ದಾವಣಗೆರೆ: ಕೇಂದ್ರ ಸರ್ಕಾರ ದೇಶದ ಅನ್ನದಾತರಿಗೆನಂಬಿಕೆ, ವಿಶ್ವಾಸದ್ರೋಹ ಮಾಡಿದೆ ಎಂದು ಆರೋಪಿಸಿಸೋಮವಾರ ಸಂಯುಕ್ತ ಹೋರಾಟ, ಸಂಯುಕ್ತಕಿಸಾನ್ ಮೋರ್ಚಾ ಇತರೆ ಸಂಘಟನೆ ಮುಖಂಡರು,ಪದಾಧಿಕಾರಿಗಳು ನಗರದ ಉಪವಿಭಾಗಾಧಿಕಾರಿಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಮೂಲಕ ಜಾರಿಗೊಳಿಸಿದ್ದ ಮೂರು ಕರಾಳ ಕೃಷಿಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿದೆಹಲಿಯಲ್ಲಿ ರೈತರು ಒಂದು ವರ್ಷ ನಿರಂತರಹೋರಾಟ ನಡೆಸಿತ್ತು. ಇದಕ್ಕೆ ಮಣಿದ ಕೇಂದ್ರಸರ್ಕಾರ ಕೃಷಿ ಕಾಯ್ದೆಗಳ ರದ್ದತಿ ಜೊತೆಗೆ ರೈತರ ವಿವಿಧಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು.
ಆದರೆನಿಗದಿತ ಸಮಯದ ನಂತರವೂ ಬೇಡಿಕೆ ಈಡೇರಿಸದೆಅನ್ನದಾತರಿಗೆ ನಂಬಿಕೆ, ವಿಶ್ವಾಸದ್ರೋಹ ಬಗೆದಿದೆ.ಹಾಗಾಗಿ ದೇಶಾದ್ಯಂತ ರೈತರು ಪ್ರತಿಭಟನೆಯಮೂಲಕ ವಿಶ್ವಾಸ ದ್ರೋಹ ದಿನ ಆಚರಿಸುತ್ತಿದ್ದಾರೆಎಂದು ಪ್ರತಿಭಟನಾಕಾರರು ತಿಳಿಸಿದರು.ಕೃಷಿ ಕಾಯ್ದೆ ರದ್ದುಪಡಿಸಿರುವ ಕೇಂದ್ರ ಸರ್ಕಾರ,2022ರ ಜ. 15ರ ಒಳಗಾಗಿ ಕನಿಷ್ಟ ಬೆಂಬಲಬೆಲೆ ಕಾಯ್ದೆ ಜಾರಿ, ಹೋರಾಟ ನಿರತ 1800ಕ್ಕೂಹೆಚ್ಚು ರೈತರ ವಿರುದ್ಧ ದಾಖಲಾಗಿದ್ದ ಕೇಸ್‌ಹಿಂಪಡೆಯುವುದು, ಹೋರಾಟದ ಸಂದರ್ಭದಲ್ಲಿಹುತಾತ್ಮರಾದ 700 ರೈತರ ಕುಟುಂಬಗಳಿಗೆ ಸೂಕ್ತಪರಿಹಾರ ಒದಗಿಸುವುದಾಗಿ ಭರವಸೆ ನೀಡಿತ್ತು.
ಜ. 15ರ ಗಡುವು ಮುಗಿದಿದ್ದರೂ ಕೇಂದ್ರ ಸರ್ಕಾರಯಾವುದೇ ಬೇಡಿಕೆ ಈಡೇರಿದೆ ಇಡೀ ದೇಶದ ರೈತಸಮುದಾಯಕ್ಕೆ ವಿಶ್ವಾಸದ್ರೋಹ ಬಗೆದು ವಚನಭ್ರಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಪ್ರದೇಶದ ಲಕ್ಕಿಂಪುರನಲ್ಲಿ ಕೃಷಿ ಕಾಯ್ದೆವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆಜೀಪ್ ಹರಿಸಿ ನಾಲ್ವರು ರೈತರನ್ನು ಕೊಂದ ಪ್ರಕರಣಕ್ಕೆಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವಅಜಯ್ ಮಿಶ್ರಾ ಪುತ್ರನ ವಿರುದ್ಧದ ಆರೋಪರುಜುವಾತಾಗಿದೆ. ಆದರೂ ಕೇಂದ್ರ ಸರ್ಕಾರಅಜಯ್ ಮಿಶ್ರಾ ಅವರನ್ನು ಸಚಿವ ಸಂಪುಟದಲ್ಲಿಮುಂದುವರೆಸುವ ಮೂಲಕ ರೈತ ವಿರೋಧಿ ನೀತಿಅನುಸರಿಸುತ್ತಿದೆ ಎಂದು ದೂರಿದರು.ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದಂತಹಆಶ್ವಾಸನೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗುವ ಮೂಲಕ ಅನ್ಯಾಯ ಮಾಡಿದೆ. ವಿಶ್ವಾಸ,ನಂಬಿಕೆದ್ರೋಹ ಬಗೆದಿದೆ. ಕೇಂದ್ರ ಸರ್ಕಾರನೀಡಿರುವ ಭರವಸೆ ಈಡೇರಿಸಬೇಕು.
ಇಲ್ಲವಾದಲ್ಲಿಮತ್ತೆ ಅನ್ನದಾತರ ಹೋರಾಟ ಪ್ರಾರಂಭವಾಗಲಿದೆಎಂದು ಎಚ್ಚರಿಸಿದರು.ಆರ್‌ಕೆಎಸ್ ರಾಜ್ಯಾಧ್ಯಕ್ಷ ಡಾ| ಟಿ.ಎಸ್.ಸುನೀತ್‌ಕುಮಾರ್, ರೈತ ಸಂಘದ ರಾಜ್ಯಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಕುಕ್ಕುವಾಡಮಂಜುನಾಥ್, ಐರಣಿ ಚಂದ್ರು, ಇ. ಶ್ರೀನಿವಾಸ್,ಕೆ. ಬಾನಪ್ಪ, ಸತೀಶ್ ಅರವಿಂದ್, ನಾಗಜ್ಯೋತಿ,ಮಧು ತೊಗಲೇರಿ, ನರೇಗಾ ರಂಗನಾಥ್ ಇತರರುಇದ್ದರು. ಉಪವಿಭಾಗಾಧಿಕಾರಿ ಕಚೇರಿ ಮೂಲಕರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.