ದಾವಣಗೆರೆ: ಭಾರತೀಯ ಸಂಸ್ಕೃತಿ, ಸಂಸ್ಕಾರ, ಕನ್ನಡನಾಡು-ನುಡಿಯ ಇತಿಹಾಸ, ಪರಂಪರೆಯನ್ನುವೈಭವೀಕರಿಸುವಂತಹ ಆದ್ಯ ಕರ್ತವ್ಯಪ್ರತಿಯೊಬ್ಬರದ್ದಾಗಿದೆ ಎಂದು ಮೇಯರ್ ಎಸ್.ಟಿ.ವೀರೇಶ್ ಹೇಳಿದರು.
ಮಾಗನೂರು ಬಸಪ್ಪ ರೋಟರಿ ಕ್ಲಬ್‌ಸಭಾಂಗಣದಲ್ಲಿ ಕಲಾಕುಂಚ ವಿದ್ಯಾನಗರಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಮೂಲೆಗುಂಪಾಗಿ ನಶಿಸಿ ಹೋಗುತ್ತಿರುವ ಸಾಂಸ್ಕೃತಿಕಚಟುವಟಿಕೆಗಳನ್ನು ಉಳಿಸಿ ಬೆಳೆಸುವುದರಿಂದಮಾನವನ ಜೀವನಕ್ಕೆ ಪೂರ್ಣ ಪ್ರಮಾಣದಸಾರ್ಥಕತೆ ಬರುತ್ತದೆ ಎಂದರು.ಕಳೆದ ಮೂರು ದಶಕಗಳಿಂದ ಕಲಾಕುಂಚಸಾಂಸ್ಕೃತಿಕ ಸಂಸ್ಥೆ ವಾಣಿಜ್ಯನಗರಿ ದಾವಣಗೆರೆಯನ್ನುಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿನಪ್ರಯತ್ನ, ಸಾಧನೆ ಶ್ಲಾಘನೀಯ.
ಸಂಸ್ಥಾಪಕಸಾಲಿಗ್ರಾಮ ಗಣೇಶ ಶೆಣೈ ಅವರ ಕಠಿಣ ಪರಿಶ್ರಮಇತರ ಸಂಘಟಕರಿಗೆ ಮಾದರಿ ಎಂದು ಶ್ಲಾಘಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಾಂಸ್ಕೃತಿಕಚಟುವಟಿಕೆಗಳು ಮಾನವನ ಜೀವನಕ್ಕೆ ಸದಾಸ್ಫೂ³ರ್ತಿ. ಮನಸ್ಸುಗಳನ್ನು ಅರಳಿಸುವ ಶಕ್ತಿ, ಕಲೆ,ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಇದೆ. ಕರ್ನಾಟಕದಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನವನ್ನುವಾಣಿಜ್ಯ ನಗರಿಯಲ್ಲಿ ಬೆಳೆಸುವಲ್ಲಿ ಕಲಾಕುಂಚ,ಯಕ್ಷರಂಗ ಸಂಘಟನೆಗಳ ಸಾಧನೆ ಅಪಾರ ಎಂದುತಿಳಿಸಿದರು.
ಕಲಾಕುಂಚ ವಿದ್ಯಾನಗರ ಶಾಖೆಯ ನೂತನಅಧ್ಯಕ್ಷ ಬಿ. ದಿಳ್ಯಪ್ಪ ಮಾತನಾಡಿ, ಯಾವುದನ್ನೇ ಆಗಲಿಕಾಯಕ ಪ್ರಜ್ಞೆ, ಬದ್ಧತೆ, ನಿಷ್ಠೆಯಿಂದ ಕೈಗೊಂಡಾಗಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಸಮಾರಂಭದಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮಗಣೇಶ ಶೆಣೈ ಮಾತನಾಡಿ, ಪ್ರತಿಯೊಬ್ಬರಲ್ಲೂಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ.ಮಹಿಳೆಯರಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳಿಗೆಮುಕ್ತವಾದ ವೇದಿಕೆ, ಅವಕಾಶ ಕೊಡುವ ಸದುದ್ದೇಶಕಲಾಕುಂಚದ್ದಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯರಾದ ಗೀತಾ ಬಿ.ದಿಳ್ಯಪ್ಪ, ವೀಣಾ ನಂಜಪ್ಪ, ಗೌರಮ್ಮ ಗಿರೀಶ್,ಕಲಾಕುಂಚ ಮಹಿಳಾ ವಿಭಾಗದ ಜ್ಯೋತಿ ಗಣೇಶಶೆಣೈ, ಹೇಮಾ ಶಾಂತಪ್ಪ ಪೂಜಾರಿ, ಮುರಿಗಯ್ಯಕುರ್ಕಿ, ಎ. ಕೊಟ್ರಪ್ಪ ಕಿತ್ತೂರು ಇತರರು ಇದ್ದರು.