Advertisement

ವಾರಾಂತ್ಯ ಕರ್ಫ್ಯೂಗೆ ಸ್ಪಂದಿಸಿದ ಜನ

04:39 PM Jan 09, 2022 | Team Udayavani |

ದಾವಣಗೆರೆ: ಕೊರೊನಾ ಮೂರನೇ ಅಲೆ ಹಾಗೂಒಮಿಕ್ರಾನ್‌ ವೈರಸ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಘೋಷಿಸಿರುವ ವಾರಾಂತ್ಯ ಕರ್ಫ್ಯೂವಿನ ಮೊದಲ ದಿನಶನಿವಾರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರ ಪ್ರದೇಶಗಳಲ್ಲಿ ಅಘೋಷಿತ ಬಂದ್‌ ವಾತಾವರಣನಿರ್ಮಾಣವಾಗಿತ್ತು.ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿಯೂ ಈಬಾರಿ ಸಾರಿಗೆ ಸಂಸ್ಥೆಯ ಬಸ್‌ ಸಂಚಾರಕ್ಕೆ ಅವಕಾಶನೀಡಲಾಗಿತ್ತು.

Advertisement

ಆದರೆ ಕರ್ಫ್ಯೂ ಇದೆ ಎಂಬ ಕಾರಣಕ್ಕಾಗಿಬಹುತೇಕ ಜನರು ದೂರದ ಪ್ರಯಾಣಕ್ಕೆ ಸ್ವಯಂಬ್ರೇಕ್‌ ಹಾಕಿದ್ದರಿಂದ ಬಸ್‌ನಿಲ್ದಾಣದಲ್ಲಿ ಬಸ್‌ಗಳಿದ್ದರೂಪ್ರಯಾಣಿಕರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.ಪ್ರಯಾಣಿಕರಿಲ್ಲದೇ ಇರುವುದರಿಂದ ಹಲವುಮಾರ್ಗಗಳ ಬಸ್‌ ಸ್ಥಗಿತಗೊಳಿಸಲಾಗಿತ್ತು. ಸದಾಜನರಿಂದ ಗಿಜುಗುಡುತ್ತಿದ್ದ ಸಾರಿಗೆ ಬಸ್‌ನಿಲ್ದಾಣಜನರಿಲ್ಲದೇ ಬಿಕೋ ಎಂದಿತು. ಕರ್ಫ್ಯೂಗೆ ಬೆಂಬಲಸೂಚಿಸಿ ಖಾಸಗಿ ಬಸ್‌ ಮಾಲೀಕರು ಸಹ ಬಸ್‌ ಸಂಚಾರಸ್ಥಗಿತಗೊಳಿಸಿದ್ದರು.

ಹೀಗಾಗಿ ಖಾಸಗಿ ಬಸ್‌ನಿಲ್ದಾಣಸಹ ಬಸ್‌, ಪ್ರಯಾಣಿಕರು ಇಲ್ಲದೆ ಬಣಗುಟ್ಟಿತು.ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರಿಂದಆಸ್ಪತ್ರೆ, ಔಷಧಿ ಅಂಗಡಿಗಳು, ದಿನಸಿ ಅಂಗಡಿಗಳು,ಹೋಟೆಲ್‌, ಬೇಕರಿ, ಹಾಲಿನ ಡೈರಿ, ತರಕಾರಿ ಮತ್ತುಹಣ್ಣುಗಳ ಅಂಗಡಿಗಳು ಮಾತ್ರ ತೆರೆದಿದ್ದವು.

ಆದರೆಕರ್ಫ್ಯೂ ಕಾರಣದಿಂದ ಜನರು ಮನೆಯಿಂದ ಹೊರಗೆಬಾರದಿರುವುದರಿಂದ ಅಂಗಡಿಕಾರರು ಗ್ರಾಹಕರುಹಾಗೂ ವ್ಯಾಪಾರವೂ ಇಲ್ಲದೆ ಪರದಾಡಿದರು.ಇನ್ನು ತಳ್ಳುವ ಗಾಡಿ ವ್ಯಾಪಾರಿಗಳು ಮನೆ ಮನೆಗೆಹೋಗಿ ತರಕಾರಿ, ಸೊಪ್ಪು, ಹಣ್ಣು ಮಾರಾಟ ಮಾಡಿಸಮಾಧಾನಪಟ್ಟರು. ಸಂಚಾರಕ್ಕೆ ಷರತ್ತು ಇಲ್ಲದವಾಹನಗಳು ಹಾಗೂ ಅಗತ್ಯ ಸೇವೆಯಲ್ಲಿರುವವರವಾಹನಗಳು ಮಾತ್ರ ಶನಿವಾರ ರಸ್ತೆಗಿಳಿದಿದ್ದರಿಂದರಸ್ತೆಗಳಲ್ಲಿ ವಾಹನ ದಟ್ಟಣೆ ಕುಗ್ಗಿತ್ತು. ಜನರಿಲ್ಲದೇಆಟೋ ಸಂಚಾರ ಅಷ್ಟೊಂದು ಇರಲಿಲ್ಲ. ಸದಾ ಜನ,ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಪ್ರ

Advertisement

Udayavani is now on Telegram. Click here to join our channel and stay updated with the latest news.

Next