Advertisement

ಸಹಜ ಸ್ಥಿತಿಗೆ ಬಂದ ದೇವನಗರಿ-ಕೋಟೆನಾಡು

08:00 PM Jan 23, 2022 | Team Udayavani |

ದಾವಣಗೆರೆ: ಕೊರೊನಾ ಮೂರನೇ ಅಲೆ ಹಾಗೂಒಮಿಕ್ರಾನ್‌ ವೈರಸ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಘೋಷಿಸಿದ್ದ ವಾರಾಂತ್ಯ ಕರ್ಫ್ಯೂ ರದ್ದುಪಡಿಸಿದ್ದರಿಂದಶನಿವಾರ ಜಿಲ್ಲೆಯಲ್ಲಿ ವ್ಯಾಪಾರ-ವ್ಯವಹಾರ,ಸಂಚಾರ ಸಹಜ ಸ್ಥಿತಿಗೆ ಮರಳಿತು.ವಾರಾಂತ್ಯ ಕರ್ಫ್ಯೂ ಕಾರಣದಿಂದಾಗಿ ಕಳೆದಎರಡು ವಾರಗಳಿಂದ ಶನಿವಾರ-ಭಾನುವಾರಅಂಗಡಿಗಳನ್ನು ಬಂದ್‌ ಮಾಡಿದ ಅಂಗಡಿಕಾರರು,ಶನಿವಾರ ಬೆಳಿಗ್ಗೆ ಎಂದಿನಂತೆ ತಮ್ಮಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದರು.

Advertisement

ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆಬಂದು ತಮಗೆ ಬೇಕಾದ ವಸ್ತುಗಳನ್ನುಖರೀದಿಸಿದರು. ಬಟ್ಟೆ, ಚಿನ್ನಾಭರಣ, ಪಾತ್ರೆಸೇರಿದಂತೆ ಅವಶ್ಯಕವಲ್ಲದ ವಸ್ತು ಮಾರಾಟದಅಂಗಡಿಗಳಲ್ಲಿ ಶನಿವಾರ ವ್ಯಾಪಾರ ಜೋರಾಗಿತ್ತು.ನಗರದ ವಾಣಿಜ್ಯ ಪ್ರದೇಶಗಳಾದ ವಿಜಯಲಕ್ಷಿ¾àರಸ್ತೆ, ಕೆ.ಆರ್‌. ಮಾರುಕಟ್ಟೆ, ಗಡಿಯಾರ ಕಂಬ,ತಾಲೂಕು ಕಚೇರಿ, ಬಿನ್ನಿ ಕಂಪನಿ ರಸ್ತೆ, ಇಸ್ಲಾಂಪೇಟೆ,ಎಂ.ಜಿ.ರಸ್ತೆ, ಮಂಡಿಪೇಟೆ, ಚೌಕಿಪೇಟೆ, ದೊಡ್ಡಪೇಟೆ,ಚಾಮರಾಜಪೇಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿಸಾರ್ವಜನಿಕರ ಒಡಾಟ ಎಂದಿನಂತಿತ್ತು.

ಶನಿವಾರಇಡೀ ದಿನ ಸಾರಿಗೆ ಬಸ್‌, ಖಾಸಗಿ ಬಸ್‌ ಹಾಗೂಸಾರ್ವಜನಿಕ ವಾಹನ ಸಂಚಾರ ಸಹ ಎಂದಿನಂತಿತ್ತು.ವಾರಂತ್ಯದ ಕರ್ಫ್ಯೂ ಹಿಂಪಡೆಯಲಾಗಿದ್ದರೂರಾತ್ರಿ ಕರ್ಫ್ಯೂ ಮಾತ್ರ ವಾರದ ಎಲ್ಲ ದಿನಗಳಲ್ಲಿ ರಾತ್ರಿ10ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದೆ.ಹೀಗಾಗಿ ರಾತ್ರಿ 10 ಗಂಟೆಯ ಬಳಿಕ ಜನ, ವಾಹನಸಂಚಾರ ವಿರಳಗೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next