Advertisement

ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ

03:12 PM Jan 04, 2022 | Team Udayavani |

ಹೊನ್ನಾಳಿ:ಸರ್ಕಾರಿಕಚೇರಿಯಲ್ಲಿಮಧ್ಯವರ್ತಿಗಳುತೊಂದರೆ ಕೊಟ್ಟರೂ ಅವರ ವಿರುದ್ಧ ಪ್ರಕರಣದಾಖಲಿಸುವಂತೆ ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿಸೋಮವಾರ ನಡೆದ ತ್ತೈಮಾಸಿಕ ಸಭೆಯಲ್ಲಿ ಇಲಾಖಾವಾರು ಮಾಹಿತಿ ಪಡೆದು ಅವರುಮಾತನಾಡಿದರು.

Advertisement

ಸರ್ಕಾರದ ಸೌಲಭ್ಯಗಳುಫಲಾನುಭವಿಗಳಿಗೆ ನೇರವಾಗಿ ತಲುಪಬೇಕು.ಜನರು ನಮಗೆ ಕೆಲಸ ಮಾಡಲು ಅವಕಾಶಕೊಟ್ಟಿದ್ದು ಅದನ್ನು ಆತ್ಮಸಾಕ್ಷಿಯಿಂದ ಮಾಡೋಣ.ಸರ್ಕಾರಿ ಕಚೇರಿಯಲ್ಲಿ ಯಾವುದೇ ಕಾರಣಕ್ಕೂಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ. ಅಲ್ಲದೆಯಾರೇ ಬಂದು ಅಧಿಕಾರಿಗಳನ್ನು ಬ್ಲಾಕ್‌ವೆುàಲ್‌ಮಾಡಿದರೂ ಅವರ ವಿರುದ್ಧ ಪ್ರಕರಣ ದಾಖಲಿಸಿ.

ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದರು.ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಪ್ರತಿಯೊಂದು ಗ್ರಾಮ ಪಂಚಾಯಿತಿಗೆ 30ರಿಂದ50 ಮನೆಗಳು ಸದ್ಯದಲ್ಲೇ ಮಂಜೂರಾಗಲಿವೆ.ಮನೆಗಳ ಹಂಚಿಕೆ ಸಮರ್ಪಕವಾಗಿ ಆಗಬೇಕು.ಇದರಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರನಡೆಯಬಾರದು ಎಂದು ತಾಕೀತು ಮಾಡಿದರು.ಹೊನ್ನಾಳಿ ಹೊರವಲಯದ ಮಲ್ಲದೇವನಕಟ್ಟೆಬಳಿ 29 ಎಕರೆ ಜಮೀನು ಗುರುತಿಸಿದ್ದು, ನಿವೇಶನರಹಿತರಿಗೆ ಅಲ್ಲಿ ನಿವೇಶನ ನೀಡಲಾಗುವುದು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಮಹತ್ವಾಕಾಂಕ್ಷಿ ಯೋಜನೆ ಜಲಜೀವನ ಮಿಷನ್‌ಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ. ಅಧಿಕಾರಿಗಳುಅವರ ಮನವೊಲಿಸುವಂತೆ ತಿಳಿಸಿದರು.

ಪಟ್ಟಣದಾದ್ಯಂತ ಹಂದಿ ಹಾವಳಿಜಾಸ್ತಿಯಾಗಿದ್ದು, ಒಂದು ವಾರದ ಒಳಗೆಹಂದಿಗಳನ್ನು ಹಿಡಿದು ಸ್ಥಳಾಂತರಿಸುವಂತೆಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.ಅಮೃತ ಗ್ರಾಮ ಯೋಜನೆಯಡಿ ಹೊನ್ನಾಳಿಯಕುಂದೂರು, ಅರಕೆರೆ, ಸಾಸ್ವೇಹಳ್ಳಿ ಹಾಗೂನ್ಯಾಮತಿ ತಾಲೂಕಿನ ಸುರಹೊನ್ನೆ, ಕೆಂಚಿಕೊಪ್ಪ,ಚೀಲೂರು ಆಯ್ಕೆಯಾಗಿದ್ದು, ಅಭಿವೃದ್ಧಿ ಕಾರ್ಯಆರಂಭಗೊಂಡಿದೆ ಎಂದ ಶಾಸಕರು, ಈಗಾಗಲೇಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕೆರೆತುಂಬಿಸುವ 518ಕೋಟಿ ರೂ. ವೆಚ್ಚದ ಕಾಮಗಾರಿಪ್ರಗತಿಯಲ್ಲಿದೆ ಎಂದರು.

Advertisement

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌,ಬಿಆರ್‌ಸಿಎಸ್‌ ಜಯಪ್ರಕಾಶ್‌, ತಹಶೀಲ್ದಾರ್‌ಬಸವನಗೌಡ ಕೋಟೂರ, ಬಗರ್‌ಹುಕುಂ ಸಮಿತಿಅಧ್ಯಕ್ಷ ಮಾದೇನಹಳ್ಳಿ ನಾಗರಾಜ್‌, ಸದಸ್ಯರಾದಎಂ.ಆರ್‌.ಮಹಾಂತೇಶ್‌, ಶಾಂತರಾಜ್‌ ಸೇರಿದಂತೆವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next