ದಾವಣಗೆರೆ:ಮಳೆಯಿಂದಪೂರ್ಣಪ್ರಮಾಣದಲ್ಲಿಮನೆ ಹಾನಿಗೊಳಗಾದವರು ಎರಡನೇ ಕಂತಿನಪರಿಹಾರ ಪಡೆದು ಮನೆ ಕಟ್ಟಿಕೊಳ್ಳಲು ನಿರಾಸಕ್ತಿತೋರುತ್ತಿದ್ದಾರೆ. ಅಂಥವರಿಗೆ ಮಂಜೂರಾದಮನೆಯನ್ನು ತಾತ್ಕಾಲಿಕವಾಗಿ ರದ್ದುಮಾಡುವುದಾಗಿ ಎಚ್ಚರಿಕೆ ನೀಡಬೇಕು ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿನಡೆಸಿದ ಮಳೆ ಹಾನಿ ಕುರಿತ ವಿಶೇಷ ಸಭೆಯಲ್ಲಿಅವರು ಮಾತನಾಡಿದರು. ಮಳೆಯಿಂದಸಂಪೂರ್ಣ ಹಾಳಾದ ಮನೆಗಳಿಗೆ ಸರ್ಕಾರ ಐದುಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ ಮನೆಬಿದ್ದು ಒಂದು ವರ್ಷ ಕಳೆಯುತ್ತ ಬಂದರೂಅನೇಕರು ಮನೆ ಕಟ್ಟಿಕೊಳ್ಳಲು ಮುಂದೆ ಬಂದಿಲ್ಲ.ಮನೆ ಹಾನಿ ಪರಿಹಾರದ ಮೊದಲ ಕಂತಿನಹಣ 95 ಸಾವಿರ ರೂ. ಪಡೆದುಕೊಂಡು ಮನೆಕಟ್ಟಿಕೊಳ್ಳದೆ ಹಾಗೆಯೇ ಇದ್ದಾರೆ.
ಅವರಿಗೆಲ್ಲಮನೆಯ ಅವಶ್ಯಕತೆ ಇದೆಯೋ ಇಲ್ಲವೋಅಥವಾ ಸರ್ಕಾರವೇ ಮೇಲೆ ಬಿದ್ದು ಮನೆಕಟ್ಟಿಕೊಳ್ಳಲು ಪರಿಹಾರ ನೀಡುತ್ತಿದೆಯೋಎಂದು ಪ್ರಶ್ನಿಸಿದರು. ಮನೆ ಕಟ್ಟಿಕೊಳ್ಳದವರಿಗೆವಿಳಂಬವಾಗಿದ್ದರಿಂದ ತಾತ್ಕಾಲಿಕವಾಗಿ ಮನೆರದ್ದಾಗಿದೆ ಎಂದು ತಿಳಿಸಬೇಕು. ತನ್ಮೂಲಕ ಅವರುತ್ವರಿತವಾಗಿ ಮನೆಕಟ್ಟಿಕೊಳ್ಳಲು ಮುಂದಾಗುವಂತೆಮಾಡಬೇಕು ಎಂದರು.ಮಳೆಯಿಂದ ಜಿÇÉಯ ೆ ಲ್ಲಿ ಸಂಪೂರ್ಣಹಾಳಾದ ಎ ಮತ್ತುಬಿಕೆಟಗರಿಯ ಮನೆಗಳಿಗೆಐದು ಲಕ Ò ರೂ.ವÃಗೆ ೆÖಂತ Öಂತ ವಾಗಿಪರಿಹಾರ ಕೊಡಬಹುದಾಗಿದೆ.
ಆದರೆ ಅನೇಕರುಮನೆ ಕಟ್ಟಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಭಾಗಶಃಹಾನಿಯಾದ ಸಿ ಕೆಟಗರಿಯ 893 ಮನೆಗಳಿದ್ದು,ಇದರಲ್ಲಿ 760ಕ್ಕೂ ಹೆಚ್ಚು ಜನರು ತಲಾ50ಸಾವಿರ ರೂ. ಪರಿಹಾರ ಪಡೆದಿದ್ದಾರೆ. ಇನ್ನೂ127ಜ®ರಿ ಗೆ ಪರಿಹಾರ ನೀvಬೆ àಕಾಗಿದೆ. ಜಿಲ್ಲೆಯಲ್ಲಿಎಂಟು ಮಾನವ ಜೀವ ಹಾನಿ, 17 ಜಾನುವಾರುಜೀವ ಹಾನಿಯಾಗಿದ್ದು ಎಲ್ಲದಕ್ಕೂ ಪರಿಹಾರನೀಡಲಾಗಿದೆ.137 ಕೋಟಿ ರೂ.ಗಳಷ್ಟುಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದ್ದು,ಸರ್ಕಾರದಿಂದ ಪರಿಹಾರ ಬರಬೇಕಾಗಿದೆ ಎಂದುತಿಳಿಸಿದರು