Advertisement

ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ನಾಗರಾಜ್‌

04:45 PM Jan 02, 2022 | Team Udayavani |

ದಾವಣಗೆರೆ: ತಾಲೂಕು ಫೋಟೋ ಮತ್ತುವೀಡಿಯೋಗ್ರಾಫರ್ ಸಂಘ, ಜಿಲ್ಲಾ ಅಖೀಲಕರ್ನಾಟಕ ರವಿಚಂದ್ರನ್‌ ಅಭಿಮಾನಿಗಳಸಂಘ,ಕನ್ನಡ ಸಮರ ಸೇನೆ ಸಹಯೋಗದಲ್ಲಿಕನ್ನಡ ರಾಜ್ಯೋತ್ಸವ ಮತ್ತು ಕನಕ ಜಯಂತಿಕಾರ್ಯಕ್ರಮ ಇಲ್ಲಿಯ ವಿನೋಬನಗರದ1ನೇ ಮೇನ್‌ನಲ್ಲಿನ ನರಹರಿ ಶೇಟ್‌ಸಭಾಭವನದ ಹಿಂಭಾಗದಲ್ಲಿರುವ ಕನಕನಿಲಯದಲ್ಲಿ ನಡೆಯಿತು.

Advertisement

ಮಹಾನಗರ ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್‌ ಕನ್ನಡಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿತಾಯಿ, ಕನಕದಾಸರ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡಿದರು. ಪ್ರತಿವರ್ಷಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವಆಚರಿಸುತ್ತ ಬಂದಿದ್ದು, ಕಳೆದೆರಡುವರ್ಷಗಳಿಂದ ಕೋವಿಡ್‌ ಕಾರಣದಿಂದಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನವರ್ಷ ಅದ್ದೂರಿಯಾಗಿ ರಾಜ್ಯೋತ್ಸವಆಚರಿಸುವಂತಾಗಲಿ.

ಈ ಕನ್ನಡರಾಜ್ಯೋತ್ಸವಬರೀ ನವೆಂಬರ್‌ಗೆ ಸೀಮಿತವಾಗದೇ ಅದುನಿತ್ಯೋತ್ಸವ ಆಗಬೇಕು ಎಂದರು.ಕನ್ನಡ ಸಮರ ಸೇನೆ ಮಹಿಳಾ ರಾಜ್ಯಾಧ್ಯಕ್ಷೆದಾûಾಯಣಮ್ಮ ಮಲ್ಲಿಕಾರ್ಜುನಯ್ಯಮಾತನಾಡಿ, ನಮ್ಮ ಕನ್ನಡ ನಾಡು, ನುಡಿಗೆಧಕ್ಕೆ ಬರುವಂತಹ ಘಟನೆಗಳು ನಡೆದರೆನಾವು ಹೋರಾಟಕ್ಕೆ ಸದಾ ಸಿದ್ಧರಿದ್ದೇವೆಎಂದರು.

ತಾಲೂಕು ಫೋಟೋ ಮತ್ತುವೀಡಿಯೋಗ್ರಾಫರ್ ಸಂಘದ ಅಧ್ಯಕ್ಷಎಂ. ಮನು ಅಧ್ಯಕ್ಷತೆ ವಹಿಸಿದ್ದರು.ಬಿಎಸ್‌ಎಫ್‌ ನಿವೃತ್ತ ಯೋಧ ಸುರೇಶ,ಕನ್ನಡ ಸಮರ ಸೇನೆ ರಾಜ್ಯಾಧ್ಯಕ್ಷಕೋಟಿಹಾಳ್‌ ಸಿದ್ದೇಶ, ಬಿ.ಮಂಜುನಾಥ,ಅಮೃತ್‌ ಕಿರಣ್‌, ಗಣೇಶ ಚಿನ್ನಿಕಟ್ಟಿ,ರಾಜಶೇಖರ, ಜಿ. ಮಹಾಲಿಂಗಪ್ಪ,ಪಂಚಾಕ್ಷರಯ್ಯ, ಗಣೇಶ, ಕೆ.ಪಿ.ವಿಜಯಕುಮಾರ, ರಾಮಕುಮಾರ,ಸುವರ್ಣಮ್ಮ ಶಂಕ್ರಯ್ಯ, ದೀಪಾಜೀವರಾಜಯ್ಯ, ಎಂ.ರಾಜೇಶ್ವರಿ ಉಮೇಶ,ನಾಗರತ್ನ ಆನಂದ ಹಾಗೂ ಪದಾಧಿಕಾರಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next