ದಾವಣಗೆರೆ: ಅಕ್ರಮ ಕಟ್ಟಡ ತೆರವು, ತೆರಿಗೆಡಿಜಿಟಲೀಕರಣ, ಬಿಡಾಡಿ ದನ, ಹಂದಿಗಳ ಹಾವಳಿನಿಯಂತ್ರಣ, ಪ್ಲಾಸ್ಟಿಕ್ ನಿಷೇಧಕ್ಕೆ ಸೂಕ್ತ ಕ್ರಮ…ಇವು ಮಂಗಳವಾರ ಮಹಾನಗರಪಾಲಿಕೆಸಭಾಂಗಣದಲ್ಲಿ ಮೇಯರ್ ಎಸ್.ಟಿ. ವೀರೇಶ್‌ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಅಭಿಪ್ರಾಯಸಂಗ್ರಹ ಮತ್ತು ಸಲಹೆ ಸಭೆಯಲ್ಲಿ ವ್ಯಕ್ತವಾದ ಕೆಲವು ಸಲಹೆಗಳು.
ಜಿಲ್ಲಾ ತೆರಿಗೆ ಸಂಗ್ರಹಗಾರರ ಸಂಘದ ಅಧ್ಯಕ್ಷಜಂಬಗಿ ರಾಧೇಶ್ ಮಾತನಾಡಿ, ರಾಜ್ಯ ಸರ್ಕಾರ ವೃತ್ತಿತೆರಿಗೆ, ನಗರ ಪಾಲಿಕೆಯಿಂದ ಉದ್ಯಮ ಪರವಾನಿಗೆವಸೂಲು ಮಾಡುವುದರಿಂದ ವ್ಯಾಪಾರಸ್ಥರಿಗೆಹೊರೆಯಾಗುತ್ತದೆ.
ವೃತ್ತಿ ತೆರಿಗೆ ತೆಗೆದು ಹಾಕುವನಿಟ್ಟಿನಲ್ಲಿ ಬಜೆಟ್‌ನಲ್ಲಿ ಕ್ರಮ ತೆಗೆದುಕೊಳ್ಳಬೇಕು.ದಂಡ ಹೆಚ್ಚಳದ ಮೂಲಕ ಆದಾಯ ಕ್ರೋಢೀಕರಣಕ್ಕೆಮುಂದಾಗಬೇಕು ಎಂದು ಮನವಿ ಮಾಡಿದರು.ಬಹುತೇಕ ರಸ್ತೆ, ಚರಂಡಿಗಳ ಒತ್ತುವರಿಮಾಡಿಕೊಂಡು ನಿರ್ಮಿಸಲಾಗಿರುವ ಕಟ್ಟಡಗಳನ್ನುಯಾವುದೇ ಮುಲಾಜಿಲ್ಲದೆ ಹೊಡೆದು ಹಾಕಿ ರಸ್ತೆ,ಚರಂಡಿ ತೆರವು ಮಾಡಬೇಕು. ಸಿಮೆಂಟ್ ರಸ್ತೆ ಮಾಡಿಮತ್ತೆ ಅದೇ ರಸ್ತೆಯನ್ನು ಹೊಡೆದು ರಸ್ತೆ ನಿರ್ಮಿಸುವಮೂಲಕ ವ್ಯಯ ಮಾಡುವುದನ್ನು ತಪ್ಪಿಸಬೇಕುಎಂದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ,ಶಕ್ತಿ ಇರುವಂತವರು, ರಾಜಕೀಯವಾಗಿಪ್ರಬಲವಾಗಿರುವವರು ವೇದಿಕೆ ಮೇಲೆ ಕುಳಿತುಭಾಷಣ ಮಾಡುವಂತಹ ಬುದ್ಧಿವಂತ ನಾಗರಿಕರೇರಸ್ತೆ, ಚರಂಡಿಗಳ ಒತ್ತುವರಿ ಮೇಲೆ ಕಟ್ಟಡನಿರ್ಮಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.ಎಲ್ಲದ್ದನ್ನೂ ಕಾನೂನಿನ ಮೂಲಕವೇ ಮಾಡುವುದಕ್ಕೆಆಗುವುದಿಲ್ಲ.
ಪ್ರತಿಯೊಬ್ಬರು ನಾಗರಿಕ ಪ್ರಜ್ಞೆಯನ್ನುಬೆಳೆಸಿಕೊಳ್ಳಬೇಕು. ವೃತ್ತಿ ತೆರಿಗೆ ವಿನಾಯತಿಗೆಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದು ಕ್ರಮತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ನಗರಪಾಲಿಕೆ ಮುಖ್ಯ ಆಡಳಿತಾಧಿಕಾರಿಪ್ರಶಾಂತ್ ನಾಯಕ್, ತೆರಿಗೆ ಡಿಜಿಟಿಲೀಕರಣಕ್ಕೆಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಸಾರ್ವಜನಿಕರುಮನೆಯಲ್ಲೇ ಕುಳಿತು ತೆರಿಗೆ ಕಟ್ಟುವ ವ್ಯವಸ್ಥೆಮಾಡುತ್ತೇವೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಇಂಗಳೇಶ್ವರ ಮಾತನಾಡಿ,ವಾರ್ಡ್ ವ್ಯಾಪ್ತಿ ಸಾರ್ವಜನಿಕರ ಸಭೆ ಮಾಡಿದರೆನಗರಾಭಿವೃದ್ಧಿಗೆ ಬೇಕಾದ ಸಲಹೆ ಪಡೆಯಬಹುದು.ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ರಾಜ ಕಾಲುವೆಮೇಲೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಟ್ಟಿರುವಬಗ್ಗೆ ಸಾಕಷ್ಟು ಬಾರಿ ದೂರು ಕೊಟ್ಟರೂ ಯಾವುದೇಪ್ರಯೋಜನವಾಗಿಲ್ಲ. ಕೂಡಲೇ ತೆರವುಗೊಳಿಸುವಕೆಲಸ ಮಾಡಬೇಕು.
ಆಯಾ ವಾರ್ಡ್‌ನ ಬಡವಿದ್ಯಾರ್ಥಿಗಳಿಗೆ ಸೋಲಾರ್ ದೀಪ ಕೊಡಲುಬರುವ ಬಜೆಟ್‌ನಲ್ಲಿ ಸೇರಿಸಬೇಕು ಎಂದು ಮನವಿಮಾಡಿದರು. ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟಅನುದಾನ ಸಮರ್ಪಕವಾಗಿ ವಿನಿಯೋಗವಾಗಬೇಕುಎಂದು ಸೋಮಲಾಪುರ ಹನುಮಂತಪ್ಪಒತ್ತಾಯಿಸಿದರು.¬ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ,45 ವಾರ್ಡ್‌ಗಳಲ್ಲಿ ಗ್ರಂಥಾಲಯಕ್ಕೆ ಹಲವಾರುಬಾರಿ ಮನವಿ ಮಾಡಲಾಗಿದೆ.
ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಬಜೆಟ್‌ನಲ್ಲಿ ಸೇರಿಸಬೇಕು ಎಂದುಪತ್ರಕರ್ತ ವೀರಪ್ಪ ಎಂ. ಭಾವಿ ಮನವಿ ಮಾಡಿದರು.ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ,ಡಿ.23ರಂದು ಸಂಜೆ 4:30ಕ್ಕೆ ಈ ಬಗ್ಗೆ ಸಭೆ ಕರೆದುನಿರ್ಧಾರ ತೆಗೆದುಕೊಳ್ಳಲಾಗುವುದು ಎಂದುತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಇತರರು ಇದ್ದರು.