ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದರೂಪಿತವಾಗುವ ಕಾನೂನುಗಳ ಸದುಪಯೋಗವನ್ನುಎಲ್ಲ ವರ್ಗದವರು ಪಡೆಯಬೇಕು ಎನ್ನುವುದೇಕಾನೂನು ಸೇವಾ ಪ್ರಾಧಿ ಕಾರದ ಮೂಲ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ, ಕಾನೂನುಸೇವಾ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್‌ನಾಯಕ್ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆಯನೆರಳು ಬೀಡಿ ಕಾರ್ಮಿಕರ ಯೂನಿಯನ್‌ಕಚೇರಿಯಲ್ಲಿ ಗುರುವಾರ ನಡೆದ ಕಾನೂನು ಅರಿವುಕಾರ್ಯಕ್ರಮ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯಿಂದಅಸಂಘಟಿತ ಕಾರ್ಮಿಕರಿಗೆ ಕೊಡಮಾಡುವ ಅಹಾರಧಾನ್ಯಗಳ ಕಿಟ್ ವಿತರಣಾ ಸಮಾರಂಭದಲ್ಲಿ ಅವರುಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಯಾವುದೇ ಕಾನೂನುಗಳನ್ನು ರೂಪಿಸಿದರೂ ಅವೆಲ್ಲವೂಸಂವಿಧಾನದ ಅಡಿಯಲ್ಲೇ ಬರುತ್ತವೆ. ಅವುಗಳನ್ನುಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕುಎಂದರು.
ಹಿರಿಯ ನ್ಯಾಯವಾದಿ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಜೀವನ ದಾರುಣ ಸ್ಥಿತಿಗೆ ತಲುಪಿತ್ತು. ಆ ಸಂದರ್ಭದಲ್ಲಿಹಲವಾರು ದಾನಿಗಳು, ಸಂಘ-ಸಂಸ್ಥೆಗಳು ಹಸಿದುಹೈರಾಣಾಗಿದ್ದ ಕುಟುಂಬಗಳಿಗೆ ಆಹಾರ ಧಾನ್ಯಸೇರಿದಂತೆ ಇತರೆ ವಸ್ತುಗಳನ್ನು ನೀಡುವ ಮೂಲಕಸಹಾಯಹಸ್ತ ಚಾಚಿದರು.
ಅದನ್ನು ಮನಗಂಡನಾವು ಚುನಾಯಿಸಿದ ಸರ್ಕಾರಗಳು ನಮ್ಮ ನೆರವಿಗೆಬಂದವು. ಯಾವುದೇ ಸಂದರ್ಭ ಆಗಲಿ, ಹಸಿದವರನೆರವಿಗೆ ಬರಬೇಕಾದುದ್ದು ನಮ್ಮನ್ನು ಆಳುವಸರ್ಕಾರಗಳ ಆದ್ಯ ಕರ್ತವ್ಯ ಎಂದರು.ದಾವಣಗೆರೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಮಾನವೀಯ ಕಳಕಳಿ, ಜನಪರ ಕಾಳಜಿಇರುವ ನ್ಯಾಯಾಧಿಧೀಶರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿ ಕಾರಿಗಳೇ ಜನರ ಬಳಿಗೆಹೋಗುವುದು ಕಷ್ಟ. ಅಂತಹ ವೇಳೆ ನ್ಯಾಯಾಧೀಶರು ಜನರ ಮಧ್ಯೆ ವಿವಿಧ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ಅ ಧಿಕಾರಿ ಇಬ್ರಾಹಿಂ ಸಾಬ್,ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆಜಬೀನಾಖಾನಂ, ಕಾರ್ಯದರ್ಶಿ ಎಂ. ಕರಿಬಸಪ್ಪ ಇದ್ದರು.ಮನೆ ಕೆಲಸ ಮಾಡುವ ಮಹಿಳೆಯರು, ಗೂಡ್ಸ್‌ಶೆಡ್‌ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಯಿತು.