ದಾವಣಗೆರೆ: ನಿತ್ಯ ಬದುಕಿನಅವಿಭಾಜ್ಯಅಂಗವಾಗಿರುವ ಗಣಿತ ಮತ್ತು ವಿಜ್ಞಾನಶೈಕ್ಷಣಿಕ ಅಧ್ಯಯನಕ್ಕೆ ಮಾತ್ರವೇ ಸೀಮಿತವಾಗದೆ ಭವಿಷ್ಯವನ್ನು ರೂಪಿಸುವಂತಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವೆ(ಆಡಳಿತ) ಪ್ರೊ| ಗಾಯತ್ರಿ ದೇವರಾಜ್‌ಆಶಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯಮತ್ತು ಬೆಂಗಳೂರಿನ ಅಜೀಂ ಪ್ರೇಮ್‌ಜಿವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಮಂಗಳವಾರಹಮ್ಮಿಕೊಂಡಿದ್ದ ಗಣಿತ ಶಿಕ್ಷಣ: ಅಭ್ಯಾಸಗಳು,ನಿರೀಕ್ಷೆಗಳು ಮತ್ತು ಸವಾಲುಗಳು ಹಾಗೂವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕುರಿತ ಮೂರುದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿಅವರು ಮಾತನಾಡಿದರು.
ಗಣಿತ ಹಾಗೂ ವಿಜ್ಞಾನಆಸಕ್ತಿದಾಯಕ ಕಲಿಕೆಯಾದಾಗ ಶಿಕ್ಷಣದ ಉದ್ದೇಶಸಫಲವಾಗುತ್ತದೆ ಎಂದರು.ಎಲ್ಲ ವಿಚಾರಗಳನ್ನೂ ಸೂಕ್ಷ್ಮವಾಗಿಗಮನಿಸುವ ಮಕ್ಕಳ ಕಲಿಕೆಗೆ ಪೂರಕವಾತಾವರಣ ನಿರ್ಮಿಸುವ ಜೊತೆಗೆಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನುಬಳಸಿಕೊಂಡು ಪ್ರಾಯೋಗಿಕವಾಗಿ ಮನವರಿಕೆಮಾಡಿಕೊಡುವುದು ಮುಖ್ಯ. ಕಲಿಕಾಸಕ್ತಿ ಬೆಳೆಸಲುಗಣಿತ ಆಟದಂತಿರಬೇಕು ಹಾಗೂ ವಿಜ್ಞಾನಮನರಂಜನೆಯಿಂದ ಕೂಡಿರಬೇಕು ಎಂದುಸಲಹೆ ನೀಡಿದರು.
ಗಣಿತ ಮತ್ತು ವಿಜ್ಞಾನವನ್ನು ನಿತ್ಯವೂಬಳಸುತ್ತೇವೆ. ಕೆಲವನ್ನು ಅಳವಡಿಸಿಕೊಂಡಿರುತ್ತೇವೆ.ಆದರೆ ಅವು ವಿಜ್ಞಾನ ಎಂಬುದರ ಅರಿವುಇರುವುದಿಲ್ಲ. ವೈಜ್ಞಾನಿಕವಾಗಿಅಧ್ಯಯನಮಾಡುವಾಗ ಸ್ಮೃತಿ ಪಟಲದಲ್ಲಿ ಹರಿದಾಡುತ್ತದೆ.ಅದನ್ನು ಕಲಿಸುವ ಪದ್ಧತಿಯಷ್ಟೇ ಯಾವಶೈಲಿಯಲ್ಲಿ ಪಾಠವನ್ನು ವಿದ್ಯಾರ್ಥಿಗಳಿಗೆಅರ್ಥೈಸುತ್ತೇವೆ ಎಂಬುದು ಮುಖ್ಯವಾಗುತ್ತದೆ.