ದಾವಣಗೆರೆ: ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್‌ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಆವರಣದಲ್ಲಿ ಮೇಯರ್ ಎಸ್.ಟಿ.ವೀರೇಶ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಚಿತ್ರದುರ್ಗಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಭರ್ಜರಿಗೆಲುವು ಸಾಧಿಸಿದ್ದಾರೆ. ಅವರ ಗೆಲುವಿಗೆ ಸಹಕರಿಸಿದಮತದಾರರು, ಸಂಸದರು, ಶಾಸಕರು, ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಪ್ರತಿಯೊಬ್ಬರಿಗೆ ತುಂಬುಹೃದಯದ ಧನ್ಯವಾದಗಳು. ಬಿಜೆಪಿ ಗೆಲುವಿಗೆ ಸರ್ವರ ಶ್ರಮಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿದ ಕುತಂತ್ರಕ್ಕೆ ಪ್ರಜ್ಞಾವಂತ ಮತದಾರರು ತಕ್ಕ ಉತ್ತರವನ್ನೇ ನೀಡಿದ್ದಾರೆ. ನಮ್ಮ ಮತಗಳು ಮಾರಾಟಕ್ಕೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಎಲ್ಲಿಯವರೋ,ಯಾರೋ ಒಟ್ಟಾರೆ ಹಣವಂತರನ್ನು ನಿಲ್ಲಿಸಿದರೆ ಗೆಲ್ಲುತ್ತಾರೆಎಂಬ ಕಾಂಗ್ರೆಸ್‌ನವರ ಕೆಟ್ಟ, ದುಷ್ಟ ಸಂಸ್ಕೃತಿಗೆ ಮತದಾರರುಇತಿಶ್ರೀ ಹಾಡಿದ್ದಾರೆ ಎಂದು ತಿಳಿಸಿದರು.ಕಳೆದ ಎರಡು ಬಾರಿ ಗೆದ್ದಿದ್ದ ರಘು ಆಚಾರ್ ಅಭಿವೃದ್ಧಿಕೆಲಸ ಮಾಡುವುದಿರಲಿ, ಕ್ಷೇತ್ರಕ್ಕೂ ಭೇಟಿ ನೀಡುತ್ತಿರಲಿಲ್ಲ.ಯಾರೂ ಅವರನ್ನು ಭೇಟಿ ಮಾಡಲು ಆಗುತ್ತಿರಲಿಲ್ಲ. ಈಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್‌ನವರು ಚಿತ್ರದುರ್ಗ,ದಾವಣಗೆರೆ ಕ್ಷೇತ್ರದ ಪರಿಚಯವೇ ಇಲ್ಲದವರನ್ನು ಹಣ ಇದೆ ಎಂಬ ಕಾರಣಕ್ಕೆ ಕರೆ ತಂದು ನಿಲ್ಲಿಸಿದ್ದರು.
ಬಿಜೆಪಿಯ ಜನಪ್ರತಿನಿಧಿಗಳು, ಅಭಿಮಾನಿಗಳು, ಕಾರ್ಯಕರ್ತರ ಪ್ರಾಮಾಣಿಕಕೆಲಸದ ಫಲವಾಗಿ ಕೆ.ಎಸ್. ನವೀನ್ 358 ಮತಗಳಅಂತರದಲ್ಲಿ ಜಯ ಸಾಧಿಸಿದ್ದಾರೆ ಎಂದರು. ಉಪ ಮೇಯರ್ ಎಚ್.ಆರ್. ಶಿಲ್ಪಾ ಜಯಪ್ರಕಾಶ್,ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್, ಎಲ್.ಡಿ.ಗೋಣೆಪ್ಪ, ಸದಸ್ಯರಾದ ಕೆ. ಪ್ರಸನ್ನಕುಮಾರ್, ಆರ್.ಶಿವಾನಂದ, ಸೋಗಿ ಶಾಂತಕುಮಾರ್, ಕೆ.ಎಂ. ವೀರೇಶ್, ಗೀತಾದಿಳೆÂಪ್ಪ, ಯಶೋಧಾ ಹೆಗ್ಗಪ್ಪ, ಸೌಮ್ಯ ನರೇಂದ್ರಕುಮಾರ್,ಗೌರಮ್ಮ, ಮುಖಂಡರಾದ ಜಯಪ್ರಕಾಶ, ಎಲ್.ಎನ್.ಕಲ್ಲಪ್ಪ, ಮೃತ್ಯುಂಜಯ ಇತರರು ಇದ್ದರು.