ದಾವಣಗೆರೆ: ಪಂಚಮಸಾಲಿ ಸಮಾಜವನ್ನುಹಿಂದುಳಿದ ವರ್ಗಗಳ ಪಟ್ಟಿ 3ಬಿಯಿಂದ 2ಎಗೆಸೇರಿಸಲು ಮನವಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಮೂರು ದಿನ ಸಮುದಾಯದ ಸಾಮಾಜಿಕಹಾಗೂ ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದುರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವವಿಚಾರದಲ್ಲಿ ಪರ-ವಿರೋಧ ಎರಡೂ ಇದೆ.ಹೀಗಾಗಿ ಈ ಕುರಿತು ಎರಡೂ ವರ್ಗದವರಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು ಈಗಾಗಲೇಒಂದು ಸಭೆಯೂ ಆಗಿದೆ. ಈ ನಡುವೆ ವಾಸಿಸುವಪ್ರದೇಶ, ಕುಲ ಕಸುಬು ಮತ್ತು ಅವರ ಸಾಮಾಜಿಕ,ಆರ್ಥಿಕ ಸ್ಥಿತಿಗತಿ ಅಧ್ಯಯನವನ್ನೂ ಮಾಡಲಾಗುತ್ತಿದೆಎಂದರು.
ಹಿಂದುಳಿದ ವರ್ಗಕ್ಕೆ ಸೇರಿಸಲು ಹಾಗೂ ಒಂದುವರ್ಗದಿಂದ ಇನ್ನೊಂದು ವರ್ಗಕ್ಕೆ ವರ್ಗಾಯಿಸಲು10-15 ಸಮುದಾಯದವರು ಮನವಿ ಸಲ್ಲಿಸಿದ್ದಾರೆ.ಆ ಎಲ್ಲ ಸಮುದಾಯಗಳ ಬಗ್ಗೆ ಜಿಲ್ಲಾವಾರುಭೇಟಿ ನೀಡಿದ ಸಂದರ್ಭದಲ್ಲಿ ಸಮೀಕ್ಷೆಮಾಡಲಾಗುವುದು.ಈಗ ದಾವಣಗೆರೆಯಲ್ಲಿ ಪಂಚಮಸಾಲಿಸಮುದಾಯದವರ ಮನವಿಯಂತೆಸಮೀಕ್ಷೆ ನಡೆಸಲಾಗುತ್ತಿದೆ.
ಇಲ್ಲಿಅವರ ಶೈಕ್ಷಣಿಕ, ಸಾಮಾಜಿಕ ಹಾಗೂಉದ್ಯೋಗದ ಸ್ಥಿತಿಗತಿ ನೋಡಲಾಗುವುದು.ಪಂಚಮಸಾಲಿ ಸಮಾಜಕ್ಕೆ ಸಂಬಂಧಿಸಿ ಇನ್ನೂ9-10 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಬೇಕಾಗಿದೆ. ಅದೇರೀತಿ ರಾಜ್ಯದ ಅನಾಥಾಶ್ರಮಗಳಲ್ಲಿರುವ ಜಾತಿಗೊತ್ತಿಲ್ಲದ ಅನಾಥ ಮಕ್ಕಳನ್ನು ಭೇಟಿ ಮಾಡಿ ಅವರಸೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಿ ಸರ್ಕಾರಕ್ಕೆ ವರದಿಸಲ್ಲಿಸಲಾಗುವುದು ಎಂದು ಹೇಳಿದರು.
ಆಯೋಗದ ಸದಸ್ಯರಾದ, ಕಲ್ಯಾಣಕುಮಾರ್,ರಾಜಶೇಖರ್, ಅರುಣ್‌ಕುಮಾರ್, ಸುವರ್ಣ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು. ಸುದ್ದಿಗೋಷ್ಠಿಬಳಿಕ ಆಯೋಗವು ಜಿಲ್ಲೆಯ ಪಂಚಮಸಾಲಿಸಮಾಜದವರು ವಾಸಿಸುವ ಜಿಲ್ಲೆಯ ವಿವಿಧಪ್ರದೇಶಗಳಿಗೆ ಭೇಟಿ ನೀಡಿ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ ನಡೆಸಿತು ಹಾಗೂವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿಯಾಗಿ ಅನಾಥಮಕ್ಕಳ ಮಾಹಿತಿ ಸಂಗ್ರಹಿಸಿತು.