Advertisement

ಈ ವರ್ಷವೂ ಸಂಭ್ರಮಾಚರಣೆಗೆ ಬ್ರೇಕ್‌

02:39 PM Jan 02, 2022 | Team Udayavani |

ದಾವಣಗೆರೆ: ಕೊರೊನಾ, ಓಮಿಕ್ರಾನ್‌ಆತಂಕದಿಂದಾಗಿ ಈ ಬಾರಿ 2022ರಹೊಸವರ್ಷಾಚರಣೆಯ ಖುಷಿಯೂಅಕ್ಷರಶಃ “ಗೃಹಬಂಧನ’ಕ್ಕೊಳಗಾಗಿ ಸಡಗರ,ಸಂಭ್ರಮ ಮರೆಯಾಗಿತ್ತು.ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿವರ್ಷಹೊಸ ವರ್ಷಾಚರಣೆ ವೇಳೆ ಭರ್ಜರಿನೃತ್ಯ, ಬಣ್ಣ ಬಣ್ಣ ಚಿತ್ತಾರದ ಪಟಾಕಿ ಸಿಡಿತ,ವೈವಿಧ್ಯಮಯ ಕೇಕ್‌ಗಳ ಮಾರಾಟ,ಖರೀದಿ, ಶಿಳ್ಳೆ-ಕೇಕೆ ಹಾಗೂ ಕಿಕ್‌ನೊಂದಿಗಿನಮೋಜು-ಮಸ್ತಿ ಮೇಳೈಸುತ್ತಿತ್ತು. ಕೊರೊನಾಕಾಟದಿಂದಾಗಿ ಕಳೆದ ವರ್ಷವೂ ಹೊಸವರ್ಷಾಚರಣೆ ಕಳೆಗುಂದಿತ್ತು.

Advertisement

ಈ ಬಾರಿಯೂಕೊರೊನಾ ಜತೆ ಓಮಿಕ್ರಾನ್‌ ವೈರಸ್‌ನಆತಂಕ ವರ್ಷಾಚರಣೆಯ ಖುಷಿಯನ್ನುಕಿತ್ತುಕೊಂಡಿತ್ತು.ಕೊರೊನಾ ನಿಯಂತ್ರಣಕ್ಕಾಗಿ ರಾತ್ರಿ 10ಗಂಟೆಬಳಿಕ ಕರ್ಫ್ಯೂವಿಧಿಸಿದ್ದರಿಂದ ಬಹುತೇಕಜನರು ತಮ್ಮ ಮನೆಯೊಳಗಿದ್ದುಕೊಂಡೇಮಧ್ಯರಾತ್ರಿ 12 ಗಂಟೆಯಾಗುತ್ತಲೇಮನೆಯವರೊಂದಿಗೆ ಕೇಕ್‌ ಕತ್ತರಿಸಿ ಹೊಸವರ್ಷ 2022ನ್ನು ಸ್ವಾಗತಿಸಿದರು.

ಇನ್ನುಮದ್ಯಪ್ರಿಯರು ಸಾಕಷ್ಟು ಮುಂಚೆಯೇತಮಗೆ ಯೋಗ್ಯ ಎನ್ನಿಸಿದ ಸ §ಳದಲ್ಲಿಮದ್ಯ ದಾಸ್ತಾನು ಮಾಡಿಕೊಟ್ಟುಕೊಂಡುಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ಸೇರಿಮದ್ಯಾರಾಧನೆಯೊಂದಿಗೆ 2021ಕ್ಕೆವಿದಾಯ ಹೇಳಿ 2022ಕ್ಕೆ ತಮ್ಮದೇ ಆದಶೈಲಿಯಲ್ಲಿ ಸ್ವಾಗತ ಕೋರಿದರು.

ರಾತ್ರಿ 10ಗಂಟೆ ಬಳಿಕ ಪೊಲೀಸ್‌ ವಾಹನದ ಸೈರನ್‌ನಡುವೆಯೇ ಹಲವರು ತಾವು ಇ¨ಲ್ಲಿÁ‌ª ುàಸದ್ದು ಗದ್ದಲವಿಲ್ಲದೇ ವರ್ಷಾಚರಣೆಯಖುಷಿ ಸಂಭ್ರಮಿಸಿದರು.ಹೊಸ ವರ್ಷದ ಆರಂಭದ ದಿನವಾದಶನಿವಾರ ಹಲವರು ದೇವಸ್ಥಾನಗಳಿಗೆತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಣ್ಣಬಣ್ಣದ ಉಡುಪುಗಳಲ್ಲಿ ಕಂಗೊಳಿಸಿದರು.ತರಗತಿ ಕೊಠಡಿಗಳನ್ನು ವಿಶೇಷವಾಗಿಸಿಂಗರಿಸಲಾಗಿತ್ತು. ಕೇಕ್‌ ಕತರಿಸ್ತಿ ಸಿಹಿ ವಿತರಿಸಿಶಿಕÒಕ ರ ‌ ು, ಸಹಪಾಠಿಗಳೊಂದಿಗೆ ಶುಭಾಷಯವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next