Advertisement

ಅಖಂಡ ಕರವೇಯಿಂದ ನಾಳೆ ರಾಜ್ಯೋತ್ಸವ

05:25 PM Dec 28, 2021 | Team Udayavani |

ದಾವಣಗೆರೆ: ಅಖಂಡ ಕರ್ನಾಟಕ ರಕ Òಣಾ ವೇದಿಕೆ ವತಿಯಿಂದ66ನೇ ಕನ್ನಡ ರಾಜ್ಯೋತ್ಸವ, ಪುನೀತ್‌ ನಮನ, ನೇತ್ರ ಹಾಗೂದೇಹದಾನ ಅಭಿಯಾನ ಡಿ. 29ರಂದು ದಾವಣಗೆರೆಯಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷಎಸ್‌.ಜಿ. ಸೋಮಶೇಖರ್‌ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ ರಾಜಕುಮಾರ್‌ರವರುನೇತ್ರದಾನ ಮಾಡಿರುವ ಪ್ರೇರಣೆಯಿಂದ ಅನೇಕರು ನೇತ್ರದಾನಕ್ಕೆಮುಂದಾಗಿದ್ದಾರೆ. ಅವರಿಗೆ ಸಹಾಯವಾಗಿ ವಾಸನ್‌ ಐಕೇರ್‌ ಸೆಂಟರ್‌ ಸಹಯೋಗದಲ್ಲಿ ನೇತ್ರದಾನ ಅಭಿಯಾನನಡೆಸಲಾಗುವುದು. 500ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆಮುಂದಾಗಿದ್ದಾರೆ.

Advertisement

ಶಾಲಾ-ಕಾಲೇಜಿನಲ್ಲೂ ನೇತ್ರದಾನಕ್ಕೆ ವೇದಿಕೆಪ್ರೇರಣೆ ನೀಡುವ ಕೆಲಸ ಮಾಡಲಿದೆ ಎಂದರು.ಬುಧವಾರ ಸಂಜೆ 6ಕ್ಕೆ ನಡೆಯುವ 66ನೇ ಕನ್ನಡರಾಜ್ಯೋತ್ಸವ, ಪುನೀತ್‌ ನಮನ, ನೇತ್ರ ಹಾಗೂ ದೇಹದಾನಅಭಿಯಾನ ಕಾರ್ಯಕ್ರಮವನ್ನು ಸಂಸದ ಡಾ| ಜಿ.ಎಂ. ಸಿದ್ದೇಶ್ವರಉದ್ಘಾಟಿಸುವರು. ಶಾಸಕ ಎಸ್‌.ಎ. ರವೀಂದ್ರನಾಥ್‌ ನೇತ್ರದಾನಅಭಿಯಾನಕ್ಕೆ ಚಾಲನೆ ನೀಡುವರು. ವೇದಿಕೆ ರಾಜ್ಯಾಧ್ಯಕ್ಷ, ಮಾಜಿಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಅಧ್ಯಕ್ಷತೆ ವಹಿಸುವರು.

ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ನಗರಪಾಲಿಕೆ ಸದಸ್ಯಜೆ.ಎನ್‌. ಶ್ರೀನಿವಾಸ್‌, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್‌ಜಾಧವ್‌, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಇತರರುಭಾಗವಹಿಸುವರು. ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿಮುರುಘಾ ಶರಣರು ಸಾನ್ನಿಧ್ಯ, ದಾವಣಗೆರೆ ವಿರಕ್ತ ಮಠದಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು.

ಮುಸ್ಲಿಂಧರ್ಮಗುರುಗಳಾದ ಹಜರತ್‌ ಮಹಮ್ಮದ್‌ ಹನೀಫ್‌ ರಜಾ,ಕ್ರೈಸ್ತ ಸಮುದಾಯದ ಆಂತೋಣಿ ನಜರೇಟ್‌ ಇತರರುಪಾಲ್ಗೊಳ್ಳುವರು. ಅಂತಾರಾಷ್ಟ್ರೀಯ ಯೋಗಪಟು, ಹಿರಿಯಪತ್ರಕರ್ತ ಡಾ| ಕೆ. ಜೈಮುನಿ ಮತ್ತು ತಂಡದಿಂದ ವಿಶೇಷ ಯೋಗಪ್ರದರ್ಶನ ನಡೆಯಲಿದೆ. ನೇತ್ರ ಮತ್ತು ದೇಹದಾನ ಆಸಕ್ತರುಮೊ: 99809-05841 ಸಂಪರ್ಕಿಸುವಂತೆ ಮನವಿ ಮಾಡಿದರು.ವೇದಿಕೆಯ ಡಾ| ಕೆ. ಜೈಮುನಿ, ಮೋಹನ್‌, ಎಲ್‌.ದೇವರಾಜ್‌, ಪ್ರದೀಪ್‌ ಕುಮಾರ್‌, ತಾಹೀರ್‌, ಅಜ್ಮತ್‌ ವುಲ್ಲಾ,ಸಿಖಂದರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next