Advertisement

ಬಾಲಕಾರ್ಮಿಕರ ಸಮೀಕ್ಷೆ ಯಶಸ್ವಿಗೊಳಿಸಿ: ಬೀಳಗಿ

02:43 PM Sep 11, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಗೆ ಸರ್ಕಾರ ಎರಡುಲಕ್ಷ ರೂ.ಬಿಡುಗಡೆಮಾಡಿದೆ.ಆಸಕ್ತ ಸ್ವಯಂ  ಸೇವಾಸಂಸ್ಥೆಗಳು ಭಾಗವಹಿಸಿ ಯಶಸ್ವಿಯಾಗಿ ಸರ್ವೆಕಾರ್ಯ ಪೂರ್ಣಗೊಳಿಸಬೇಕು ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

Advertisement

ಜಿಲ್ಲಾ ಬಾಲಕಾರ್ಮಿಕ ಯೋಜನಾಸೊಸೈಟಿ, ಕಾರ್ಮಿಕ ಇಲಾಖೆಯ ವತಿಯಿಂದಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲಕಾರ್ಮಿಕಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಯಲ್ಲಿಭಾಗವಹಿಸಲು ಇಚ್ಛಿಸುವವರು ಸೆ. 15ರೊಳಗಾಗಿ ಬಾಲಕಾರ್ಮಿಕ ಯೋಜನಾ ಸಂಘದಯೋಜನಾ ನಿರ್ದೇಶಕರನ್ನು ಸಂಪರ್ಕಿಸಬೇಕು.ಸೆ. 30ರೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಿವರದಿ ನೀಡಬೇಕು. ಈ ತಿಂಗಳೊಳಗಾಗಿ ವರದಿನೀಡಲು ಸಾಧ್ಯವಾಗದಿದ್ದಲ್ಲಿ ದಿನಾಂಕವನ್ನುಮುಂದುವರೆಸಲು ಸೂಚಿಸಲಾಗುವುದುಎಂದರು.

ಬಾಲಕಾರ್ಮಿಕ ಮಕ್ಕಳ ಸಮೀಕ್ಷೆ ಕೇವಲನಾಮಕಾವಸ್ತೆ ಕೆಲಸವಾಗದೆ, ಬಾಲಕಾರ್ಮಿಕರನ್ನುಕೆಲಸದಿಂದ ಬಿಡುಗಡೆಗೊಳಿಸುವ ಅರ್ಥಪೂರ್ಣಕಾರ್ಯವಾಗಬೇಕು. ಸಮೀಕ್ಷೆ ನಡೆಸಲುತಂಡಗಳನ್ನು ರಚಿಸಬೇಕಿದ್ದು, ಪ್ರತಿ ತಂಡಕ್ಕೆಏಳು ಜನರಂತೆ ತಾಲೂಕುವಾರು ತಂಡಗಳನ್ನುರಚಿಸಲಾಗುವುದು.

ಈ ತಂಡಗಳ ಅಧ್ಯಕ್ಷತೆಯನ್ನು ಆಯುಕ್ತರು ವಹಿಸಲಿದ್ದು, ಕಂದಾಯಇಲಾಖೆಯ ಅಧಿಕಾರಿಗಳು, ಆರೋಗ್ಯಇಲಾಖೆಯ ಅಧಿಕಾರಿಗಳು, ಸಬ್‌ಇನ್ಸೆ ³ಕ್ಟರ್‌ಇರುತ್ತಾರೆ. ಬಾಲಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಕರಿಂದ ಶೀಘ್ರ ಅರ್ಜಿಆಹ್ವಾನಿಸಲಿದ್ದು,ಸಮೀಕ್ಷಾ ಕಾರ್ಯಕ್ಕೆ ದಿನಕ್ಕೆ 200 ರೂ. ಗೌರವಧನನೀಡಲಾಗುವುದು ಎಂದು ತಿಳಿಸಿದರು.

Advertisement

ಕಲಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿತೊಡಗಿಸಿಕೊಳ್ಳುವುದು ಅತ್ಯಂತಕಳವಳಕಾರಿಯಾಗಿದೆ. ಶಿಕ್ಷಣ ವಂಚಿತ ಹಾಗೂದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನುರಾÐದ ‌ó ಮುಖ್ಯವಾಹಿನಿಗೆ ಕರೆ ತರಲು ಸರ್ಕಾರ,ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರಯತ್ನಿಸಬೇಕಿದೆ.ಬಾಲಕಾರ್ಮಿಕರನ್ನುದುಡಿಮೆಗೆಹಚ್ಚಿದರೆ ಅವರ ಮನಸ್ಸು ಹಾಗೂ ದೇಹದ ಮೇಲೆದುಷ್ಪರಿಣಾಮ ಬೀರಲಿದೆ. 14ವರ್ಷದೊಳಗಿನಮಕ್ಕಳನ್ನು ಯಾವುದೇ ಅಪಾಯಕಾರಿ ವೃತ್ತಿಯಲ್ಲಿತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.

ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿಯ ಒತ್ತಡ,ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ದುಡಿಮೆಗೆಹಚ್ಚುವುದರಿಂದ ಮಕ್ಕಳು ವಿದ್ಯಾಭ್ಯಾಸದಿಂದವಂಚಿತರಾಗುತ್ತಾರೆ ಎಂದರು.ಸಹಾಯಕ ಕಾರ್ಮಿಕ ಆಯುಕ್ತೆ ಎಸ್‌.ಆರ್‌. ವೀಣಾ ಮಾತನಾಡಿ, ಬಾಲ್ಯಾವಸ್ಥೆಮತ್ತು ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧಮತ್ತು ನಿಯಂತ್ರಣ) ಕಾಯ್ದೆ 1986ರನ್ವಯಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನುಕೆಲಸಕ್ಕೆ ನಿಯೋಜಿಕೊಳ್ಳುವುದು ಹಾಗೂ 18ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್‌ರಹಿತಬಂಧಿಸಬಹುದಾದ) ಅಪರಾಧವಾಗಿದೆ.

ಶಿಕ್ಷಣಕ್ಕೆ ಮಾರಕವಾಗುವಂತೆ ಮಗುವಿನ ಕುಟುಂಬವುನಡೆಸುವ ಉದ್ದಿಮೆಗಳಲ್ಲಿ ಹಾಗೂ ಬಾಲ ನಟಅಥವಾ ನಟಿಯಾಗಿ ಕೆಲಸ ನಿರ್ವಹಿಸಲು ಸೀಮಿತಅವಕಾಶವನ್ನು ಮಾತ್ರ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಎಸ್ಪಿ ಸಿ.ಬಿ. ರಿಷ್ಯಂತ್‌, ಡಿಎಚ್‌ಒ ಡಾ|ನಾಗರಾಜ್‌, ಮಹಿಳಾ ಮತ್ತು ಮಕಳ ‌R ಅಭಿವೃದ್ಧಿಇಲಾಖೆ ಉಪನಿರ್ದೇಶಕ ವಿಜಯಕುಮಾರ್‌,ಕಾರ್ಮಿಕ ಅಧಿಕಾರಿ ಇಬ್ರಾಹಿಂ,ಕಾರ್ಮಿಕ ನಿರೀಕ್ಷಕನಾಗೇಶ್‌, ರಾಜಪ್ಪ, ಕವಿತಾಕುಮಾರಿ, ಜಿಲ್ಲಾ ಮತ್ತುತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next