನ್ಯ ಕ್ಷೇತ್ರದಲ್ಲಿ ಕ್ಷಿಪ್ರಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ.ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ “ಆತ್ಮನಿರ್ಭರಭಾರತ’ಕ್ಕೆ ಬಲ ನೀಡುವ ನಿಟ್ಟಿನಲ್ಲಿ ಈಗಾಗಲೇ”ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ರೂಪಿಸಿದಾವಣಗೆರೆ ಜಿಲ್ಲೆಯಲ್ಲಿ ಸಿರಿಧಾನ್ಯಉತ್ಪನ್ನಗಳಿಗೆವಿಶೇಷ ಪ್ರೋತ್ಸಾಹ ನೀಡುತ್ತಿದೆ.
ಈಗ ಕೇಂದ್ರಸರ್ಕಾರ ಮುಂದಿನ 2023ನೇ ವರ್ಷವನ್ನು”ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದುಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ಸಿರಿಧಾನ್ಯಕ್ಕೆಕೋಯ್ಲೋತ್ತರ ಮೌಲ್ಯವರ್ಧನೆಗೆ ಆದ್ಯತೆ, ವಿದೇಶಿಮಾರುಕಟ್ಟೆ, ಬ್ರಾÂಂಡಿಂಗ್‌ಗೆ ಉತ್ತೇಜನ ಸಿಗಲಿದೆ.ಹೀಗಾಗಿ ಜಿಲ್ಲೆಯ ಸಿರಿಧಾನ್ಯ ಕೃಷಿ ಹಾಗೂಸಿರಿಧಾನ್ಯ ಆಧಾರಿತ ಉತ್ಪನ್ನಗಳ ಉದ್ಯಮಕ್ಕೆ ಆನೆಬಲ ಬಂದಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳುಸಿರಿಧಾನ್ಯ ವಿಚಾರದಲ್ಲಿ ವಿಶೇಷ ಆಸಕ್ತಿ, ಪ್ರೋತ್ಸಾಹನೀಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯಸಿರಿಧಾನ್ಯ ಉತ್ಪನ್ನದ ಮೇಲೆ ಹೆಚ್ಚಿನ ಭರವಸೆಮೂಡಿದೆ. ಸಿರಿಧಾನ್ಯ ಉತ್ಪನ್ನಗಳ ಉದ್ಯಮದಲ್ಲಿಏನೆಲ್ಲ ಸಾಧನೆ ಮಾಡಬಹುದು ಎಂಬಕುತೂಹಲವೂ ಹೆಚ್ಚಿದೆ.ಡಬಲ್ ಧಮಾಕಾ: ಸಿರಿಧಾನ್ಯಕ್ಕೆ ಕೇಂದ್ರಹಾಗೂ ರಾಜ್ಯ ಎರಡೂ ಸರ್ಕಾರಗಳು ವಿಶೇಷಪ್ರೋತ್ಸಾಹ ನೀಡುತ್ತಿರುವುದರಿಂದ ದಾವಣಗೆರೆಜಿಲ್ಲೆಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಕೇಂದ್ರಸರ್ಕಾರದ ಕ್ಲಸ್ಟರ್ ಯೋಜನೆ ಮೂಲಕ ಈಗಾಗಲೇಜಿಲ್ಲೆಯಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರ (ಕಾಮನ್‌ಫೆಸಿಲಿಟಿ ಸೆಂಟರ್) ಸ್ಥಾಪನೆಯಾಗುತ್ತಿದೆ.
ಈಕೇಂದ್ರ ಸ್ಥಾಪನೆಗಾಗಿ ಕೇಂದ್ರದಿಂದ ಏಳೂವರೆಕೋಟಿ ರೂ. ಮಂಜೂರಾಗಿದ್ದು ದಾವಣಗೆರೆತಾಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿ ಒಂದು ಎಕರೆಜಾಗವನ್ನೂ ಪಡೆಯಲಾಗಿದೆ. ಕಟ್ಟಡ ನಿರ್ಮಾಣಕಾರ್ಯವೂ ಆರಂಭವಾಗಿದೆ. ಜಿಲ್ಲೆಯಲ್ಲಿರುವಅಂದಾಜು 40ಕ್ಕೂ ಹೆಚ್ಚು ಸಿರಿಧಾನ್ಯ ಸಂಬಂಧಿತಉದ್ದಿಮೆಗಳಿಗೆ ಈ ಕೇಂದ್ರದಲ್ಲಿ ಒಂದೇ ಕಡೆಮೂಲಸೌಕರ್ಯ ಕಲ್ಪಿಸುವ ಯೋಚನೆ ಇದೆ. ಇಲ್ಲಿಸಿರಿಧಾನ್ಯ ಸಂಸ್ಕರಣೆ, ಮೌಲವರ್ಧನೆ, ಪ್ಯಾಕಿಂಗ್‌ಸೇರಿದಂತೆ ಇನ್ನಿತರ ಕೈಗಾರಿಕಾ ಚಟುವಟಿಕೆ ನಡೆಯಲಿವೆ.
ಎಚ್.ಕೆ. ನಟರಾಜ