ದಾವಣಗೆರೆ: ಜಗಳೂರು ಏತನೀರಾವರಿ ಯೋಜನೆಯಡಿಕರ್ನಾಟಕ ನೀರಾವರಿ ನಿಗಮದಅಧಿಕಾರಿಗಳು, ಎಂಜಿನಿಯರ್‌ದಾವಣಗೆರೆ ತಾಲೂಕಿನ ಕಕ್ಕರಗೊಳ್ಳಗ್ರಾಮದ ಕೆಲ ಕೃಷಿ ಭೂಮಿ ಮತ್ತುಅನ್ಯ ಸಂಕ್ರಮಣ ಗೊಂಡಿರುವಖಾಲಿ ನಿವೇಶನಗಳಲ್ಲಿ ಅತಿಕ್ರಮಣ,ದಬ್ಟಾಳಿಕೆ ನಡೆಸಿ ಮನಸೋಇಚ್ಛೆಪೈಪ್‌ಲೈನ್ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥ ಎಸ್.ಎನ್.ಮಧುಸೂದನ್ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಮ್ಮ ಸ್ವಂತಜಮೀನಿನಲ್ಲಿ ಪೈಪ್‌ಲೈನ್ ಹಾಕಿರುವಬಗ್ಗೆ ಯಾವುದೇ ಮುನ್ಸೂಚನೆಯನ್ನೇನೀಡಿಲ್ಲ. ಕೈಗೆ ಬಂದ ಬೆಳೆ ಹಾಳುಮಾಡಿದ್ದಾರೆ. ಬದುಗಲ್ಲು ಕಿತ್ತುಹಾಕಿದ್ದಾರೆ. ಈ ಬಗ್ಗೆ ಎಂಜಿನಿಯರ್,ಅಧಿಕಾರಿಗಳನ್ನು ಕೇಳಿದರೆ ಇದುಸರ್ಕಾರಿ ಯೋಜನೆ, ಯಾರಿಗೂಹೇಳಬೇಕಾಗಿಲ್ಲ. ಕೇಳಬೇಕಾಗಿಲ್ಲ.ನಮ್ಮ ಮನಸ್ಸಿಗೆ ಬಂದಂತೆಕೆಲಸ ಮಾಡುತ್ತೇವೆ.
ಜಮೀನುನಿಮ್ಮದಾಗಿದ್ದರೂ ಏನನ್ನೂ ಕೇಳುವಹಕ್ಕು ನಿಮಗಿಲ್ಲ ಎಂದು ದಬ್ಟಾಳಿಕೆಮಾಡಿದ್ದಾರೆಎಂದರು.ಕಕ್ಕರಗೊಳ್ಳ ಗ್ರಾಮದಸರ್ವೇ ನಂಬರ್ 8ರಲ್ಲಿ ಅನ್ಯಸಂಕ್ರಮಣಗೊಂಡಿರುವ 15,19ಮತ್ತು 20 ರಲ್ಲಿ 13 ವರ್ಷಗಳಿಂದಬೆಳೆದಿದ ಮರಗಳನ್ನ ಕಡಿದುಹಾಕಲಾಗಿದೆ. ಅಳತೆ ಕಲ್ಲುನಾಶಪಡಿಸಿ,5+36ಅಡಿಸುತ್ತಳತೆಯಎರಡು ಪೈಪ್ ಅಳವಡಿಸಲಾಗಿದೆ.ಸರ್ವೇ ನಂಬರ್ 87/1 ರಲ್ಲಿ7 ಎಕರೆ ಜಾಗದಲ್ಲಿ ಬೆಳೆದಿದ್ದಟೊಮ್ಯಾಟೋ ಹಾಳು ಮಾಡಿ ಪೈಪ್‌ಲೈನ್ ಹಾಕಲಾಗಿದೆ.
ಜಮೀನುಮಾಲೀಕರಾದವಯೋವೃದ್ಧೆಗೆನೀನುನಮ್ಮನ್ನು ಏನು ಕೇಳುವಂತೆಯೇಇಲ್ಲ. ನಮಗೆ ಹೇಗೆ ಬೇಕೋಹಾಗೆ ಕೆಲಸ ಮಾಡುತ್ತೇವೆ ಎಂದುಎಂಜಿನಿಯರ್‌ಗಳು ಹೇಳಿದ್ದಾರೆ.ರೈತಾಪಿ ವರ್ಗಕ್ಕೆ ನೀರು ಕೊಡುವ53 ಕೆರೆಗಳ ತುಂಬಿಸುವ ಯೋಜನೆಗೆನಮ್ಮ ಆಕ್ಷೇಪಣೆ ಇಲ್ಲವೇ ಇಲ್ಲ.
ಆದರೆಅನುಮೋದಿತ ನಕ್ಷೆಯ ಪ್ರಕಾರಕಾಮಗಾರಿ ಮಾಡದೆ ಸ್ಥಳೀಯರಾಜಕಾರಣಿಗಳ, ಸ್ವಹಿತಾಸಕ್ತಿ,ಅಣತಿಯಂತೆ ನೀರಾವರಿ ನಿಗಮದಎಂಜಿನಿಯರ್, ಗುತ್ತಿಗೆದಾರರುಮಾಡುತ್ತಿರುವ ಕೆಲಸವನ್ನುಕೂಡಲೇ ನಿಲ್ಲಿಸಬೇಕು ಎಂದುಒತ್ತಾಯಿಸಿದರು. ಕೆ. ಮಂಜುನಾಥ್,ಕವಿತಾ, ಎಸ್. ಸುಜಾತ, ರೇಣುಕಮ್ಮಇತರರು ಸುದ್ದಿಗೋಷ್ಠಿಯಲ್ಲಿದ್ದರು