ದಾವಣಗೆರೆ: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ ನಿಗದಿಪಡಿಸಬೇಕು ಎಂದು ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಸದ್ಯ ಪೊಲೀಸ್‌ಇಲಾಖೆಯಲ್ಲಿ ಕ್ರೀಡಾಪಟುಗಳ ನೇಮಕಾತಿಯಲ್ಲಿಶೇ.2 ಮೀಸಲಾತಿ ಇದೆ. ಅದೇ ಮಾದರಿಯಲ್ಲಿ ಎಲ್ಲಇಲಾಖೆಗಳಲ್ಲೂ ಮೀಸಲಾತಿ ನಿಗದಿಪಡಿಸಬೇಕುಎಂಬ ಮನವಿಗೆ ಸಿಎಂ ಒಪ್ಪಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿಯಿಂದಕ್ರೀಡಾಪಟುಗಳಿಗೆ ಸಾಕಷ್ಟು ಅನುಕೂಲ ಆಗಲಿದೆ.ಪದವಿ ಕಾಲೇಜುಗಳ ನೇಮಕಾತಿ ಪ್ರಕ್ರಿಯೆಯಲ್ಲೂದೈಹಿಕ ಶಿಕ್ಷಣ ಕೋರ್ಸ್ ಪೂರೈಸಿದವರಿಗೆ ಆದ್ಯತೆನೀಡಬೇಕು ಎಂದು ಸಂಬಂಧಿಸಿದ ಇಲಾಖೆಗೆ ಪತ್ರಬರೆಯಲಾಗಿದೆ ಎಂದರು.
ಪ್ರಧಾನಿ ಮೋದಿ ಆಶಯದಂತೆ ರಾಜ್ಯದಲ್ಲೂ ಕ್ರೀಡಾಕ್ಷೇತ್ರವನ್ನು ಉತ್ಸವ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಲವಾರು ಯೋಜನೆ ರೂಪಿಸಲಾಗಿದೆ. 31 ಜಿಲ್ಲೆಗಳಲ್ಲಿ ಮಹಿಳಾ ನ್ಪೋರ್ಟ್ಸ್ ಹಾಸ್ಟೆಲ್ ಪ್ರಾರಂಭಮಾಡಲಾಗುವುದು. ಪ್ರತಿ ಹಾಸ್ಟೆಲ್‌ಗೆ1.50ಕೋಟಿಅನುದಾನ ವೆಚ್ಚ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿನ ಕ್ರೀಡಾಪ್ರತಿಭೆಗಳನ್ನು ಗುರುತಿಸುವುದಕ್ಕೆಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.
ಪ್ರಧಾನಿ ಆಶಯದಂತೆ ಖೇಲೋ ಇಂಡಿಯಾರಾಷ್ಟ್ರೀಯ ಯೋಜನೆಯಡಿ ಕ್ರೀಡೆಯನ್ನುಮೇಲ್ದರ್ಜೆಗೇರಿಸಲಾಗುವುದು.ಆನಿಟ್ಟಿನಲ್ಲಿರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಕೈಗೊಂಡಿದೆ.ಕೈಗಾರಿಕೆ, ಉದ್ದಿಮೆ, ಸಂಘ-ಸಂಸ್ಥೆಗಳುಕ್ರೀಡಾಪಟುಗಳನ್ನು ದತ್ತು ಪಡೆದು ಅವರಿಗೆ ಎಲ್ಲರೀತಿಯ ಅಗತ್ಯ ಸೌಲಭ್ಯ ಒದಗಿಸಿದಲ್ಲಿ ಉತ್ತಮಕ್ರೀಡಾಪಟುಗಳು ಸಿದ್ಧವಾಗುತ್ತಾರೆ.
ಸ್ವಾತಂತ್ರ್ಯದ75ನೇ ವರ್ಷದ ಅಮೃತ ಮಹೋತ್ಸವದಅಂಗವಾಗಿ ಸರ್ಕಾರ 75 ಕ್ರೀಡಾಪಟುಗಳನ್ನುದತ್ತು ತೆಗೆದುಕೊಳ್ಳಲಿದ್ದು, ಅವರಿಗೆ ಎಲ್ಲ ರೀತಿಯತರಬೇತಿ ನೀಡಲಾಗುವುದು.
ಮಾಜಿ ಸೊಎ.ಯಡಿಯೂರಪ್ಪ ಕ್ರೀಡೆಗೆ ಹೆಚ್ಚಿನ ಸಹಕಾರನೀಡಿದ್ದರು. ಬಸವರಾಜ ಬೊಮ್ಮಾಯಿ ಸಹ ಅಗತ್ಯಸಹಕಾರ ನೀಡುತ್ತಿದ್ದಾರೆ. ದಾವಣಗೆರೆಯಲ್ಲಿ 7ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು ಎಂದರು.