ಕಲಿಕೆ, ಬೋಧನೆ ಮತ್ತು ಅನುಭವ ಆಧಾರಿತಪ್ರಯೋಗಗಳು ಒಂದಕ್ಕೊಂದು ಪೂರಕವಾದಾಗಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯಎಂದು ಅಭಿಪ್ರಾಯಪಟ್ಟರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಅನುವಾದ ಉಪಕ್ರಮ ವಿಭಾಗದ ಸಹನಿರ್ದೇಶಕ ಎಸ್.ವಿ. ಮಂಜುನಾಥ ಮಾತನಾಡಿ,ವಿಜ್ಞಾನ ಮತ್ತು ಗಣಿತ ಅಧ್ಯಯನದ ಬಗ್ಗೆಮಕ್ಕಳಲ್ಲಿರುವ ಹಿಂಜರಿಕೆಯನ್ನು ಹೋಗಲಾಡಿಸಿಕ್ರಿಯಾಶೀಲವಾಗಿ, ಪ್ರಯೋಗಾತ್ಮಕವಾಗಿ ಆಸಕ್ತಿಬೆಳೆಸುವ ಪ್ರಯತ್ನವನ್ನು ಅಜೀಂ ಪ್ರೇಮ್‌ಜಿವಿಶ್ವವಿದ್ಯಾಲಯ ಮಾಡುತ್ತಿದೆ.ಈಗಾಗಲೇರಾಜ್ಯದ 11 ಜಿಲ್ಲೆಗಳಲ್ಲಿ ಪ್ರಾಯೋಗಿಕ, ಸಕಾರಾತ್ಮಕಶಿಕ್ಷಣ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕೆಲಸನಡೆಸುತ್ತಿದೆ ಎಂದು ತಿಳಿಸಿದರು.
ಕಲಾ ನಿಕಾಯದ ಡೀನ್ ಪ್ರೊ| ಕೆ.ಬಿ.ರಾಮಲಿಂಗಪ್ಪ ಮಾತನಾಡಿ, ಗ್ರಾಮೀಣ ಮತ್ತುನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕಲಿಯುವಮತ್ತು ಕಲಿಸುವ ವಿಧಾನಗಳಲ್ಲಿ ವ್ಯತ್ಯಾಸಕಾಣಬಹುದು. ಗ್ರಾಮೀಣ ಭಾಗದ ಮಕ್ಕಳಲ್ಲಿರುವಲೋಪಗಳ ಸರಿಪಡಿಸಿ ಅವರಲ್ಲಿರುವಹಿಂಜರಿಕೆಯನ್ನು ಹೋಗಲಾಡಿಸಬೇಕು.
ಗಣಿತದ ಲೆಕ್ಕವೇ ತಲೆಗೆ ಹತ್ತುವುದಿಲ್ಲ ಎನ್ನುವಆಲೋಚನೆ ಬೆಳೆಸುವ ಬದಲಾಗಿ ಗಣಿತವನ್ನುಹೇಗೆ ಸುಲಭವಾಗಿ ಕಲಿಯಬಹುದುಎಂಬುದನ್ನು ತಾಂತ್ರಿಕವಾಗಿ, ಕೌಶಲಯುಕ್ತವಾಗಿಕಲಿಸುವಂತಾಗಬೇಕು ಎಂದು ತಿಳಿಸಿದರು.ವಾಣಿಜ್ಯ ನಿಕಾಯದ ಡೀನ್ ಪ್ರೊ| ಪಿ. ಲಕ್ಷ್ಮಣ,ಡಾ| ಪ್ರಸನ್ನಕುಮಾರ, ಡಾ| ಕೆ.ಎಂ. ಈಶ್ವರಪ್ಪ,ಡಾ| ಚಂದ್ರಕಾಂತ ನಾಯೊRàಡಿ ಇತರರುಇದ್ದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷಡಾ| ಶಿವಕುಮಾರ ಕಣಸೋಗಿ ನಿರೂಪಿಸಿದರು.ಗಣಿತಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ|ಜಿ.ಡಿ. ಪ್ರಕಾಶ್ ವಂದಿಸಿದರು. ವಿವಿಧ ವಿಷಯಗಳಕುರಿತು ವಿಚಾರ ಮಂಡನೆ ನಡೆಯಿತು.