Advertisement

ವಿದ್ಯಾರ್ಥಿಗಳಿಗೆ ಕನ್ನಡ ಏಕಾಂಕ ನಾಟಕ ಸ್ಪರ್ಧೆ

05:03 PM Jan 02, 2022 | Team Udayavani |

ದಾವಣಗೆರೆ: ದಾವಣಗೆರೆಯ ವೃತ್ತಿ ರಂಗಭೂಮಿರಂಗಾಯಣ ಸ್ವಾತಂತ್ರೋÂತ್ಸವದ ಅಮೃತೋತ್ಸವ ನಿಮಿತ್ತಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಏಕಾಂಕ ನಾಟಕಸ್ಪರ್ಧೆಯನ್ನು ಜ. 16ರಿಂದ 25ರವರೆಗೆ ನಗರದ ಪದ್ಮಶ್ರೀಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆಸಲಾಗುವುದುಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕಯಶವಂತ ಸರದೇಶಪಾಂಡೆ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆನೀಡಿದ ಅವರು, ವೃತ್ತಿ ರಂಗಭೂಮಿ ರಂಗಾಯಣ ಶಾಖೆಮತ್ತು ಕೆನರಾ ಬ್ಯಾಂಕ್‌ ವಿನೋಬ ನಗರ ಶಾಖೆಯಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ರಂಗಾಸಕ್ತ ಬೆಳೆಸಲುನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಉತ್ತಮವಾದ ಮೂರುನಾಟಕಗಳನ್ನು ಆಯ್ದು ಪ್ರಥಮ ಬಹುಮಾನವಾಗಿ 10ಸಾವಿರ ರೂ, ದ್ವಿತೀಯ ಬಹುಮಾನವಾಗಿ 7500ರೂ.ಮತ್ತು ತೃತೀಯ ಬಹುಮಾನವಾಗಿ 5ಸಾವಿರ ರೂ. ಹಾಗೂಪ್ರತಿ ವಿದ್ಯಾರ್ಥಿಗಳಿಗೂ ಪ್ರಶಸ್ತಿಪತ್ರ ಹಾಗೂ ವೈಯಕ್ತಿಕಬಹುಮಾನವಾಗಿ ಒಂದು ಸಾವಿರ ರೂ. ನೀಡಲಾಗುವುದುಎಂದರು.

ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಎಂಬ ಎರಡುವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಾಲಾ-ಕಾಲೇಜುಪಠ್ಯಾಧಾರಿತಏಕಾಂಕಗಳನ್ನುಅಥವಾದೇಶಭಕ್ತಿಯಕಥಾವಸ್ತುಹೊಂದಿದ ಏಕಾಂಕಗಳಿಗೆ ಆದ್ಯತೆ ನೀಡಲಾಗುವುದು. ಪ್ರತಿತಂಡಕ್ಕೆ 1500 ರೂ. ಪ್ರವೇಶ ಶುಲ್ಕವಿದೆ. ಭಾಗವಹಿಸುವತಂಡಗಳಿಗೆ ರಂಗವೇದಿಕೆ, ಧ್ವನಿ-ಬೆಳಕಿನ ಕನಿಷ್ಠ ವ್ಯವಸ್ಥೆಮಾಡಲಾಗುವುದು. ಏಕಾಂಕ ನಾಟಕಗಳಿಗೆ ಬೇಕಾಗುವಪ್ರಸಾದನ, ವೇಷಭೂಷಣ, ರಂಗಸಜ್ಜಿಕೆ, ಸಂಗೀತದವ್ಯವಸ್ಥೆಯನ್ನು ಆಯಾ ಶಾಲಾ-ಕಾಲೇಜು ತಂಡಗಳುಮಾಡಿಕೊಳ್ಳಬೇಕು.

ಸ್ಥಳೀಯ ಇಬ್ಬರು ಮತ್ತು ಓರ್ವಆಹ್ವಾನಿತರುತೀಪುìಗಾರರಾಗಿಭಾಗವಹಿಸುವರು.ಆಸಕ್ತರುಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದುಅವರು ಮನವಿ ಮಾಡಿದರು.ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next