ದಾವಣಗೆರೆ:ಜಿಲ್ಲೆಯಲ್ಲಿರುವ15 ವರ್ಷ ಮೇಲ್ಪಟ್ಟ ಎಲ್ಲವಿದ್ಯಾರ್ಥಿಗಳೂ ಕೊರೊನಾ ಲಸಿಕೆ ಹಾಕಿಸಿಕೊಂಡಲ್ಲಿಮಾತ್ರ ಒಮಿಕ್ರಾನ್ ತಡೆಗಟ್ಟಲು ಸಾಧ್ಯ ಎಂದುದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು.
ನಗರದ ಮೋತಿವೀರಪ್ಪ ಸರ್ಕಾರಿ ಕಾಲೇಜಿನಲ್ಲಿಸೋಮವಾರ ಆಯೋಜಿಸಿದ್ದ 15ರಿಂದ 18 ವರ್ಷದಒಳಗಿನ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕಾಅಭಿಯಾನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಕೊರೊನಾ, ಒಮಿಕ್ರಾನ್ ತಡೆಗಟ್ಟುವ ಉದ್ದೇಶದಿಂದಲೇಎಲ್ಲ ಕಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೂಲಸಿಕೆ ನೀಡುವ ಅಭಿಯಾನ ರೂಪಿಸಲಾಗಿದೆ.ಕೇರಳ, ಮಹಾರಾಷ್ಟ್ರ, ಗೋವಾದಂತೆ ಒಮಿಕ್ರಾನ್‌ವಿಪರೀತವಾಗಿ ಹೆಚ್ಚುತ್ತಿದ್ದು ಎಲ್ಲರೂ ಮುಂಜಾಗ್ರತೆವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,ಒಟ್ಟಾರೆ ಜಿಲ್ಲೆಯಲ್ಲಿ15 ರಿಂದ18 ವರ್ಷದ ಒಳಗಿನ88ಸಾವಿರ ವಿದ್ಯಾರ್ಥಿಗಳಿದ್ದಾರೆ. ಸದ್ಯ65 ಸಾವಿರ ಡೋಸ್‌ಲಸಿಕೆ ಲಭ್ಯವಿದೆ. ಎಲ್ಲಾ ತಾಲೂಕುಗಳು ಒಳಗೊಂಡಂತೆ503 ಕೇಂದ್ರಗಳಲ್ಲಿ ಲಸಿಕೆ ನೀಡಲು ಆಯೋಜನೆಮಾಡಲಾಗಿದೆ. ಮೊದಲ ಡೋಸ್ ನೀಡಿದ28 ದಿನಗಳನಂತರ ಎರಡನೇ ಡೋಸ್ ನೀಡಲಾಗುವುದು ಎಂದುತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಇಳಿಮುಖವಾಗಿದೆ ಎಂಬ ಕಾರಣಕ್ಕೆ ಸಾರ್ವಜನಿಕರುಮಾಸ್ಕ್ ಧರಿಸದೇ ಇರುವುದು ಮತ್ತು ಸಾಮಾಜಿಕಅಂತರದ ಬಗ್ಗೆ ಅಲಕ್ಷé ಮಾಡಬಾರದು. ನಾಗರಿಕರುಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸಬೇಕು. ದಂಡವಿಧಿಸುತ್ತಾರೆ ಎಂಬ ಭಯಕ್ಕೆ ಧರಿಸುವ ಬದಲುಸ್ವಇಚ್ಛೆಯಿಂದ ಜಾಗೃತಿ ವಹಿಸಬೇಕು ಎಂದು ಮನವಿಮಾಡಿದರು.
ಮೇಯರ್ ಎಸ್.ಟಿ. ವೀರೇಶ್, ಸದಸ್ಯಕೆ. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಡಾ| ವಿಜಯಮಹಾಂತೇಶದಾನಮ್ಮನವರ್, ಮಹಾನಗರ ಪಾಲಿಕೆ ಆಯುಕ್ತವಿಶ್ವನಾಥ್ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿಡಾ| ನಾಗರಾಜ, ಆರ್‌ಸಿಎಚ್ ಅಧಿಕಾರಿ ಡಾ|ಎಸ್. ಮೀನಾಕ್ಷಿ, ಪದವಿಪೂರ್ವ ಶಿಕ್ಷಣ ಇಲಾಖೆಉಪನಿರ್ದೇಶಕ ಎಂ. ಶಿವರಾಜು, ಮೋತಿ ವೀರಪ್ಪಕಾಲೇಜಿನ ಪ್ರಾಚಾರ್ಯ ಎಸ್. ಪಂಚಾಕ್ಷರಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರುಇದ್ದರು.