Advertisement

ಸಹಕಾರ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಅಗತ್ಯ

04:48 PM Jan 02, 2022 | Team Udayavani |

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿತಂತ್ರಜ್ಞಾನದೊಂದಿಗೆ ಸಹಕಾರ ಕ್ಷೇತ್ರವನ್ನಯಶಸ್ವಿಯಾಗಿ ಮುನ್ನಡೆಸಬೇಕು ಎಂದು ಜಿಲ್ಲಾಸಹಕಾರಒಕ್ಕೂಟದಅಧ್ಯಕ್ಷಎನ್‌.ಎ.ಮುರುಗೇಶ್‌ಹೇಳಿದರು.ಇಲ್ಲಿನ ವಿನೋಬನಗರದ ಕಲಾಪ್ರಕಾಶ ವೃಂದ,ದಾವಣಗೆರೆ-ಹರಿಹರ ಅರ್ಬನ್‌ ಬ್ಯಾಂಕ್‌ಸಮುದಾಯ ಭವನದಲ್ಲಿ ರಾಜ್ಯ ಸಹಕಾರಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾಸಹಕಾರ ಒಕ್ಕೂಟ, ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಜಿಲ್ಲಾ ಕೇಂದ್ರ ಸಹಕಾರಬ್ಯಾಂಕಿನ ಕ್ಷೇತ್ರಾಧಿಕಾರಿಗಳಿಗೆ ಏರ್ಪಡಸಿದ್ದ ವಿಶೇಷಕಾರ್ಯದಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಅವರುಮಾತನಾಡಿದರು. ತಂತ್ರಜ್ಞಾನದ ಜೊತೆಗೆ ಸಹಕಾರಕ್ಷೇತ್ರವನ್ನು ಬೆಳೆಸಿದರೆ ಮಾತ್ರ ಅಭಿವೃದ್ಧಿ ಸಾಧ್ಯಎಂದರು.ಸಹಕಾರ ಕ್ಷೇತ್ರ ಬೆಳೆದಂತೆ ತಂತ್ರಾಂಶ ಸಹಬೆಳೆಯುತ್ತಿದೆ.

Advertisement

ಆದ್ದರಿಂದ ತಂತ್ರಾಂಶದ ಜೊತೆಗೆಸಹಕಾರ ಕ್ಷೇತ್ರವನ್ನು ಬೆಳೆಸಬೇಕು. ತಂತ್ರಜ್ಞಾನಬಳಕೆಯಿಂದ ಗ್ರಾಹಕರಿಗೆ, ರೈತರಿಗೆ ಸದಸ್ಯರಿಗೆಠೇವಣಿದಾರರಿಗೆ ಅತೀ ಶೀಘ್ರದಲ್ಲಿಯೇ ಸ್ಪಂದಿಸಿಅವರ ಸೇವೆಗೆ ಪಾತ್ರರಾಗಬಹುದು ಎಂದುತಿಳಿಸಿದರು.ಕೇಂದ್ರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಬಿ.ಶೇಖರಪ್ಪ ಮಾತನಾಡಿ, ಸಹಕಾರ ಸಂಘಗಳಲ್ಲಿಸಾಲ ವಿತರಣೆ ಮತ್ತು ಸಾಲ ಮರುಪಾವತಿತುಂಬಾ ಕಷ್ಟದ ವಿಷಯವಾಗಿತ್ತು. ಈಗ ಸಹಕಾರಸಂಘಗಳ ಮೂಲಕ ಸಾಲ ವಿತರಣೆ ಮತ್ತು ಸಾಲಮರುಪಾವತಿ ತುಂಬಾ ಸುಲಭವಾಗಿದೆ. ಸಹಕಾರಕ್ಷೇತ್ರದ ಅಭಿವೃದ್ಧಿಯಿಂದ ಮಾತ್ರ ರೈತರ ಆರ್ಥಿಕಪ್ರಗತಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಹಕಾರಬ್ಯಾಂಕ್‌ ಅಧ್ಯಕ್ಷ ಜೆ.ಎಸ್‌. ವೇಣುಗೋಪಾಲರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಫ್ರೂಟ್ಸ್‌ಯೋಜನೆ ಜಾರಿಗೊಳಿಸಿರುವುದರಿಂದ ಕೇಂದ್ರಸಹಕಾರ ಬ್ಯಾಂಕ್‌ಗಳು ಮತ್ತು ಫ್ಯಾಕ್ಸ್‌ಗಳು ರೈತಸದಸ್ಯರ ಎಫ್‌ಐಡಿ ಸಂಖ್ಯೆ, ಭೂದಾಖಲೆಗಳುಮತ್ತು ಸಾಲದ ವಿವರಗಳನ್ನು ತಂತ್ರಾಂಶದಲ್ಲಿಅಳವಡಿಸುತ್ತಿವೆ. ಮುಂದಿನ ಹಂತದಲ್ಲಿ ಅಲ್ಪಾವಧಿಬೆಳೆ ಸಾಲದ ದಾಖಲಾತಿಗಳು ತಾಲೂಕುಕಚೇರಿಗೆ ಹಾಗೂ ಮಧ್ಯಮಾವಧಿ ಕೃಷಿ ಸಾಲದದಾಖಲಾತಿಗಳು ಉಪ ನೋಂದಣಾಧಿಕಾರಿಕಚೇರಿಯಲ್ಲಿ ಆಧಾರವಾಗಲ್ಪಡುತ್ತವೆ.

ಮುಂದಿನಕ್ರಮಕ್ಕಾಗಿ ಸರ್ಕಾರದ ಕಾವೇರಿ ತಂತ್ರಾಂಶಕ್ಕೆಕಳುಹಿಸಲಾಗುವುದು ಎಂದು ತಿಳಿಸಿದರು.ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಬಿ.ವಿ.ಚಂದ್ರಶೇಖರ್‌ ಉದ್ಘಾಟಿಸಿದರು. ಎಚ್‌.ಕೆ.ಪಾಲಾಕ್ಷಪ್ಪ, ಎಚ್‌. ದಿವಾಕರ, ಟಿ.ಜಿ. ಜೀವನ್‌ಪ್ರಕಾಶ್‌, ಸಹಕಾರ ಒಕ್ಕೂಟದ ನಿರ್ದೇಶಕ ಎಸ್‌.ಬಿ. ಶಿವಕುಮಾರ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಸುಶ್ರುತ್‌ ಡಿ. ಶಾಸ್ತ್ರಿ, ಕೇಂದ್ರ ಸಹಕಾರ ಬ್ಯಾಂಕ್‌ಪ್ರಭಾರ ಸಿಇಒ ತಾವರ್ಯ ನಾಯ್ಕ, ಜಿಲ್ಲಾ ಸಹಕಾರಒಕ್ಕೂಟದ ಪ್ರಭಾರ ಸಿಇಒ ಕೆ.ಎಚ್‌. ಸಂತೋಷ್‌ಕುಮಾರ್‌, ವ್ಯವಸ್ಥಾಪಕ ಕೆ.ಎಂ. ಜಗದೀಶ್‌,ವಿ. ರಂಗನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next